ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12 ಶುರುವಾಗಿ 12 ದಿನ ಕಳೆದಿದೆ. ಈ 2 ವಾರದಲ್ಲೇ ಬಿಗ್ಬಾಸ್ ಮನೆಯಲ್ಲಿ ಗಲಾಟೆ, ಕಿರುಚಾಟ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಮೂಡಿದೆ. ಆದರೆ, ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ತಮಾಷೆ ಮಾಡಿಕೊಂಡಿದ್ದ ಚಂದ್ರಪ್ರಭ ಹಾಗೂ ಡಾಗ್ ಸತೀಶ್ ಮಧ್ಯೆ ದೊಡ್ಡ ಗಲಾಟೆಯೇ ನಡೆದು ಹೋಗಿದೆ.
.BBK12: ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತು ಒಂಟಿ-ಜಂಟಿಗಳ ನಡುವೆ ಜಿದ್ದಾಜಿದ್ದಿ.ಬಿಗ್ಬಾಸ್ ಷೋ ಬಂದ್ | ನಟ್ಟು ಬೋಲ್ಟ್ ಮಿನಿಸ್ಟರ್ ಸೇಡು ತೀರಿಸಿಕೊಂಡಿದ್ದಾರೆ: JDS.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ರಿಲೀಸ್ ಆಗಿರುವ ಪ್ರೊಮೋದಲ್ಲಿ ಡಾಗ್ ಸತೀಶ್ ಮೇಲೆ ಚಂದ್ರಪ್ರಭ ಸಿಟ್ಟಾಗಿದ್ದಾರೆ. ಅದೇ ಕೋಪದಲ್ಲಿ ಚಂದ್ರಪ್ರಭ ಗಾಜಿನ ಗ್ಲಾಸ್ ಒಡೆದು ಹಾಕಿದ್ದಾರೆ.

ಚಂದ್ರಪ್ರಭ ಸಿಟ್ಟಾಗಿದ್ದು ಏಕೆ?

ಬಿಗ್ಬಾಸ್ ಮನೆಗೆ ಜಂಟಿಗಳಾಗಿ ಎಂಟ್ರಿ ಕೊಟ್ಟ ಚಂದ್ರಪ್ರಭ ಹಾಗೂ ಡಾಗ್ ಸತೀಶ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶನಿವಾರದ ಸಂಚಿಕೆಯಲ್ಲೂ ಚಂದ್ರಪ್ರಭ, ಸತೀಶ್ ಅವರು ತುಂಬಾ ಮೇಕಪ್ ಮಾಡಿಕೊಳ್ತಾರೆ. ಸ್ನಾನಕ್ಕೆ ಹೋದರೆ ಆಚೆ ಬರೋದೇ ಇಲ್ಲ ಅಂತೆಲ್ಲಾ ಕಿಚ್ಚ ಸುದೀಪ್ ಮುಂದೆ ಕಂಪ್ಲೇಂಟ್ ಮಾಡಿದ್ದರು.

ಇದೀಗ ರಿಲೀಸ್ ಆದ ಪ್ರೊಮೋದಲ್ಲಿ ಚಂದ್ರಪ್ರಭ, ‘ಸತೀಶ್ ಅಣ್ಣ ನಿಮ್ಮ ಕಾಲಿಗೆ ಬೀಳುತ್ತೀನಿ ಆಚೆ ಬಾರಣ್ಣ ನೀರು ಕುಡಿಬೇಕು ಅಂತ ಹೇಳಿದ್ದಾರೆ. ಆದರೆ, ಸುಮಾರು 2 ಗಂಟೆಗಳ ಕಾಲ ಕಾದು ಸುಸ್ತಾದ ಚಂದ್ರಪ್ರಭ ಏಕಾಏಕಿ ಆಕ್ರೋಶಗೊಂಡಿದ್ದಾರೆ. ಅಲ್ಲದೇ ಕೈಯಲ್ಲಿದ್ದ ಹಗ್ಗವನ್ನು ಬಿಚ್ಚಿ ಆಚೆ ಬಂದಿದ್ದಾರೆ. ಈ ಬಗ್ಗೆ ಮನೆಮಂದಿ ಪ್ರಶ್ನಿಸಿದಾಗ ಚಂದ್ರಪ್ರಭ ಗಾಜಿನ ಗ್ಲಾಸ್ ಅನ್ನು ಒಡೆದು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.