ಪ್ರಜಾವಾಣಿ ವಾರ್ತೆ

ಮುಂಬೈ: ಯುರೋಪ್ ಮೂಲದ ವಿಮಾ ಸಂಸ್ಥೆ ಏಜೀಸ್ ಮತ್ತು ಭಾರತದ ಫೆಡರಲ್ ಬ್ಯಾಂಕ್ನ ಜಂಟಿ ಸಂಸ್ಥೆ ‘ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್’ನ ಹೊಸ ಲೋಗೊವನ್ನು ಮಂಗಳವಾರ ಅನಾವರಣ ಮಾಡಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜೂಡ್ ಗೋಮ್ಸ್ ಮಾತನಾಡಿ, ‘ಏಜೀಸ್ ಗ್ರೂಪ್ 200 ವರ್ಷಗಳ ಪರಂಪರೆ ಹೊಂದಿದೆ. ಫೆಡರಲ್ ಬ್ಯಾಂಕ್ಗೆ ದಶಕಗಳ ಇತಿಹಾಸವಿದೆ. ಈ ಎರಡೂ ಸಂಸ್ಥೆಗಳು ಹೊಂದಿರುವ ವಿಶ್ವಾಸವನ್ನು ಹೊಸ ಲೋಗೊ ಮತ್ತಷ್ಟು ಸಾಬೀತುಪಡಿಸುತ್ತದೆ. ನಮ್ಮ ಅಸ್ತಿತ್ವವನ್ನು ಮತ್ತು ಭಾರತದ ಜನರಿಗೆ ನಾವು ಇನ್ನಷ್ಟು ಕೊಡುಗೆ ನೀಡಲು ಶ್ರಮಿಸುತ್ತಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.

‘ಪ್ರಾಮಿಸಸ್ ಮೇಡ್ ಪಾಸಿಬಲ್’ (ಪ್ರತಿ ಭರವಸೆಯೂ ಈಡೇರುತ್ತದೆ) ಎಂಬುದು ಸಂಸ್ಥೆಯ ಘೋಷವಾಕ್ಯವಾಗಿದೆ. ವಿಮೆ ಪದ್ಧತಿಯನ್ನು ಸರಳೀಕರಿಸುವುದು, ಭಾರತದ ಹೆಚ್ಚುತ್ತಿರುವ ಆರ್ಥಿಕ ರಕ್ಷಣೆಯ ಅಗತ್ಯಗಳನ್ನು ಪೂರೈಸಲು ಮತ್ತು ಲಕ್ಷಾಂತರ ಜನರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವುದು ಸಂಸ್ಥೆಗೆ ಮುಖ್ಯ ಧ್ಯೇಯೋದ್ದೇಶವಾಗಿದೆ’ ಎಂದರು.

‘2008ರಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಸಂಸ್ಥೆಯು 2025ರ ಮಾರ್ಚ್ 31ರ ವೇಳೆಗೆ ₹27,558 ಕೋಟಿಗಿಂತ ಹೆಚ್ಚಿನ ವಿಮಾ ಮೊತ್ತವನ್ನು 19.71 ಲಕ್ಷಕ್ಕೂ ಹೆಚ್ಚು ಪಾಲಿಸಿಗಳಿಗೆ ಬಿಡುಗಡೆ ಮಾಡಿದೆ. ಕಂಪನಿಯು 2025ರ ಅಕ್ಟೋಬರ್ 30ರ ವೇಳೆಗೆ ‘ವೈಯಕ್ತಿಕ ವಾರ್ಷಿಕ ಪ್ರೀಮಿಯಂ ಸಮಾನ ಮೊತ್ತ’ದಲ್ಲಿ (ಎಪಿಇ) ವರ್ಷದಿಂದ ವರ್ಷಕ್ಕೆ ಶೇ 13ರಷ್ಟು ಬೆಳವಣಿಗೆ ಸಾಧಿಸಿದೆ. ಇದು ಉದ್ಯಮದ ನಿರೀಕ್ಷಿತ ಶೇ 9ರಷ್ಟು ಬೆಳವಣಿಗೆಯನ್ನು ಮೀರಿಸಿದೆ. 2025ರ ಹಣಕಾಸು ವರ್ಷದಲ್ಲಿ ಶೇ 100ರಷ್ಟು ವೈಯಕ್ತಿಕ ವಿಮಾ ಪಾಲಿಸಿಗಳನ್ನು ಇತ್ಯರ್ಥಪಡಿಸಿದೆ’ ಎಂದು ಹೇಳಿದರು.

‘ಭಾರತದ ಜೀವ ವಿಮಾ ಕ್ಷೇತ್ರವು ಗಮನಾರ್ಹ ರೂಪಾಂತರ ಹೊಂದುತ್ತಿದೆ. ಆರ್ಥಿಕ ರಕ್ಷಣೆಯ ಬಗ್ಗೆ ಹೆಚ್ಚುತ್ತಿರುವ ಅರಿವು, ವೇಗದ ಡಿಜಿಟಲೀಕರಣ, ಎಂಎಸ್ಎಇ ಮತ್ತು ಯುವ ಪೀಳಿಗೆಯಲ್ಲಿ ಉಳಿತಾಯದ ಪ್ರವೃತ್ತಿ ಸೇರಿದಂತೆ ಅನೇಕ ಅಂಶಗಳು ಇದಕ್ಕೆ ಕಾರಣ. ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಅತಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಇ) ವಲಯವನ್ನು ಬೆಂಬಲಿಸಲು ಸಂಸ್ಥೆ ನಿರ್ಧರಿಸಿದೆ’ ಎಂದು ಮಾಹಿತಿ ನೀಡಿದರು.

ಬ್ರ್ಯಾಂಡ್ ರಾಯಭಾರಿ ಮತ್ತು ಕ್ರಿಕೆಟಿಗ ದಿಗ್ಗಜ ಸಚಿನ್ ತೆಂಡೂಲ್ಕರ್ ಮಾತನಾಡಿ, ‘ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವುದಕ್ಕೆ ಹೆಮ್ಮೆ ಇದೆ. ಜನರ ಜತೆ ನಿಲ್ಲುವುದು ಮತ್ತು ಅವರ ಜೀವನವನ್ನು ಭದ್ರಪಡಿಸಲು ಸಂಸ್ಥೆ ಗಮನಹರಿಸಿದೆ. ಹೊಸ ಲೋಗೊ ಮತ್ತು ಬ್ರ್ಯಾಂಡ್ ಭರವಸೆಯು ಪ್ರತಿ ಕುಟುಂಬದ ಭವಿಷ್ಯವನ್ನು ರಕ್ಷಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಪ್ರತಿನಿಧಿ ಮುಂಬೈಗೆ ಭೇಟಿ ನೀಡಿದ್ದರು.