ಭಾನುವಾರ, ಜುಲೈ 25, 2021
28 °C

ಮಲ್ಲೇಶ್ವರದಲ್ಲಿ ‘ಭೀಮ’ ಮಳಿಗೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಕಂಪನಿಯಾದ ‘ಭೀಮ ಜ್ಯುವೆಲರ್ಸ್’ ನಗರದ ಮಲ್ಲೇಶ್ವರದಲ್ಲಿ ಹೊಸ ಮಳಿಗೆಯನ್ನು ಆರಂಭಿಸಿದೆ. ಈ ಮಳಿಗೆಯನ್ನು ಕಂಪನಿಯ ನಿರ್ದೇಶಕರಾದ ವಿಷ್ಣುಶರಣ್ ಕೆ. ಭಟ್ ಅವರು ಉದ್ಘಾಟಿಸಿದರು.

ನವೀಕರಣ ಮಾಡಲಾಗಿರುವ ಜಯನಗರದ ಮಳಿಗೆಯನ್ನು ಸಾವಿತ್ರಿ ಕೃಷ್ಣನ್ ಅವರು ಉದ್ಘಾಟಿಸಿದರು. ‘ಮಳಿಗೆಗಳು ವಿಶಾಲವಾಗಿಯೂ ಸುಸಜ್ಜಿತವಾಗಿಯೂ ಇವೆ. ಜಯನಗರ ಹಾಗೂ ಮಲ್ಲೇಶ್ವರದ ಮಳಿಗೆಗಳು ಬೆಳ್ಳಿ ವಸ್ತುಗಳು ಮತ್ತು ಆಭರಣಗಳ ಅಪೂರ್ವ ಸಂಗ್ರಹವನ್ನು ಹೊಂದಿವೆ’ ಎಂದು ಪ್ರಕಟಣೆ ತಿಳಿಸಿದೆ.

ಭೀಮ ಜ್ಯುವೆಲರ್ಸ್‌ನಲ್ಲಿ ಜುಲೈ 7ರವರೆಗೆ ವಿಶೇಷ ಕೊಡುಗೆಗಳು ಇವೆ. ‘ಪ್ರತಿ ಗ್ರಾಂ ಚಿನ್ನವನ್ನು ಅತಿ ಕನಿಷ್ಠ ದರಕ್ಕೆ ಖರೀದಿಸಬಹುದು. ಪ್ರತಿ ಕ್ಯಾರಟ್ ವಜ್ರದ ಖರೀದಿ ಮೇಲೆ ₹ 7,500 ರಿಯಾಯಿತಿ ಇದೆ. ಬೆಳ್ಳಿಯ ವಸ್ತು-ಆಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇಕಡ 60ರಷ್ಟು ರಿಯಾಯಿತಿ, ಪ್ಲಾಟಿನಂ ಆಭರಣದ ಒಟ್ಟು ಮೌಲ್ಯದ ಮೇಲೆ ಶೇ 5ರಷ್ಟು ರಿಯಾಯಿತಿ ಇದೆ’ ಎಂದು ಪ್ರಕಟಣೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.