ನವದೆಹಲಿ : ದೇಶದ ಆರ್ಥಿಕ ಸ್ಥಿತಿಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹದಗೆಡುತ್ತಲೇ ಇದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಉತ್ತೇಜನಾ ಕ್ರಮಗಳು ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿವೆ.

ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರವು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿತ್ತು. ಇದೀಗ ಎರಡನೇ ತ್ರೈಮಾಸಿಕದಲ್ಲಿನ ಬೆಳವಣಿಗೆಯು ಅದಕ್ಕಿಂತಲೂ ಕಡಿಮೆ ಅಂದರೆ ಶೇ 4.5ರಷ್ಟಾಗಿದೆ. ಈ ಬೆಳವಣಿಗೆಯೂ ಆರು ವರ್ಷಗಳ ಕನಿಷ್ಠ ಮಟ್ಟದ್ದಾಗಿದೆ.

ಈ ಹಿಂದೆ 2012–13ರಲ್ಲಿ ಆರ್ಥಿಕತೆಯು ಶೇ 4.3ರಷ್ಟು ಕನಿಷ್ಠ ಮಟ್ಟದ ಬೆಳವಣಿಗೆ ಕಂಡಿತ್ತು.ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 7ರಷ್ಟು ಬೆಳವಣಿಗೆ ಸಾಧಿಸಿತ್ತು.

ಹಲವು ಸಂಸ್ಥೆಗಳ ವರದಿಯಂತೆಯೇಎರಡನೇ ತ್ರೈಮಾಸಿದಲ್ಲಿನ ಬೆಳವಣಿಗೆಯು ಶೇ 5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿಯೇ ಇದೆ.

ಆರು ತಿಂಗಳ ಅವಧಿಯಲ್ಲಿ (ಏಪ್ರಿಲ್–ಸೆಪ್ಟೆಂಬರ್) ಶೇ 7.5 ರಿಂದ ಶೇ 4.8ಕ್ಕೆ ಇಳಿಕೆಯಾಗಿದೆ.

ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಕೈಗೊಂಡ ಹಲವು ಉತ್ತೇಜನಾ ಕ್ರಮಗಳು ಯಾವುದೇ ಪರಿಣಾಮ ಬೀರಿಲ್ಲ.

ಮುಖ್ಯವಾಗಿ ಹೂಡಿಕೆಯನ್ನು ಹೆಚ್ಚಾಗುವಂತೆ ಮಾಡಲು ಕಾರ್ಪೊರೇಟ್ ತೆರಿಗೆ ದರದಲ್ಲಿ ಕಡಿತ ಮಾಡಿದೆ. ಬ್ಯಾಂಕ್ಗಳಿಗೆ ಪುನರ್ಧನ ನೀಡಿದೆ. ಜನರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡಲು 400 ಜಿಲ್ಲೆಗಳಲ್ಲಿ ಸಾಲ ಮೇಳ ಆಯೋಜಿಸಿ ₹ 2.42 ಲಕ್ಷ ಕೋಟಿ ನೀಡಿದೆ.

ಅಂಕಿ–ಅಂಶ

ಸಂಸ್ಥೆಗಳು ಮಾಡಿದ್ದ ಅಂದಾಜು (%)

ಎಸ್ಬಿಐ;4.2

ಫಿಚ್;4.7

ಎನ್ಸಿಎಇಆರ್;4.9

ಪ್ರಮುಖ ಕಾರಣಗಳು

ಇಳಿಮುಖವಾಗಿರುವ ಉಪಭೋಗದ ಪ್ರಮಾಣ

ಖಾಸಗಿ ಹೂಡಿಕೆಯಲ್ಲಿ ಇಳಿಕೆ

ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆ

ನಮ್ಮ ಸಮಾಜದ ಸ್ಥಿತಿಯು ಅರ್ಥ ವ್ಯವಸ್ಥೆಯಲ್ಲಿ ಪ್ರತಿಫಲಿಸಿದೆ. ನಂಬಿಕೆ ಮತ್ತು ಆತ್ಮವಿಶ್ವಾಸ ಛಿದ್ರವಾಗಿದೆ. ಹಾಗಾಗಿ, ಸಮಾಜದಲ್ಲಿರುವ ಭೀತಿಯ ವಾತಾವರಣವನ್ನು ಆತ್ಮವಿಶ್ವಾಸವಾಗಿ ಬದಲಿಸುವ ಅನಿವಾರ್ಯ ನಮ್ಮ ಮುಂದಿದೆ

-ಮನಮೋಹನ್ ಸಿಂಗ್
ಮಾಜಿ ಪ್ರಧಾನಿ

ನಮ್ಮ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಹಾಗಾಗಿ, ಮೂರನೇ ತ್ರೈಮಾಸಿಕದಿಂದ ಪ್ರಗತಿಯ ವೇಗ ಹೆಚ್ಚಲಿದೆ
-ಅತನು ಚಕ್ರವರ್ತಿ,
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.