ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕ್‌ ಇನ್‌ ಇಂಡಿಯಾ 2.0 ಜಪ; ದೇಶದಲ್ಲೇ ಡ್ರೋನ್‌, ರೋಬೊಟ್‌ ತಯಾರಿಕೆಗೆ ಒತ್ತು

Published 27 ಡಿಸೆಂಬರ್ 2023, 0:30 IST
Last Updated 27 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ನವದೆಹಲಿ: ಡ್ರೋನ್‌, ಗೊಂಬೆ, ರೋಬೊಟ್‌, ಪೀಠೋಪಕರಣ, ಅಲ್ಯೂಮಿನಿಯಂ, ಜವಳಿ ಸೇರಿದಂತೆ 24 ಉಪ ವಲಯಗಳಲ್ಲಿ ‘ಮೇಕ್‌ ಇನ್‌ ಇಂಡಿಯಾ 2.0’ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 

ಈ ವಲಯಗಳಲ್ಲಿ ಸ್ಥಳೀಯವಾಗಿಯೇ ತಯಾರಿಕೆಗೆ ಒತ್ತು ನೀಡಲಾಗುವುದು. ತಯಾರಾಗುವ ಉತ್ಪನ್ನಗಳ ರಫ್ತುಗೆ ಉತ್ತೇಜನ ನೀಡುವ ಮೂಲಕ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತಿಳಿಸಿದೆ.

ದೇಶದಲ್ಲಿ ಈಗಾಗಲೇ ಮೇಕ್‌ ಇನ್‌ ಇಂಡಿಯಾ ಯೋಜನೆಯು ಫಲಕಾರಿಯಾಗಿದೆ. ‘ಮೇಕ್‌ ಇನ್‌ ಇಂಡಿಯಾ 2.0’ ಹೆಸರಿನಡಿ ಉಪ ವಲಯಗಳಲ್ಲಿ ಪ್ರಗತಿ ಸಾಧಿಸಲು ಗುರಿ ನಿಗದಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಹೇಳಿದೆ.

ಈ ನಿಟ್ಟಿನಲ್ಲಿ ಡಿಪಿಐಐಟಿಯು 15 ತಯಾರಿಕಾ ವಲಯಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 12 ಸೇವಾ ವಲಯಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಲಿದೆ.

‘ಪ್ರಸ್ತುತ ಡಿಪಿಐಐಟಿಯು ಭಾರತದಲ್ಲಿ ಕೈಗಾರಿಕೆಯನ್ನು ಬಲವರ್ಧನೆಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ 24 ಉಪ ವಲಯಗಳಲ್ಲಿ ಕಾರ್ಯತತ್ಪರವಾಗಿದೆ. ಈ ವಲಯಗಳನ್ನು ಸ್ಪರ್ಧಾತ್ಮಕವಾಗಿ ಸಜ್ಜುಗೊಳಿಸುವುದು, ರಫ್ತು ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಉದ್ಯೋಗಾವಕಾಶ ಹೆಚ್ಚಿಸಲು ಒತ್ತು ನೀಡಿದೆ’ ಎಂದು ಸಚಿವಾಲಯ ತಿಳಿಸಿದೆ.

ನಿಗದಿಪಡಿಸಿರುವ ವಲಯಗಳ ಬೆಳವಣಿಗೆಗೆ ಸಮಗ್ರ ಹಾಗೂ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT