ಗುರುವಾರ , ಮಾರ್ಚ್ 4, 2021
23 °C

ಸಣ್ಣ ಮೊತ್ತದ ಸಾಲಕ್ಕೆ ‘ಕ್ಯಾಷ್‌ಕುಮಾರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸಾಲ ನೀಡುವವರು ಮತ್ತು ಸಾಲ ತೆಗೆದುಕೊಳ್ಳುವವರಿಗೆ ಆನ್‌ಲೈನ್ ಮೂಲಕ ‘ಪಿ2ಪಿ’ ಪರಿಕಲ್ಪನೆಯ ಆಧಾರಿತ ಸಾಲದ ಸೌಲಭ್ಯವನ್ನು ಬೆಂಗಳೂರಿನ ಕ್ಯಾಷ್ ಕುಮಾರ್ ಸಂಸ್ಥೆ ಪರಿಚಯಿಸಿದೆ. ಈ ‘ಪಿ2ಪಿ’ ಯೋಜನೆಯಡಿಯಲ್ಲಿ ಸಾಲ ನೀಡುವವರಿಗೆ ಇತರ ಹೂಡಿಕೆಗಿಂತ ಹೆಚ್ಚು  ವರಮಾನ ಪಡೆಯಲು ನೆರವಾಗುತ್ತಿದೆ. ಕಾನೂನಿನ ಸುರಕ್ಷಿತ ವ್ಯವಹಾರದ ಮೂಲಕ ಸಾಲ ಪಡೆಯುವವರಿಗೆ ಬಹು ಬೇಗ ಹಣ ವರ್ಗಾವಣೆಗೊಳ್ಳುತ್ತದೆ.

ಸಂಬಳ ಪಡೆಯುವವರಿಗಾಗಿಯೇ ರೂಪಿಸಿರುವ ಈ ಅಲ್ಪಾವಧಿ ಯೋಜನೆಯಡಿಯಲ್ಲಿ, ವೈದ್ಯಕೀಯ ನೆರವು, ಪ್ರಯಾಣ, ಗೃಹ ನವೀಕರಣ ಮುಂತಾದ ಅಗತ್ಯಗಳಿಗಾಗಿ ₹ 20,000 ರಿಂದ ₹ 1 ಲಕ್ಷದವರೆಗೆ 3 ರಿಂದ 12 ತಿಂಗಳುಗಳ ಅವಧಿಯ ಸಣ್ಣ ಮೊತ್ತದ ಸಾಲಗಳನ್ನು ನೀಡುತ್ತಿದೆ. ‘ಪಿ2ಪಿ’ ಸಾಲ ಸೌಲಭ್ಯ ಆರಂಭಿಸಿದಾಗಿನಿಂದ ಸ್ವಲ್ಪ ಸಮಯದಲ್ಲೇ ಜನಪ್ರಿಯಗೊಳ್ಳುತ್ತಿದೆ.  2018-19 ರ ಅಂತ್ಯದ ವೇಳೆಗೆ ತನ್ನ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಲಿದೆ. ₹ 45 ಕೋಟಿ ಸಾಲ ನೀಡುವ ಗುರಿ ಹಾಕಿಕೊಂಡಿದೆ ಎಂದು ಸಂಸ್ಥೆಯ ಸಹ-ಸಂಸ್ಥಾಪಕ ಧೀರೇನ್ ಮಖೀಜಾ ಹೇಳುತ್ತಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (NBFC-P2P) ಪ್ರಮಾಣಪತ್ರ ಪಡೆದಿದೆ. ಇದರಿಂದಾಗಿ ದೇಶದಾದ್ಯಂತ ಸೇವೆ ವಿಸ್ತರಿಸಲು ಸಾಧ್ಯವಾಗಿದೆ. ಸಾಲ ನೀಡುವವರಿಗೆ ಮತ್ತು ಸಾಲಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವ ಗುರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ನೆರವಿನಿಂದ ಸಾಲ ನೀಡುವ ಹಾಗೂ ತೆಗೆದುಕೊಳ್ಳುವ ಪ್ರಕ್ರಿಯೆ ಸುಲಭ, ಸುರಕ್ಷಿತ ಹಾಗೂ ತ್ವರಿತಗೊಳಿಸಲಾಗುವುದು. 2018-19 ಹಣಕಾಸು ವರ್ಷದಲ್ಲಿ ನಮ್ಮ ಸಾಲ ನೀಡಿಕೆ ವಹಿವಾಟನ್ನು ಇನ್ನಷ್ಟು ವಿಸ್ತರಿಸುವ ಗುರಿ ಹಾಕಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು