ಬಾಲಿವುಡ್ ಸೂಪರ್ಸ್ಟಾರ್ ಕಂಗನಾ ರನೌತ್ ಪರದೆಯ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಅಷ್ಟೇ ರಿಚ್, ಎಲಿಗೆಂಟ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಹೊರತುಪಡಿಸಿ ದೈನಂದಿನ ಜೀವನದಲ್ಲಿ ಅವರು ತೊಡುವ ಉಡುಪುಗಳು ಸಖತ್ ಸದ್ದು ಮಾಡುತ್ತವೆ. ಅದರಲ್ಲೂ ಅವರು ಉಡುವ ಸೀರೆಗಳು ಯುವತಿಯರನ್ನು ಸೆಳೆಯುತ್ತವೆ. ಏಕೆ ಗೊತ್ತಾ?. ಅವರು ಸೀರೆಯನ್ನು ಸ್ಟೈಲ್ ಮಾಡುವ ರೀತಿ ವಿಭಿನ್ನ. ಆದರಲ್ಲೂ ಪಾರ್ಲಿಮೆಂಟ್ಗೆ ಹೋಗುವ ವೇಳೆ ಕಂಗನಾ ಧರಿಸುವ ಸೀರೆ ಶೈಲಿ ಅದ್ಭುತ. ಸಾಂಪ್ರದಾಯಿಕ ಸೀರೆಗಳಿಗೆ ಮಾರ್ಡನ್ ಬ್ಲೌಸ್ ತೊಟ್ಟು ಕಾಣಿಸಿಕೊಳ್ಳುವುದು ಇನ್ನಷ್ಟು ಚೆಂದವಾಗಿ ಕಾಣುವಂತೆ ಮಾಡುತ್ತದೆ. ಹಾಗಂತ ಅವರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಕ್ಲಾಸಿಕ್ ಆಗಿ ಕಾಣಿಸಿಕೊಳ್ಳುತ್ತಾರೆ. ವಿಭಿನ್ನವಾಗಿ ಸೀರೆ ಉಡಬೇಕು, ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕೆನ್ನುವ ಯುವತಿಯರಿಗೆ ಕಂಗನಾ ಸೀರೆ ಸ್ಟೇಟ್ಮೆಂಟ್ ಅನುಕರಣೀಯ ಎಂದರೆ ತಪ್ಪಾಗಲಾರದು.

ಕಂಗನಾ ವಿಭಿನ್ನ ಶೈಲಿಯಲ್ಲಿ ಸೀರೆ ಉಡುವ ಬಗ್ಗೆ ನೋಡುವುದಾದರೆ,

ಸೀರೆಗಳ ಆಯ್ಕೆ:

ಕಂಗನಾ ಸಾಮಾನ್ಯವಾಗಿ ಕೈಮಗ್ಗದ ಸೀರೆಗಳು, ಸಾಫ್ಟ್ ಸಿಲ್ಕ್, ಮಲ್ ಕಾಟನ್ನಂತಹ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಡುಗೆಂಪು, ಕಪ್ಪು, ಹಸಿರು, ಆಕಾಶ ನೀಲಿ ಹೀಗೆ ಗಾಢ ಬಣ್ಣದ ಜತೆ ಸಾಫ್ಟ್, ಲೈಟ್ ಕಲರ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಅವರ ಲುಕ್ ಎಲಿಗೆಂಟ್ಆಗಿ ಕಾಣುತ್ತದೆ. ಯಾವುದೇ ಅತಿಯಾದ ಡಿಸೈನ್ಗಳನ್ನು ಹೊಂದಿರದ ಸಿಂಪಲ್ ಸೀರೆಗಳನ್ನು ಉಡುವುದು ಕಂಗನಾ ಸೀರೆ ಆಯ್ಕೆ ಮಾಡಿಕೊಳ್ಳುವ ಗುಟ್ಟು ಎನ್ನಬಹುದು.

