ಕನಸುಗಳೇ ಹುಟ್ಟದ ಕೊಳಗೇರಿ ಊರದು... ಮುಂಬೈನ ಧಾರಾವಿ ಎಂದರೆ ಎಲ್ಲರ ಕಣ್ಣೆದುರು ಬರುವುದು ಜೋಡಿಸಿಟ್ಟ ಜೋಪಡಿಯೊಳಗಿನ ಬದುಕು...ಕುಡಿಯಲು, ಸ್ನಾನಕ್ಕೆ, ಶೌಚಕ್ಕೆ ನೀರಿಲ್ಲದ ಗಲ್ಲಿಯಲ್ಲಿ ಹುಡುಗಿಯೊಬ್ಬಳ ಕನಸಿಗೆ ರೆಕ್ಕೆ ಬಲಿತದ್ದೆ ಒಂದು ಅಚ್ಚರಿಯ ಕಥೆ...

ಅದು 2020, ಹಾಲಿವುಡ್ ಖ್ಯಾತನಟ ರಾಬರ್ಟ್ ಹಾಫ್ಮನ್ ಮುಂಬೈನ ಧಾರಾವಿಗೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿನ ಮಕ್ಕಳೊಂದಿಗೆ ಕುತೂಹಲದಿಂದ ಮಾತನಾಡಿದ್ದರು. ಅಲ್ಲಿಗೆ ಹಳದಿ ಬಣ್ಣದ ಪ್ಲ್ಯಾಸ್ಟಿಕ್ ಕ್ಯಾನ್ವೊಂದರಲ್ಲಿ ನೀರು ತುಂಬಿಸಿ ಹೊತ್ತುಕೊಂಡು ಬರುತ್ತಿದ್ದ ಹುಡುಗಿಯೊಬ್ಬಳು ರಾಬರ್ಟ್ ಅವರ ಕಣ್ಣಿಗೆ ಬೀಳುತ್ತಾಳೆ. ಆಕೆಯನ್ನು ಮಾತಿಗೆಳೆದಾಗ ಅವಳ ಕನಸಿನ ಬಗ್ಗೆ ತಿಳಿದು ನಟನಿಗೆ ಅಚ್ಚರಿಯೂ ಸಂತೋಷವೂ ಆಗುತ್ತದೆ. ರೂಪದರ್ಶಿ ಆಗಬೇಕೆಂಬುವುದು ತನ್ನ ಕನಸು ಎಂದಿದ್ದಳು ಆಕೆ. ಅವಳ ಕನಸಿಗೆ ಕೈಜೋಡಿಸುವ ಉದ್ದೇಶದಿಂದ ಆಕೆಯ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದು ನಿಧಿ ಸಂಗ್ರಹಿಸಲು ಮನವಿ ಮಾಡುತ್ತಾರೆ.

ಈ ಪ್ರಸಂಗ ನಡೆದು ಐದು ವರ್ಷಗಳು ಕಳೆದಿವೆ. ಇದೀಗ ಆ ಹುಡುಗಿ ಭಾರತದ ಟಾಪ್ ಮಾಡೆಲ್ಗಳಲ್ಲಿ ಒಬ್ಬರು. ವೋಗ್, ಕಾಸ್ಮೊಪೊಲಿಟನ್, ಪಿಕಾಕ್, ಫಾರೆಸ್ಟ್ ಎಸೆನ್ಶಿಯಲ್ ಮುಂತಾದ ಪ್ರತಿಷ್ಠಿತ ಮ್ಯಾಗಜಿನ್ಗಳ ಮುಖಪುಟದಲ್ಲಿ ಮೂಡಿ ಬಂದ ಅವಳ ಚಿತ್ರಗಳು ಬೆರಗು ಮೂಡಿಸಿವೆ. ಆಕೆಯ ಹೆಸರೇ ಮಲೀಶಾ ಕಾರ್ವಾ.

