ಗುರುವಾರ , ಡಿಸೆಂಬರ್ 8, 2022
18 °C

1 ಕೆ.ಜಿ. ಚಿನ್ನ ಬಹುಮಾನ ಪಡೆದ ಸಾಂತ್ರಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜುವೆಲ್ಲರಿ ಅಸೋಸಿಯೇಷನ್ ಬೆಂಗಳೂರು (ಜೆಎಬಿ) ಆಯೋಜಿಸಿದ್ದ ‘ಬೆಂಗಳೂರು ಗೋಲ್ಡ್‌ ಶಾಪಿಂಗ್ ಫೆಸ್ಟಿವಲ್ – 2022’ ಸಂದರ್ಭದಲ್ಲಿ ನಡೆದ ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನ ಗೆದ್ದುಕೊಂಡಿರುವ ಸಾಂತ್ರಾ ಇಗ್ನೇಷಿಯಸ್ ಅವರಿಗೆ ಬಹುಮಾನವನ್ನು ಬುಧವಾರ ನೀಡಲಾಯಿತು.

ಬಹುಮಾನವು 1 ಕೆ.ಜಿ. ಚಿನ್ನವನ್ನು ಹೊಂದಿದೆ! ಬಹುಮಾನ ನೀಡುವ ಕಾರ್ಯಕ್ರಮವು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಕಂಪನಿಯ ಎಂ.ಜಿ. ರಸ್ತೆ ಶಾಖೆಯಲ್ಲಿ ಬುಧವಾರ ಆಯೋಜಿಸಲಾಗಿತ್ತು. ಸಾಂತ್ರಾ ಅವರು ಮಲಬಾರ್‌ ಗೋಲ್ಡ್‌ನ ಕಮ್ಮನಹಳ್ಳಿ ಶಾಖೆಯಲ್ಲಿ ಚಿನ್ನಾಭರಣ ಖರೀದಿಸಿ, ಲಕ್ಕಿ ಡ್ರಾ ಕೂಪನ್ ಪಡೆದುಕೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಜೆಎಬಿ ಅಧ್ಯಕ್ಷ ಪ್ರಶಾಂತ್ ಮೆಹ್ತಾ, ಮಲಬಾರ್‌ ಗೋಲ್ಡ್‌ನ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು ಬಹುಮಾನ ಹಸ್ತಾಂತರಿಸಿದರು. ಸೆಪ್ಟೆಂಬರ್ 26ರಿಂದ ನವೆಂಬರ್ 1ವರೆಗೆ ನಡೆದ ಶಾಪಿಂಗ್ ಫೆಸ್ಟಿವಲ್‌ನಲ್ಲಿ 127ಕ್ಕೂ ಹೆಚ್ಚು ಆಭರಣ ವ್ಯಾ‍ಪಾರಿಗಳು ಭಾಗಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು