ಮೈಸೂರು: ನಗರದ ನಿವಾನ್ ರಾಘವೇಂದ್ರ ಅವರು ಇಲ್ಲಿ ಮುಕ್ತಾಯಗೊಂಡ ‘ರೋಟರಿ ಬೃಂದಾವನ 16 ವರ್ಷದೊಳಗಿನವರ ಮುಕ್ತ ರೇಟಿಂಗ್ ಚೆಸ್ ಟೂರ್ನಿ’ಯಲ್ಲಿ ಪ್ರಶಸ್ತಿ ಜಯಿಸಿದರು.

8ನೇ ಸುತ್ತಿನ ಅಂತ್ಯಕ್ಕೆ ಮಂಗಳೂರಿನ ಯು.ಡಿ.ಆಕಾಂಕ್ಷ್ ಹಾಗೂ ಮೈಸೂರಿನ ಎಸ್.ವಿಶ್ವಜಿತ್ ಅವರೊಂದಿಗೆ ತಲಾ 7 ಅಂಕದೊಂದಿಗೆ ನಿವಾನ್ ಜಂಟಿ ಅಗ್ರಸ್ಥಾನ ಪಡೆದಿದ್ದರೂ, ಟೈಬ್ರೇಕರ್ ಆಧಾರದಲ್ಲಿ ಸ್ಥಾನ ನಿರ್ಧರಿಸಲಾಯಿತು. ನಿವಾನ್ ₹ 40ಸಾವಿರದೊಂದಿಗೆ ಪ್ರಥಮ ಸ್ಥಾನ ಪಡೆದರು. ಯು.ಡಿ.ಆಕಾಂಕ್ಷ್ 2ನೇ (₹ 30 ಸಾವಿರ) ಹಾಗೂ ಎಸ್.ವಿಶ್ವಜಿತ್ 3ನೇ (₹ 20 ಸಾವಿರ) ಸ್ಥಾನ ಗಳಿಸಿದರು.

ಮಂಗಳೂರಿನ ಆರುಷ್ ಭಟ್ 4ನೇ (₹ 15ಸಾವಿರ), ಪಿ.ಅಭಿನವ 5ನೇ (₹ 10ಸಾವಿರ), ಗಹನ್ ಗಣಪತಿ 6ನೇ (₹ 9ಸಾವಿರ) ಉಡುಪಿಯ ಬಿ.ಪಿ.ಉತ್ಸವ 7ನೇ (₹ 8ಸಾವಿರ), ಮಂಡ್ಯದ ಎಂ.ಎಸ್.ಜಾಹ್ನವಿ 8ನೇ (₹ 7ಸಾವಿರ), ವಿ.ಎನ್.ಅಥರ್ವ 9ನೇ (₹ 6ಸಾವಿರ) ಹಾಗೂ ಮೈಸೂರಿನ ಸಾತ್ವಿಕ್ ವಿಶ್ವನಾಥ್ 10ನೇ (₹ 5ಸಾವಿರ) ಸ್ಥಾನ ಪಡೆದರು.

30 ಸ್ಪರ್ಧಿಗಳಿಗೆ ಒಟ್ಟು ₹ 2 ಲಕ್ಷ ಮೊತ್ತದ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.