ನವದೆಹಲಿ: ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್ಟಿ ಮಂಡಳಿ ಬುಧವಾರ ತೆಗೆದುಕೊಂಡಿದೆ.

ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ.

ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.

ದರ ಪರಿಷ್ಕರಣೆ ವೇಳೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಮಂಡಳಿ, ಸ್ಟೇಷನರಿ ವಸ್ತುಗಳಿಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಿದೆ. ಈವರೆಗೆ ಶೇ 12ರಷ್ಟು ಜಿಎಸ್ಟಿಗೆ ಒಳಪಡುತ್ತಿದ್ದ ಮ್ಯಾಪ್ಸ್, ಚಾರ್ಟ್ಸ್, ಗ್ಲೋಬ್ಸ್, ಪೆನ್ಸಿಲ್ಸ್ ಮತ್ತು ಶಾರ್ಪ್ನರ್, ಕ್ರೆಯಾನ್ಸ್, ನೋಟ್ಬುಕ್ಗಳಿಗೆ ಹೊಸ ವ್ಯವಸ್ಥೆಯಲ್ಲಿ ಯಾವುದೇ ತೆರಿಗೆ ಇಲ್ಲ. ಶೇ 5ರಷ್ಟು ಜಿಎಸ್ಟಿಗೆ ಒಳಪಟ್ಟಿದ್ದ ಎರೇಸರ್ಗೂ ತೆರಿಗೆಯಿಂದ ವಿನಾಯತಿ ಸಿಕ್ಕಿದೆ.

ತೆರಿಗೆಯಿಂದ ಸಂಪೂರ್ಣ ವಿನಾಯತಿ

ಮ್ಯಾಪ್ಸ್

ಚಾರ್ಟ್ಸ್

ಗ್ಲೋಬ್ಸ್

ಪೆನ್ಸಿಲ್ಸ್ ಮತ್ತು ಪೆನ್ಸಿಲ್ ಶಾರ್ಪ್ನರ್

ಕ್ರೆಯಾನ್ಸ್ ಮತ್ತು ಪಾಸ್ಟಲ್ಸ್

ಅಭ್ಯಾಸ ಪುಸ್ತಕ ಮತ್ತು ನೋಟ್ಬುಕ್

ಎರೇಸರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.