ಮಾರ್ಡನ್ ಸೀರೆಗಳ ಯುಗದಲ್ಲಿ ನಟಿಯೊಬ್ಬರು ಸಾಂಪ್ರದಾಯಿಕ ಸೀರೆಗಳ ಆಯ್ಕೆ ಮಾಡುತ್ತಿರುವುದು ಜನರ ಗಮನ ಸೆಳೆಯುತ್ತದೆ.

ವಿಭಿನ್ನ ಬ್ಲೌಸ್ ಡಿಸೈನ್

ಕಂಗನಾ ಲುಕ್ಗೆ ಸಾಥ್ ನೀಡುವುದು ಈ ಬ್ಲೌಸ್ ಡಿಸೈನ್ಗಳೇ. ಏಕೆಂದರೆ ಸೀರೆ ಸಿಂಪಲ್ ಆಗಿದ್ದರೂ ಅಷ್ಟೊಂದು ಎಲಿಗೆಂಟ್ ಲುಕ್ ನೀಡುವುದು ಈ ಬ್ಲೌಸ್ಗಳ ಡಿಸೈನ್ಗಳೇ. ಹಾಗಂತ ತುಂಬಾ ಡಿಸೈನ್ ಬ್ಲೌಸ್ನಲ್ಲಿ ಇರುವುದಿಲ್ಲ. ಕಾಲಕ್ಕೆ ತಕ್ಕಂತೆ ಮಾರ್ಡನ್ ಶೈಲಿಯ ಬ್ಲೌಸ್ ಡಿಸೈನ್ಗಳನ್ನು ಬಳಸುವ ಅವರು, ಗ್ಲಾಮರಸ್ ಆಗಿ ಕಾಣಿಸುವುದಿಲ್ಲ. ಫುಲ್ ನೆಕ್, ಫುಲ್ ಸ್ಲೀವ್, ವಿ ನೆಕ್, ಬ್ಲೌಸ್ನ ಹಿಂಭಾಗದಲ್ಲಿ ಜಾಸ್ತಿ ಡೀಪ್ ಇರುವುದಿಲ್ಲ.

ಸೀರೆಯ ಜತೆಗೆ ಮೇಕಪ್ ಕೂಡ ಸಿಂಪಲ್. ಕಂಗನಾ ನೋ ಮೇಕಪ್ ಲುಕ್ ಹಾಗೂ ಲೈಟ್ ಬಣ್ಣದ ಲಿಪ್ಸ್ಟಿಕ್ಗಳನ್ನು ಬಳಸುವುದರಿಂದ ಆಕೆಯ ಲುಕ್ ರಿಚ್ಆಗಿ ಕಾಣುತ್ತದೆ. ಸೆಲಿಬ್ರಿಟಿಗಳು ಅಷ್ಟೇ ನೋ ಮೇಕಪ್ ಲುಕ್ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಪಾರ್ಲಿಮೆಂಟ್ಗೆ ಬರುವ ಕಂಗನಾ ವಿಭಿನ್ನ ಬನ್ ಹೇರ್ ಸ್ಟೈಲ್, ಸಿಂಪಲ್ ಆಭರಣಗಳನ್ನು ತೊಟ್ಟು ಬರುತ್ತಾರೆ. ಹೀಗಾಗಿಯೇ ಯುವತಿಯರು ಕಂಗಾನ ಸೀರೆ ಸ್ಟೈಲ್ ಅನ್ನು ರೀಕ್ರಿಯೇಟ್ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಇನ್ಸ್ಟಾಗ್ರಾಮ್ಗಳ ರೀಲ್ಸ್ಗಳಲ್ಲಿ ಇದು ಸಹ ಟ್ರೆಂಡಿಂಗ್.

ಸೀರೆ+ಬ್ಲೌಸ್+ ಕೋಟ್

ಸೀರೆಯ ಅಂದ ಹೆಚ್ಚಿಸಲು, ತಮ್ಮದೇ ಆದ ಹೊಸ ಸ್ಟೈಲ್ ಸೃಷ್ಟಿಸಲು ಕಂಗನಾ ಸೀರೆ ಮತ್ತು ಬ್ಲೌಸ್ ಜತೆಗೆ ಒವರ್ ಕೋಟ್ಗಳನ್ನು ಬಳಸುತ್ತಾರೆ. ಇದೇ ಆಕೆಯ ಸ್ಟೈಲ್ ಸ್ಟೇಟ್ಮೆಂಟ್ನ ಕೇಂದ್ರ ಬಿಂದು. ಇದು ಸಾಂಪ್ರದಾಯಿಕ ಲುಕ್ಗೆ ಮಾರ್ಡನ್ ಸ್ಪರ್ಶ ನೀಡುತ್ತದೆ. ಇದಕ್ಕೆ ಬೆಲ್ಟ್, ಸರಿ ಹೊಂದುವ ಆಭರಣಗಳು ಮತ್ತಷ್ಟು ಎಲಿಗೆಂಟ್ ಆಗಿ ಕಾಣಿಸಲು ಸಹಾಯ ಮಾಡುತ್ತದೆ.

ಕಂಗನಾ ರೀತಿ ಸೀರೆ ಉಡಬೇಕೆ ಇಲ್ಲಿದೆ ಸಿಂಪಲ್ ಟಿಪ್ಸ್

* ಮೊದಲು ನಿಮ್ಮ ಚರ್ಮದ ಬಣ್ಣಕ್ಕೆ ಸರಿ ಹೊಂದುವ ಸೀರೆ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ.

* ಸೀರೆ ಆಯ್ಕೆ ವೇಳೆ ಮಲ್ ಕಾಟನ್ ಅಥವಾ ಕೈಮಗ್ಗ ಸೀರೆಗಳನ್ನೇ ಆಯ್ದುಕೊಳ್ಳಿ.

* ಯಾವುದೇ ಡಿಸೈನರ್ ಬ್ಲೌಸ್ ಅಥವಾ ಸೀರೆ ಬೇಡ.

* ಬ್ಲೌಸ್ ಡಿಸೈನ್ ಸಿಂಪಲ್ ಆಗಿ ಇದ್ದರೆ ಹೆಚ್ಚು ಎಲಿಗೆಂಟ್ ಆಗಿ ಕಾಣಿಸುತ್ತದೆ.

*ಸೀರೆ, ಬ್ಲೌಸ್ ಜತೆಗೆ ಒವರ್ ಕೋಟ್ ಬಳಸುವುದನ್ನು ಮರೆಯಬೇಡಿ, ಇದೇ ಕಂಗನಾ ಸ್ಟೈಲ್ ಸ್ಟೇಟ್ಮೆಂಟ್.

* ಮೇಕಪ್ ಅಂದರೆ, ಫೌಂಡೇಶನ್ ಸಿಂಪಲ್ ಆಗಿ ಇರಲಿ, ಅಥವಾ ಬಿಬಿ ಕ್ರೀಮ್ಗಳ ಬಳಕೆ ಉತ್ತಮ. ಲಿಪ್ಸ್ಟಿಕ್ ಲೈಟ್ ಶೇಡ್ನಲ್ಲಿ ಇರಲಿ.

* ಒವರ್ ಕೋಟ್ ಅಥವಾ ಸ್ವೆಟರ್ ಮೇಲೆ ಸೀರೆಯ ಸೆರಗು ಅಥವಾ ಪಲ್ಲು ಹಾಕಿಕೊಳ್ಳಿ, ಹೆಚ್ಚು ಸೆರಗಿನ ಪ್ಲೀಟ್ ಬೇಡ. ಕಡಿಮೆ ಇದ್ದರೆ ಚೆಂದ.

* ಸೀರೆಗೆ ಹೊಂದುವ ರೀತಿ ಸಿಂಪಲ್ ಆಭರಣ ಧರಿಸಿ.

ಕಂಗನಾ ಸೀರೆ ಸ್ಟೇಟ್ಮೇಂಟ್ ಅಂದರೆ ಆಕೆಯ ಆತ್ಮವಿಶ್ವಾಸವೇ ಹೊರತು ಬೇರೆನಲ್ಲ. ಹೀಗಾಗಿ ಸೀರೆ ಉಡುವ ಶೈಲಿ ಯಾವುದೇ ಆಗಿರಲಿ ಆತ್ಮವಿಶ್ವಾಸ ಬಹಳ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.