ಶನಿವಾರ, ಫೆಬ್ರವರಿ 29, 2020
19 °C

ಮಾರುಕಟ್ಟೆ ಮೌಲ್ಯ 1 ಟ್ರಿಲಿಯನ್‌ ಡಾಲರ್‌ ಮುಟ್ಟಿದ ಆಲ್ಫಾಬೆಟ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಾರುಕಟ್ಟೆ ಮೌಲ್ಯ 1 ಟ್ರಿಲಿಯನ್‌ ಡಾಲರ್‌ ಮುಟ್ಟಿದ ಗೂಗಲ್‌ ಮಾತೃ ಸಂಸ್ಥೆ ಆಲ್ಫಾಬೆಟ್‌

ಸ್ಯಾನ್‌ ಫ್ರಾನ್ಸಿಸ್ಕೊ: ಭಾರತೀಯ–ಅಮೆರಿಕನ್‌ ಸುಂದರ್‌ ಪಿಚೈ ನೇತೃತ್ವ ವಹಿಸಿರುವ ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾಬೆಟ್‌  1 ಟ್ರಿಲಿಯನ್‌ ಡಾಲರ್‌ (₹71.05 ಲಕ್ಷ ಕೋಟಿ) ಮೌಲ್ಯ ಹೊಂದಿರುವ ಅಮೆರಿಕದ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ನಾಲ್ಕನೇ ಕಂಪನಿಯಾಗಿದೆ. 

ಗುರುವಾರ ಆಲ್ಫಾಬೆಟ್ ಕಂಪನಿ ಷೇರು 1,451.70 ಡಾಲರ್‌ಗಳಲ್ಲಿ ವಹಿವಾಟು ಮುಕ್ತಾಯವಾಗುವ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ 1 ಟ್ರಿಲಿಯನ್‌ ಡಾಲರ್‌ (₹71.05 ಲಕ್ಷ ಕೋಟಿ) ತಲುಪಿತು.

ಆ್ಯಪಲ್‌, ಮೈಕ್ರೊಸಾಫ್ಟ್‌ ಹಾಗೂ ಅಮೆಜಾನ್‌ ಸಾಲಿಗೆ ಆಲ್ಫಾಬೆಟ್‌ ಸೇರ್ಪಡೆಯಾಗಿದೆ. ಐಫೋನ್‌ ತಯಾರಿಸುವ ಆ್ಯಪಲ್‌ ಕಂಪನಿ 2018ರಲ್ಲಿ ಮೊದಲ ಬಾರಿಗೆ 1 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯದ ಗಡಿ ದಾಟಿತು. 

ಆಲ್ಫಾಬೆಟ್‌ ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌ ಆಡಳಿತ ಹೊಣೆಗಾರಿಕೆಗಳಿಂದ ಕೆಳಗಿಳಿಯುವುದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಿಸಿದರು. 2004ರಿಂದ ಗೂಗಲ್‌ ಬೆಳವಣಿಗೆಯಲ್ಲಿ ಕೈಜೋಡಿಸಿರುವ ಸುಂದರ್‌ ಪಿಚೈ ಅವರನ್ನು ಆಲ್ಫಾಬೆಟ್‌ ಸಿಇಒ ಆಗಿ ನೇಮಿಸಲಾಯಿತು. 2020ರಲ್ಲಿ ಪಿಚೈಗೆ ₹1,707 ಕೋಟಿ ಮೌಲ್ಯದ ಷೇರು ಹಾಗೂ ₹14.22 ಕೋಟಿ ವೇತನ ಪಡೆಯಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು