ಚರ್ಮಕ್ಕೆ ನಿರ್ದಿಷ್ಟ ಕ್ರೀಂ ಅಂತೇನೂ ಬಳಸುವುದಿಲ್ಲ. ಶೂಟಿಂಗ್ ಅಥವಾ ನೃತ್ಯ ಕಾರ್ಯಕ್ರಮಗಳಿಗಾಗಿ ಮೇಕಪ್ ಹಾಕಿದ್ದಾಗ, ಬಳಿಕ ಕೊಬ್ಬರಿಎಣ್ಣೆಯಿಂದ ಅದನ್ನು ಸಂಪೂರ್ಣವಾಗಿ ತೆಗೆಯುತ್ತೇನೆ. ನನ್ನದು ಸಾಮಾನ್ಯ ಮತ್ತು ಒಣಚರ್ಮ ಆಗಿರುವುದರಿಂದ ಕೊಬ್ಬರಿಎಣ್ಣೆ ನನಗೆ ಉತ್ತಮ ಆಯ್ಕೆಯಾಗಿ ಒದಗಿಬಂದಿದೆ.

ಇನ್ನು ಕೂದಲಿಗೂ ಕೊಬ್ಬರಿಎಣ್ಣೆ ಹಚ್ಚುತ್ತೇನೆ. ಹಚ್ಚಿದ ಕೂಡಲೇ ಸ್ನಾನ ಮಾಡುವುದಿಲ್ಲ. ಬುಡದಿಂದ ತುದಿಯವರೆಗೆ ಉಗುರು ಬೆಚ್ಚಗಿನ ಕೊಬ್ಬರಿಎಣ್ಣೆ ಹಚ್ಚಿ ಸುಮಾರು ಎಂಟು ಗಂಟೆ ಹಾಗೇ ಬಿಡುತ್ತೇನೆ. ನಂತರ ಸ್ನಾನ ಮಾಡುತ್ತೇನೆ. ಊರಿಗೆ ಹೋದಾಗ, ದಾಸವಾಳದ ಎಲೆಗಳನ್ನು ಹಾಕಿ ಕುದಿಸಿದ ಎಣ್ಣೆಯಿದ್ದರೆ, ಅದನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚುತ್ತೇನೆ.

ಮೊದಲಿಗೆ ನಿಮಗಿರುವ ಚರ್ಮ ಮತ್ತು ಕೂದಲು ಎಂಥದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಎಲ್ಲರಿಗೂ ಒಂದೇ ರೀತಿಯ ಆರೈಕೆ ಒಗ್ಗದು. ಬಾಲ್ಯದಿಂದಲೂ ಏನು ಬಳಸಿರುತ್ತಿರೋ ಅವುಗಳ ಕಡೆಗೆ ಹೆಚ್ಚು ಒಲವು ಇಟ್ಟುಕೊಳ್ಳುವುದು ಒಳ್ಳೆಯದು. ಹೊಸ ಪ್ರಯತ್ನ ಮಾಡುವುದಕ್ಕಿಂತ ನಿಮ್ಮ ಚರ್ಮ ಹಾಗೂ ಕೂದಲಿಗೆ ಏನು ಉತ್ತಮ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.

ಸೌಂದರ್ಯ ಎಂಬುದು ಮನಸ್ಸನ್ನು ಎಷ್ಟು ಖುಷಿಯಾಗಿ ಇಟ್ಟುಕೊಳ್ಳುತ್ತೇವೆ ಎನ್ನುವುದರ ಮೇಲೂ ನಿರ್ಧಾರವಾಗುತ್ತದೆ. ಮನಸ್ಸು ಖುಷಿಯಾಗಿದ್ದರೆ ಉಳಿದೆಲ್ಲ ಸವಾಲುಗಳನ್ನೂ ಸರಾಗವಾಗಿ ಎದುರಿಸಬಹುದು. ನಾನಂತೂ ಪ್ರತಿಕ್ಷಣವನ್ನು ಆಸ್ವಾದಿಸುವುದರಲ್ಲೂ ಖುಷಿಯನ್ನು ಕಂಡುಕೊಳ್ಳುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.