2026ನೇ-27 ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದಾರೆ.

ಕರ್ನಾಟಕವೂ ಸೇರಿ ದೇಶದ 20 ಐತಿಹಾಸಿಕ ಸ್ಥಳಗಳಿಗೆ ಹತ್ತು ಸಾವಿರ ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸಿ, ಅವರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ.

ತರಬೇತುದಾರರಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಸಹಯೋಗದೊಂದಿಗೆ ಹೈಬ್ರಿಡ್ ಮೋಡ್ನಲ್ಲಿ 12 ವಾರಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿ ನೀಡಲಾಗುವುದು.

ಪ್ರವಾಸಿಗರಿಗೆ ಅನುಕೂಲವಾಗುವಂತೆ ಐತಿಹಾಸಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಮತ್ತು ಪಾರಂಪರಿಕ ಸ್ಥಳಗಳ ಬಗೆಗಿನ ಮಾಹಿತಿಗಳ ಡಿಜಟಲೀಕರಣ.

ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು–ಕಾಶ್ಮೀರ ರಾಜ್ಯಗಳ ಪರಿಸರ ಸ್ನೇಹಿ ಚಾರಣ ತಾಣಗಳಿಗೆ ಮಾರ್ಗಗಳ ಅಭಿವೃದ್ದಿ

ಒಡಿಶಾ, ಕರ್ನಾಟಕ, ಕೇರಳ, ಕರವಾಳಿ ಪ್ರದೇಶಗಳ 'ಟರ್ಟಲ್ ಟ್ರೈಲ್ಸ್' ಅಥವಾ ಆಮೆ ಸಂರಕ್ಷಣಾ ಮಾರ್ಗಗಳಿಗೆ ಉತ್ತೇಜನ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪುಲಿಕಟ್ ಸರೋವರದ ಬಳಿ ಹಕ್ಕಿ ವೀಕ್ಷಣಾ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಪರಂಪರೆ ಮತ್ತು ಸಂಸ್ಕೃತಿ ಪ್ರವಾಸೋದ್ಯಮ

ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ಪ್ರಾಚೀನ ಬಂದರು ನಗರ ಲೋಥಲ್, ಗುಜರಾತ್ನ ಧೋಲಾವೀರಾ,  ಹರಿಯಾಣದ ರಾಖಿಗರಿ, ತಮಿಳುನಾಡಿನ ಆದಿಚನಲ್ಲೂರು, ಉತ್ತರ ಪ್ರದೇಶದ ಸಾರನಾಥ್, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿದಂತೆ 15 ಶಿಲ್ಪಕಲಾ ಕ್ಷೇತ್ರಗಳ ಅಭಿವೃದ್ಧಿ ಜೊತೆಗೆ ದಾಖಲೆಗಳ ಡಿಜಟಲೀಕರಣ, ಮಾರ್ಗದರ್ಶಕರ ನೇಮಕ ಮಾಡಲಾಗುವುದೆಂದು ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.