ನವದೆಹಲಿ: ದೇಶೀಯ ವಿಮಾನ ಮಾರ್ಗದಲ್ಲಿ 1.38 ಕೋಟಿಗೂ ಹೆಚ್ಚು ಪ್ರಯಾಣಿಕರು ಜೂನ್ ತಿಂಗಳಿನಲ್ಲಿ ಸಂಚರಿಸಿದ್ದಾರೆ.

2024ರ ಜೂನ್ನಲ್ಲಿ 1.32 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದಕ್ಕೆ ಹೋಲಿಸಿದರೆ ಶೇ 5.1ರಷ್ಟು ಏರಿಕೆಯಾಗಿದೆ. ಆದರೆ, ಇದೇ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಶೇ 2.3ರಷ್ಟು ಇಳಿಕೆಯಾಗಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್ಎ ತಿಳಿಸಿದೆ.

ಹೆಚ್ಚುತ್ತಿರುವ ವಿಮಾನ ಇಂಧನ ದರ (ಎಟಿಎಫ್) ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ದೇಶದ ವಿಮಾನಯಾನ ಉದ್ಯಮವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹2 ಸಾವಿರ ಕೋಟಿಯಿಂದ ₹3 ಸಾವಿರ ಕೋಟಿಯಷ್ಟು ನಷ್ಟ ಕಾಣುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ.

ಪ್ರಾಟ್ ಆ್ಯಂಡ್ ವಿಟ್ನಿಯ ಎಂಜಿನ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಇದು ಉದ್ಯಮದ ಸಾಮರ್ಥ್ಯ ಮತ್ತು ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದೆ.

2025–26ರ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶೀಯ ವಿಮಾನ ಮಾರ್ಗದಲ್ಲಿ 4.22 ಕೋಟಿಗೂ ಹೆಚ್ಚು ಪ್ರಯಾಣಿಕರು ಸಂಚಾರ ಮಾಡಿದ್ದಾರೆ. 2024–25ರ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ಸಂಚಾರದ ಬೆಳವಣಿಗೆ ಶೇ 7.6ರಷ್ಟಿತ್ತು.

ಜಾಗತಿಕ ರಾಜಕೀಯ ಬಿಕ್ಕಟ್ಟು, ಇಸ್ರೇಲ್–ಇರಾನ್ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಏರಿಕೆ, ಇರಾನ್ ಮತ್ತು ಪಾಕಿಸ್ತಾನ ತಮ್ಮ ವಾಯು ಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿರ್ಬಂಧಿಸಿದ್ದು, ಇತ್ತೀಚೆಗೆ ನಡೆದ ವಿಮಾನ ದುರಂತದ ಬಳಿಕ ವಿಮಾ ಕಂತು ಹೆಚ್ಚಳ ಸಾಧ್ಯತೆ ಮತ್ತು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುತ್ತಿರುವುದು ವಲಯಕ್ಕೆ ಸವಾಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ನಂತರ ವಿಮಾನ ಹಾರಾಟದ ರದ್ದತಿ ಮತ್ತು ಕಾರ್ಯಾಚರಣೆಯಲ್ಲಿನ ಸಮಸ್ಯೆಗಳಿಂದ ದೇಶದ ವಿಮಾನಯಾನ ಉದ್ಯಮದ ನಿರ್ವಹಣಾ ವೆಚ್ಚ ಕೆಲ ತಿಂಗಳಿನಿಂದ ಹೆಚ್ಚುತ್ತಿದೆ. ಆದರೂ ಇಲ್ಲಿಯವರೆಗೆ ಪ್ರಯಾಣಿಕರ ಸಂಚಾರ ಮತ್ತು ದರ ಸ್ಥಿರವಾಗಿದೆ ಎಂದು ತಿಳಿಸಿದೆ.

2025–26ರಲ್ಲಿ ಉದ್ಯಮವು ₹3 ಸಾವಿರ ಕೋಟಿ ನಷ್ಟ ಕಾಣುವ ಸಾಧ್ಯತೆ ಮೊದಲ ತ್ರೈಮಾಸಿಕದಲ್ಲಿ 4.22 ಕೋಟಿಗೂ ಹೆಚ್ಚು ಪ್ರಯಾಣಿಕರ ಸಂಚಾರ ಮೇ ತಿಂಗಳಿಗೆ ಹೋಲಿಸಿದರೆ ಜೂನ್ನಲ್ಲಿ ಶೇ 2.3ರಷ್ಟು ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.