‘ಸ್ಲಮ್ ಪ್ರೀನ್ಸ್ಸ್ಸೆ’ ಎಂದೇ ಖ್ಯಾತಿ ಪಡೆದಿರುವ ಮಲೀಶಾ, ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲ್ ಆಗುವ ತನ್ನ ಕನಸು ನನಸಾಗಿರುವುದಕ್ಕೆ ಹೆಮ್ಮೆಪಟ್ಟಿದ್ದಾರೆ. ದೇಶ ವಿದೇಶಗಳಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದಕ್ಕೆ ತನ್ನ ಅದೃಷ್ಟದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಸ್ಲಮ್ನಲ್ಲಿ ಬೆಳೆದರೂ ಆಂಗ್ಲ ಭಾಷೆಯಲ್ಲಿ ಲೀಲಾಜಾಲವಾಗಿ ಮಾತನಾಡುವ ಮಲೀಶಾ ಅವರನ್ನು ಇತ್ತೀಚೆಗೆ ಯೂಟ್ಯೂಬರ್ ಡ್ರೂ ಬಿನ್ಸ್ಕಿ ಅವರು ಮಾತನಾಡಿಸಿದ್ದಾರೆ. ಈ ವೇಳೆ ತಮ್ಮ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ ಮಲೀಶಾ ಪ್ರಖ್ಯಾತ ಮ್ಯಾಗಜಿನ್ ಮುಖಪುಟದಲ್ಲಿ ಮೂಡಿ ಬಂದ ಚಿತ್ರಗಳನ್ನು ತನ್ನ ಜೋಪಡಿಯ ಗೋಡೆಯಲ್ಲಿ ತೂಗು ಹಾಕಿದನ್ನು ಅವರಿಗೆ ತೋರಿಸುವ ದೃಶ್ಯ ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನು ಬಿಂಬಿಸುವ ರೂಪಕದಂತಿದೆ.

ತಮ್ಮ ಜೋಪಡಿಯ ಸಮೀಪದಲ್ಲೇ ಸಣ್ಣ ಮನೆಯೊಂದನ್ನು ಖರೀದಿಸಿರುವ ಮಲೀಶಾಳ ದೂರ ದೃಷ್ಟಿಯೇ ಭಿನ್ನ. ತನ್ನಂತೆ ಬಡ ಕುಟುಂಬದ ಮಕ್ಕಳಿಗೆ ಸ್ಫೂರ್ತಿಯಾಗುವುದಕ್ಕೆ ಹೊಸ ವೇದಿಕೆ ಕಲ್ಪಿಸುವುದು ಅವಳ ಉದ್ದೇಶ. ಆ ನಿಟ್ಟಿನಲ್ಲಿ ಅವಳು ‘ಮಲೀಶಾ ಪೀಪಲ್’ ಹೆಸರಿನ ವೇದಿಕೆಯನ್ನು ನಿರ್ಮಿಸಿ ಸ್ಲಂ ಭಾಗದ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.

‘ಮಾಡೆಲಿಂಗ್ ನನ್ನ ಕನಸಾದರೂ ನನ್ನ ಆದ್ಯತೆ ಇರುವುದು ಶಿಕ್ಷಣಕ್ಕೆ’ ಎನ್ನುವ ಮಲೀಶಾ ಅವರ ಮಾತು, ಕೊಳಗೇರಿ ಪ್ರದೇಶದ ಜನಗಳಿಗೆ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ.

ಬಿಳಿ ಚರ್ಮದವರು ಮಾತ್ರ ರೂಪದರ್ಶಿಯಾಗಲು ಅರ್ಹರು ಎಂಬ ಮನಸ್ಥಿತಿಯನ್ನು ‘ಹಾಸ್ಯಾಸ್ಪದ’ ಎನ್ನುತ್ತಾರೆ ಮಲೀಶಾ.

‘ನಾನು ಎಲ್ಲದರಲ್ಲೂ ಸೌಂದರ್ಯವನ್ನು ಕಾಣುತ್ತೇನೆ. ಹಲವರು ಬಿಳಿ ಚರ್ಮವನ್ನು ಆಧಾರವಾಗಿಟ್ಟುಕೊಂಡು ಸೌಂದರ್ಯವನ್ನು ಅಳೆಯುತ್ತಾರೆ. ಆದರೆ ನನ್ನ ಪ್ರಕಾರ ಅದೊಂದು ಮೂರ್ಖತನದಿಂದ ಕೂಡಿದ ಯೋಚನೆ. ನಾನು ಆ ರೀತಿಯಲ್ಲಿ ಪ್ರಪಂಚವನ್ನು ನೋಡುವುದಿಲ್ಲ. ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ ಅಂತರಂಗ ಸೌಂದರ್ಯವೂ ಅಷ್ಟೇ ಮುಖ್ಯ. ನನ್ನ ಮೈ ಬಣ್ಣದ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ಅದು ಸರಿಯಾಗಿಯೇ ಇದೆ’ ಎಂದಿದ್ದಾರೆ.

‘ಹೆಣ್ಣು ಇದನ್ನೇ ಅನುಸರಿಸಬೇಕು ಎಂಬ ಯಾವ ನಿರ್ದಿಷ್ಟ ನಿಯಮವೂ ಇಲ್ಲ. ಆಕೆ ತಾನು ಇಷ್ಟಪಟ್ಟಿದ್ದನ್ನು ಮಾಡಬಹುದು, ಆಯ್ದು ಕೊಳ್ಳಬಹುದು. ಪ್ರತಿ ಹೆಣ್ಣು ಮಕ್ಕಳಿಗೂ ಸ್ಪೂರ್ತಿಯಾಗಲು ನಾನು ಬಯಸುತ್ತೇನೆ. ಆ ಮೂಲಕ ಅವರೆಲ್ಲರೂ ‘ವಿಶೇಷ’ ಎಂಬ ಸಂದೇಶವನ್ನು ಹಂಚಿಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ಟಿಶ್ಯೂ ಪೇಪರ್ ಮಾರಾಟ ಮಾಡಿ ಜೀವನ:

ಬಾಲ್ಯದಲ್ಲಿಯೇ ತಂದೆ–ತಾಯಿ ಬೇರ್ಪಟ್ಟು, ತಂದೆಯ ಆಸರೆಯಲ್ಲಿ ಬೆಳೆದ ಮಲೀಶಾ, ಆರನೇ ವಯಸ್ಸಿನಲ್ಲಿಯೇ ಟಿಶ್ಯೂ ಪೇಪರ್ ಮಾರಾಟ ಮಾಡಿ ಕುಟುಂಬಕ್ಕೆ ನೆರವಾಗಿದ್ದರು. ಟಿಶ್ಯೂ ಪೇಪರ್ ಮಾರಾಟದಿಂದ 'ತಿಂಗಳಿಗೆ ₹400 ಸಂಪಾದಿಸುತ್ತಿದ್ದೆ, ಅದನ್ನು ಕುಟುಂಬ ನಿರ್ವಹಣೆ ಕೊಡುತ್ತಿದ್ದೆ' ಎಂದು ಮಲೀಶಾ ಹೇಳಿದ್ದಾರೆ.

ಖ್ಯಾತಿ ಬಂದರೂ ಬದಲಾಗದ ಬದುಕು:

ಜನಪ್ರಿಯ ಮ್ಯಾಗಜೀನ್ಗಳ ಮುಖಪುಟದಲ್ಲಿ ರಾರಾಜಿಸಿದರೂ ಮಲೀಶಾ ಜೀವನಮಟ್ಟದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳೇನೂ ಆಗಿಲ್ಲ. ಜೋಪಡಿಯಿಂದ ಬದುಕು ಪುಟ್ಟ ಮನೆಗೆ ವರ್ಗಾಯಿಸಿದರೂ ಅಲ್ಲಿನ ಪರಿಸ್ಥಿತಿ ಕೂಡ ದುಸ್ತರವೇ. ಆದರೆ ಜೋಪಡಿಗಿಂತ ಈ ಬದುಕು ತುಂಬಾ ಸುಂದರವಾಗಿದೆ ಎಂದು ತೃಪ್ತರಾಗುತ್ತಾರೆ ಮಲೀಶಾ.

ಜ್ಯುವೆಲ್ಲರಿ ಬ್ಯುಸಿನೆಸ್ ಪ್ರಾರಂಭ:

ಜನಪ್ರಿಯತೆ ಸಿಗುತ್ತಿದ್ದಂತೆ ಸುಮ್ಮನೆ ಕೂರದ ಮಲೀಶಾ, ಸಣ್ಣದಾದ ಬ್ಯುಸಿನೆಸ್ವೊಂದನ್ನು ಪ್ರಾರಂಭ ಮಾಡಿದ್ದಾರೆ. ಫ್ಯಾಶನ್ನಲ್ಲಿ ಆಸಕ್ತಿ ಇರುವ ಅವರು, ‘ಮಲೀಶಾ ಜ್ಯುವೆಲ್ಲರಿ’ ಹೆಸರಿನಲ್ಲಿ ಆನ್ಲೈನ್ ಬ್ಯುಸಿನೆಸ್ ಪ್ರಾರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.