ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಜಿಬಿ ಮೊಬೈಲ್‌ ಡೇಟಾಗೆ ₹ 35 ನಿಗದಿಪಡಿಸಲು ವೊಡಾಫೋನ್ ಮನವಿ

Last Updated 28 ಫೆಬ್ರುವರಿ 2020, 7:21 IST
ಅಕ್ಷರ ಗಾತ್ರ

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌- AGR: Adjusted Gross Revenue) ಪಾವತಿ ಸಂಕಷ್ಟದಲ್ಲಿ ಸಿಲುಕಿರುವ ವೊಡಾಫೋನ್ ಐಡಿಯಾ ಕಂಪನಿಯು ಏಪ್ರಿಲ್ 1ರಿಂದ ಪ್ರತಿ 1 ಜಿಬಿ ಮೊಬೈಲ್ ಇಂಟರ್ನೆಟ್‌ಗೆ ವಿಧಿಸುತ್ತಿರುವ ಶುಲ್ಕವನ್ನು ಕನಿಷ್ಠ ₹ 35ಕ್ಕೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದೆ.

ಪ್ರತಿ ಸಂಪರ್ಕಕ್ಕೆ ಪ್ರತಿ ತಿಂಗಳ ಮಾಸಿಕ ಬಾಡಿಗೆ ಮೊತ್ತವನ್ನು ₹ 50ಕ್ಕೆ ನಿಗದಿಪಡಿಸಬೇಕು. ಪ್ರತಿ ಕರೆಗೆ 6 ಪೈಸೆ ಕನಿಷ್ಠ ಶುಲ್ಕ ನಿಗದಿಪಡಿಸಬೇಕು ಎಂದು ವಿನಂತಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ವೊಡಾಫೋನ್‌ ಕಂಪನಿಯುಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತ ₹ 50 ಸಾವಿರ ಪಾವತಿಸಬೇಕಿದೆ. ಬಾಕಿ ಪಾವತಿಗೆ ಕಂಪನಿ 18 ವರ್ಷಗಳ ಕಾಲಾವಕಾಶ ಕೇಳಿದೆ. ಬಾಕಿ ಉಳಿದಿರುವ ಮೊತ್ತಕ್ಕೆಮೂರು ವರ್ಷ ಯಾವುದೇ ಬಡ್ಡಿ ಅಥವಾ ದಂಡ ವಿಧಿಸಬಾರದು ಎಂದು ಮನವಿ ಮಾಡಿದೆ ಎಂದು ಮೂಲಗಳು ಹೇಳಿದರು.

‘ಮಾರುಕಟ್ಟೆಯಲ್ಲಿ ಉಳಿಯಲು ವೊಡಾಫೋನ್ ಐಡಿಯಾ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದೆ. ಪ್ರತಿ 1 ಜಿಬಿ ಮೊಬೈಲ್ ಡೇಟಾಗೆ ಕನಿಷ್ಠ ದರವಾಗಿ ₹ 35 ನಿಗದಿಪಡಿಸಬೇಕು. ಪ್ರತಿ ಮೊಬೈಲ್‌ನ ತಿಂಗಳ ಸಂಪರ್ಕ ಶುಲ್ಕವಾಗಿ ₹ 50 ನಿಗದಿಪಡಿಸಬೇಕು. ಈ ಬದಲಾವಣೆಗಳು ಏಪ್ರಿಲ್ 1, 2020ರಿಂದಲೇ ಜಾರಿಯಾಗಬೇಕುಎಂದು ಕಂಪನಿ ವಿನಂತಿಸಿದೆ. ಈ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರಕ್ಕೆ ಅಷ್ಟು ಸುಲಭವಲ್ಲ’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಸ್ತುತ ವಿವಿಧ ಮೊಬೈಲ್ ಕಂಪನಿಗಳು ವಿಧಿಸುತ್ತಿರುವ ಇಂಟರ್ನೆಟ್ ದರವುಪ್ರತಿ ಜಿಬಿಗೆ ಸರಾಸರಿ ₹ 4ರಿಂದ 5 ಇದೆ.ವೊಡಾಫೋನ್ ಐಡಿಯಾ ಕಂಪನಿಯು ಔಟ್‌ಗೋಯಿಂಗ್ ದರವನ್ನು ಪ್ರತಿ ನಿಮಿಷಕ್ಕೆ 6 ಪೈಸೆಗೆ ನಿಗದಿಪಡಿಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯು ಕಾಲ್ ಮತ್ತು ಇಂಟರ್ನೆಟ್ ದರವನ್ನು ಶೇ 50 ರಷ್ಟು ಹೆಚ್ಚಿಸಿದ ಮೂರು ತಿಂಗಳ ಒಳಗೇ ಮತ್ತೊಮ್ಮೆ ದರ ಏರಿಕೆಯ ಪ್ರಸ್ತಾವ ಮುಂದಿಟ್ಟಿದೆ.

ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು 2015–16ರಲ್ಲಿ ಪ್ರತ್ಯೇಕವಾಗಿ ಬಾಧ್ಯವಾಗಿದ್ದಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಪಾವತಿ ವಿಷಯ ಈಗ ಬಿಗಡಾಯಿಸಿದೆ. ತನ್ನ ಪ್ರಸ್ತಾವದಂತೆ ದರ ಹೆಚ್ಚಿಸಿದ ನಂತರ ಕನಿಷ್ಠ ಪಕ್ಷ ಮೂರು ವರ್ಷ ಕಾಲಾವಕಾಶ ಬೇಕು’ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ವೊಡಾಫೋನ್ ಐಡಿಯಾದ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.ಕಂಪನಿಗಳ ಆದಾಯ ಆಧರಿಸಿ ಸರ್ಕಾರವು ಲೈಸೆನ್ಸ್ ಶುಲ್ಕ ಮತ್ತು ತರಂಗಾಂತರ ಬಳಕೆ ಶುಲ್ಕವನ್ನು ನಿರ್ಧರಿಸುತ್ತದೆ.

ಆದಾಯ ಲೆಕ್ಕಹಾಕುವ ವಿಚಾರದಲ್ಲಿ ಸರ್ಕಾರ ಮತ್ತು ಟೆಲಿಕಾಂ ಕಂಪನಿಗಳ ನಡುವೆ ವಿವಾದ ತಲೆದೋರಿತ್ತು. ಆದಾಯ ಲೆಕ್ಕ ಹಾಕುವ ಸರ್ಕಾರದ ಮಾದರಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಜನವರಿ 23ರ ಒಳಗೆ ಬಾಕಿ ಚುಕ್ತಾ ಮಾಡುವಂತೆ ಕೋರ್ಟ್‌ ಸೂಚಿಸಿತ್ತು.

ಜುಲೈ 2019ರ ಲೆಕ್ಕಾಚಾರದಂತೆವಿವಿಧ ಮೊಬೈಲ್ ಕಂಪನಿಗಳು ಪಾವತಿಸಬೇಕಾದ ಒಟ್ಟು ಮೊತ್ತವು ₹ 1.47 ಲಕ್ಷ ಕೋಟಿಯಷ್ಟಿತ್ತು. ದೂರಸಂಪರ್ಕ ಇಲಾಖೆಯ ಲೆಕ್ಕದಂತೆ ವೊಡಾಫೋನ್₹ 53,000 ಕೋಟಿ ಪಾವತಿಸಬೇಕಿತ್ತು. ಈ ಪೈಕಿ ₹ 3000 ಪಾವತಿಸಿದೆ.

ಈ ಮೊತ್ತ ಪಾವತಿಸಲು ಇರುವ ತೊಡಕುಗಳನ್ನು ವಿವರಿಸಿದ್ದ ವೊಡಾಫೋನ್, ‘ಆರ್ಥಿಕ ಸ್ಥಿತಿಗತಿ ಗಟ್ಟಿಯಾಗಿಲ್ಲ’ ಎಂದು ಹೇಳುವ ಮೂಲಕ ಆತಂಕ ಮೂಡಿಸಿತ್ತು. ಜಿಎಸ್‌ಟಿ ರಿಯಾಯ್ತಿ ಸೇರಿದಂತೆ ಸರ್ಕಾರ ಹಲವು ರಿಯಾಯ್ತಿಗಳನ್ನು ನೀಡಿದರೆ ಮಾತ್ರಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಪಾವತಿ ಸಾಧ್ಯ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT