ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ಆರಂಭಿಸಿದ ಅಮೆಜಾನ್

Last Updated 14 ಆಗಸ್ಟ್ 2020, 13:57 IST
ಅಕ್ಷರ ಗಾತ್ರ

ಬೆಂಗಳೂರು: ಇ–ಕಾಮರ್ಸ್‌ ಕಂಪನಿ ಅಮೆಜಾನ್‌ ಶುಕ್ರವಾರದಿಂದ ಭಾರತದಲ್ಲಿ ಆನ್‌ಲೈನ್‌ ಮೂಲಕ ಔಷಧಿ ಮಾರಾಟ ಆರಂಭಿಸಿದೆ. ದೇಶದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಅಮೆಜಾನ್.ಕಾಮ್ ಮೊದಲಿಗೆ ಬೆಂಗಳೂರಿನಲ್ಲಿ ಈ ಪ್ರಯೋಗ ನಡೆಸಿದೆ.

ಸಾಮಾನ್ಯ ಬಳಕೆ ಹಾಗೂ ವೈದ್ಯರ ಸೂಚನೆಯ ಮೇರೆಗೆ ತೆಗೆದುಕೊಳ್ಳುವ ಔಷಧಿಗಳು, ಆರೋಗ್ಯ ಸಂಬಂಧಿಸಿದ ಸಾಧನಗಳು ಹಾಗೂ ಭಾರತದ ಸಾಂಪ್ರದಾಯಿಕ ಗಿಡಮೂಲಿಕೆಗಳನ್ನು ಅಮೆಜಾನ್‌ ಫಾರ್ಮಸಿ ಪೂರೈಸುತ್ತಿದೆ.

ಭಾರತದಲ್ಲಿ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌, ಮುಕೇಶ್‌ ಅಂಬಾನಿ ಅವರ ಜಿಯೊಮಾರ್ಟ್‌ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಹೊಸ ಪ್ರಯತ್ನಗಳಿಗೆ ಮುಂದಾಗುತ್ತಿದ್ದು, ಈ ನಡುವೆ ಅಮೆಜಾನ್‌ ಫಾರ್ಮಸಿ ಆರಂಭಿಸಿದೆ. ದೇಶದಲ್ಲಿ ಹೊಸದಾಗಿ 10 ಸಂಗ್ರಹಗಾರಗಳನ್ನು ತೆರೆಯುವುದಾಗಿ ಕಳೆದ ತಿಂಗಳು ಅಮೆಜಾನ್‌ ಪ್ರಕಟಿಸಿತ್ತು ಹಾಗೂ ವಾಹನಗಳಿಗೆ ವಿಮೆ ಪೂರೈಸುವ ವ್ಯವಸ್ಥೆಯನ್ನೂ ಶುರು ಮಾಡಿರುವುದಾಗಿ ಹೇಳಿತ್ತು. ಪಶ್ಚಿಮ ಬಂಗಾಳದಲ್ಲಿ ಮದ್ಯ ಡೆಲಿವರಿ ಮಾಡಲು ಅಮೆಜಾನ್‌ ಅನುಮತಿ ಪಡೆದಿರುವುದಾಗಿ ರಾಯಿಟರ್ಸ್‌ ಜೂನ್‌ನಲ್ಲಿ ವರದಿ ಮಾಡಿತ್ತು.

ದೇಶದಲ್ಲಿ ಆನ್‌ಲೈನ್‌ ಔಷಧಿ ಮಾರಾಟಗಳು ಅಥವಾ ಇ–ಫಾರ್ಮಾಗಳಿಗೆ ಸಂಬಂಧಿಸಿದ ನಿಬಂಧನೆಗಳು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಆದರೆ, ಆನ್‌ಲೈನ್‌ ಮಾರಾಟಗಾರರಾದ ಮೆಡ್‌ಲೈಫ್‌, ನೆಟ್‌ಮೆಡ್ಸ್‌, ಫಾರ್ಮಾಈಸಿ ಹಾಗೂ 1ಎಂಜಿ ಇ–ಫಾರ್ಮಾಗಳು ಔಷಧಿ ಮಳಿಗೆಗಳಲ್ಲಿನ ಮಾರಾಟಕ್ಕೆ ತೀವ್ರ ಪೈಪೋಟಿ ನೀಡಿವೆ.

ಔಷಧಿಗಳ ಸರಿಯಾದ ಪರಿಶೀಲನೆ ಇಲ್ಲದೆಯೇ ಮಾರಾಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಔಷಧಿ ಮಾರಾಟಗಾರರು ಹಾಗೂ ವಿತರಕರು ಇ–ಫಾರ್ಮಾಗಳ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT