ಶನಿವಾರ, ಮೇ 8, 2021
26 °C

ಎನ್‌ಬಿಎಸ್‌ ಸಬ್ಸಿಡಿಯಲ್ಲಿ ಬದಲಾವಣೆ ಇಲ್ಲ: ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಸ್ಫೇಟ್‌ ಹಾಗೂ ಪೊಟಾಷ್‌ ರಸಗೊಬ್ಬರಗಳ ಪೋಷಕಾಂಶ ಆಧಾರಿತ ಸಬ್ಸಿಡಿಯಲ್ಲಿ (ಎನ್‌ಬಿಎಸ್‌) ಪ್ರಸಕ್ತ ಹಣಕಾಸು ವರ್ಷದಲ್ಲಿ (2021–22) ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಸಾರಜನಕಕ್ಕೆ (ಎನ್‌) ಕೆ.ಜಿ.ಗೆ ₹ 18.78, ಪಾಸ್ಪೇಟ್‌ಗೆ (ಪಿ) ಕೆ.ಜಿ.ಗೆ ₹ 14.88, ಪೊಟಾಷ್‌ಗೆ (ಕೆ) ಕೆ.ಜಿ.ಗೆ ₹ 10.11 ಹಾಗೂ ಗಂಧಕಕ್ಕೆ ಕೆ.ಜಿ.ಗೆ ₹ 2.37 ಸಬ್ಸಿಡಿ ನಿಗದಿ ಮಾಡಲಾಗಿತ್ತು.

‘ಮುಂದಿನ ಆದೇಶ ಬರುವವರೆಗೂ ಪೋಷಕಾಂಶ ಆಧಾರಿತ ಗೊಬ್ಬರಗಳ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ’ ಎಂದು ರಸಗೊಬ್ಬರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ರಸಗೊಬ್ಬರಗಳ ಬೆಲೆಯಲ್ಲಿ ಹೆಚ್ಚಳ ಮಾಡದಂತೆ ಸರ್ಕಾರ ಶುಕ್ರವಾರವೇ ಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಜಾಗತಿಕ ಮಟ್ಟದಲ್ಲಿ ರಸಗೊಬ್ಬರದ ದರ ಹೆಚ್ಚಳವಾಗಿರುವುದು ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಆಗಿರುವುದರಿಂದ, ಕಳೆದ ವರ್ಷದ ಸಬ್ಸಿಡಿಯನ್ನೇ ಮುಂದುವರಿಸಿದರೆ, ಚಿಲ್ಲರೆ ಮಾರಾಟ ಬೆಲೆಯ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಗೊಬ್ಬರ ತಯಾರಿಕಾ ಸಂಸ್ಥೆಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು