ಕ್ಯಾಂಪ್ಕೊ: ₹1,878 ಕೋಟಿ ವ್ಯವಹಾರ

ಸೋಮವಾರ, ಜೂನ್ 24, 2019
24 °C

ಕ್ಯಾಂಪ್ಕೊ: ₹1,878 ಕೋಟಿ ವ್ಯವಹಾರ

Published:
Updated:
Prajavani

ಮಂಗಳೂರು: ‘ಕ್ಯಾಂಪ್ಕೊ ಸಂಸ್ಥೆ 2018-19 ನೇ ಸಾಲಿನಲ್ಲಿ ₹1,878 ಕೋಟಿ ವ್ಯವಹಾರ ನಡೆಸುವ ಮೂಲಕ 46 ವರ್ಷಗಳಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅಡಿಕೆಯ ಖರೀದಿಯ ಪ್ರಮಾಣದಲ್ಲಿ ಹೆಚ್ಚಳ ಸಾಧಿಸಿದೆ’ ಎಂದು ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ಸಂಸ್ಥೆಯು ₹1,589.15 ಕೋಟಿ ಮೌಲ್ಯದ 57,209 ಟನ್ ಅಡಿಕೆ ಖರೀದಿಸಿದ್ದು, ಇದರಲ್ಲಿ ₹ 882.61 ಕೋಟಿ ಮೌಲ್ಯದ 27,362 ಟನ್ ಕೆಂಪಡಿಕೆ ಮತ್ತು ₹ 706.54 ಕೋಟಿ ಮೌಲ್ಯದ 29,846 ಟನ್ ಬಿಳಿ ಅಡಿಕೆ ಸೇರಿದೆ. ₹1,593.40 ಕೋಟಿ ಮೌಲ್ಯದ 54,767 ಟನ್ ಅಡಿಕೆಯನ್ನು ಮಾರಾಟ ಮಾಡಿದೆ’ ಎಂದರು.

‘ಚಾಕ್ಲೇಟ್‌ ತಯಾರಿಕಾ ಕಾರ್ಖಾನೆಯಲ್ಲಿ ಒಟ್ಟು 14,606 ಟನ್ ಉತ್ಪಾದನೆ ಮಾಡಲಾಗಿದ್ದು, ಅದರಲ್ಲಿ 10,042 ಟನ್ ಕ್ಯಾಂಪ್ಕೊ ಬ್ರಾಂಡಿನ ಚಾಕ್ಲೇಟ್‌ ತಯಾರಿಸಲಾಗಿದೆ. ₹193 ಕೋಟಿ ಮೌಲ್ಯದ ಚಾಕ್ಲೇಟ್‌ ಮತ್ತು ಕೊಕ್ಕೊ ಕೈಗಾರಿಕೋತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ ₹16.75 ಕೋಟಿ ಮೌಲ್ಯದ 1,106 ಟನ್ ರಫ್ತು ಮಾಡಲಾಗಿದೆ’ ಎಂದರು.

‘ಹೆಚ್ಚಿರುವ ಚೊಕೊಚಿಪ್ ಬೇಡಿಕೆಯನ್ನು ಪೂರೈಸಲು ₹3.5 ಕೋಟಿ ವೆಚ್ಚದಲ್ಲಿ ಹೊಸ ಡ್ರಾಪ್ ಚಾಕ್ಲೇಟ್‌ ಯಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಟರ್ಕಿಯಿಂದ ಆಮದು ಮಾಡಿಕೊಂಡಿರುವ ಈ ಯಂತ್ರವು ನಿತ್ಯ 10 ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !