ಬೆಂಗಳೂರು: ‘ದೇಶದಲ್ಲಿನ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಅಗ್ರ 50 ಕಂಪನಿಗಳನ್ನು ಗುರುತಿಸಲು ರಾಜ್ಯ ಸರ್ಕಾರವು ₹100 ಕೋಟಿ ನಿಧಿಯನ್ನು ಆರಂಭಿಸಲಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಂಬರುವ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ, 20 ಸಾವಿರ ನವೋದ್ಯಮಗಳನ್ನು ಪ್ರದರ್ಶಿಸಲು ಫ್ಯೂಚರ್ ಮೇಕರ್ಸ್ ಟ್ರ್ಯಾಕ್ ಅನ್ನು ಅನಾವರಣಗೊಳಿಸುತ್ತೇವೆ ಎಂದರು.

ಕರ್ನಾಟಕ ಇಂದು ಇತರೆ ರಾಜ್ಯಗಳೊಂದಿಗೆ ಸ್ಪರ್ಧಿಸುತ್ತಿಲ್ಲ; ನಾವೀನ್ಯ, ಕೌಶಲ ಮತ್ತು ರಾಜಕೀಯ ಇಚ್ಛಾಶಕ್ತಿಯ ಮೂಲಕ ಜಾಗತಿಕ ಪರಿಹಾರಗಳನ್ನು ರೂಪಿಸಲು ನಾವು ನಮ್ಮೊಂದಿಗೆ ಸ್ಪರ್ಧಿಸುತ್ತಿದ್ದೇವೆ ಎಂದು ಹೇಳಿದರು.

ಕೃಷಿ ತಂತ್ರಜ್ಞಾನದಿಂದ ಬಾಹ್ಯಾಕಾಶದವರೆಗೆ ಪ್ರಗತಿಯನ್ನು ಸಾಧಿಸುವ ಮೂಲಕ ಕರ್ನಾಟಕವು ವಿಶ್ವದ ಅತ್ಯಂತ ನಾವೀನ್ಯ ಕೇಂದ್ರಗಳಲ್ಲಿ ಒಂದಾಗಿ ವಿಕಸನಗೊಂಡಿದೆ. ಕರ್ನಾಟಕ ಕೇವಲ ಹೂಡಿಕೆ ತಾಣವಲ್ಲ, ಜಾಗತಿಕ ಜ್ಞಾನ, ಕೌಶಲದ ಕೇಂದ್ರ. ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಾದ್ಯಂತ ನಾವೀನ್ಯತೆ ಕ್ಲಸ್ಟರ್ಗಳನ್ನು ನಿರ್ಮಿಸಲು ₹1,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಪ್ರಗತಿಯ ಪ್ರಯೋಜನ ಪ್ರತಿ ಪ್ರದೇಶವನ್ನು ತಲುಪುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.