ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ ಅವರು ವಾರ್ಷಿಕ ₹10 ಕೋಟಿಯಿಂದ ₹20 ಕೋಟಿವರೆಗೆ ವೇತನ ಪಡೆಯಲಿದ್ದಾರೆ.

ಉದ್ಯಮಿ ಮಕೇಶ್ ಅಂಬಾನಿ ಅವರ ಮಕ್ಕಳಾದ ಆಕಾಶ್, ಇಷಾ ಮತ್ತು ಅನಂತ್ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ 2023ರಲ್ಲಿ ಕಂಪನಿಗೆ ನೇಮಕಗೊಂಡಿದ್ದರು. ಅನಂತ್, ಈ ವರ್ಷದ ಏಪ್ರಿಲ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಆಗಿದ್ದಾರೆ.

ಅನಂತ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರಿಂದ ವೇತನ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಇದು ₹10 ಕೋಟಿಯಿಂದ ₹20 ಕೋಟಿವರೆಗೆ ಇರಲಿದೆ. ಇದಕ್ಕೆ ಕಂಪನಿಯ ಷೇರುದಾರರ ಅನುಮೋದನೆ ಬೇಕಿದೆ ಎಂದು ಕಂಪನಿಯು ಷೇರುಪೇಟೆಗೆ ಭಾನುವಾರ ತಿಳಿಸಿದೆ.

ಆಕಾಶ್ ಅವರು ಜಿಯೊ ಇನ್ಫೊಕಾಮ್ನ ಅಧ್ಯಕ್ಷರಾಗಿದ್ದಾರೆ. ಇಷಾ ಅವರು ಕಂಪನಿಯ ರಿಟೇಲ್, ಇ–ಕಾಮರ್ಸ್ ಮತ್ತು ಐಷಾರಾಮಿ ಉತ್ಪನ್ನಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.