ಫ್ಯಾಷನ್ ಜಗತ್ತಿನಲ್ಲಿ ಅನೇಕ ವಿಧದ ಉಡುಗೆಗಳು ಮಹಿಳೆಯರನ್ನು ಸೆಳೆಯುತ್ತಿವೆ. ಅದರಲ್ಲೂ ಇತ್ತೀಚೆಗೆ ಫ್ಲೋರಲ್ ಡ್ರೆಸ್ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿವೆ. ಎಲ್ಲಾ ವಯಸ್ಸಿನವರು ಧರಿಸಬಹುದಾದ ಫ್ಲೋರಲ್ ಉಡುಪಿನ ಬಗ್ಗೆ ಇಲ್ಲಿದೆ ಮಾಹಿತಿ.

ಫ್ಲೋರಲ್ ಡ್ರೆಸ್ ವಿಶೇಷತೆ

ಫ್ಲೋರಲ್ ಡ್ರೆಸ್ ಮೃದುವಾಗಿದ್ದು ಧರಿಸಲು ಸೂಕ್ತವಾಗಿರುತ್ತವೆ. ಸಿನಿ ತಾರೆಯರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಈ ಉಡುಗೆಯನ್ನು ಇಷ್ಟ ಪಡುತ್ತಾರೆ.

ಈ ಉಡುಪನ್ನು ಬೆಲ್ಟ್, ಜೇಬು, ಸ್ಲಿವ್ ಲೆಸ್, ವಿಥ್ ಸ್ಲಿವ್ಗಳಿಂದ ವಿನ್ಯಾಸ ಮಾಡಲಾಗಿದೆ.

ಈ ಫ್ಲೋರಲ್ ಡ್ರೆಸ್ ಪಾರ್ಟಿಗಳಿಗೆ ಧರಿಸಲು ಸೂಕ್ತವಾಗಿರುತ್ತದೆ.

ಈ ವಿಶಿಷ್ಟ ಉಡುಗೆಯನ್ನು ಧರಿಸಿದಾಗ ಮಹಿಳೆಯರು ಪಾಲಿಸಬೇಕಾದ ಸಲಹೆಗಳಿವು.

ಎತ್ತರ ಇರುವ ಯುವತಿಯರು ಫ್ಲಾಟ್ ಚಪ್ಪಲಿಗಳನ್ನು, ಕುಳ್ಳಗಿರುವ ಹುಡುಗಿಯರು ಸ್ವಲ್ಪ ಹೀಲ್ಡ್ ಚಪ್ಪಲಿಗಳನ್ನು ಧರಿಸುವುದು, ಕೈಗಳಿಗೆ ಸಿಂಪಲ್ ಬ್ರಾಸ್ಲೆಟ್, ಹಣೆಗೆ ಗೋಲ್ಡನ್ ಬಣ್ಣದ ಸಣ್ಣ ಸ್ಟಿಕರ್ ಇಡುವುದರಿಂದ ಇನ್ನಷ್ಟು ಸುಂದರವಾಗಿ ಕಾಣಬಹುದು.

ಈ ಫ್ಲೋರಲ್ ಉಡುಗೆಯ ಬೆಲೆ ಕನಿಷ್ಠ ₹300 ರಿಂದ ಆರಂಭವಾಗಿ ಲಕ್ಷದವರೆಗೂ ಲಭ್ಯವಿರುತ್ತದೆ.

ಇತ್ತೀಚೆಗೆ ಜಾನ್ವಿ ಕಪೂರ್, ಕರೀನಾ ಕಪೂರ್, ತಮನ್ನಾ ಸೇರಿದಂತೆ ಅನೇಕರು ಈ ಉಡುಗೆಯನ್ನು ಧರಿಸಿ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.