ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್ಟಿ ಮಂಡಳಿ ಬುಧವಾರ ತೆಗೆದುಕೊಂಡಿದೆ.

ಈ ನಿರ್ಧಾರ ಸಲೂನ್, ಜಿಮ್, ಫಿಟ್ನೆಸ್, ಯೋಗದಂತಹ ವೈಯಕ್ತಿಕ ಕಾಳಜಿಗಾಗಿ ಹಣ ವ್ಯಯಿಸುವವರಿಗೆ ಖುಷಿ ಸುದ್ದಿ ನೀಡಿದೆ.

ಜಿಎಸ್ಟಿ ನೋಂದಾಯಿತ ಸಲೂನ್, ಜಿಮ್, ಫಿಟ್ನೆಸ್, ಯೋಗ ಕೇಂದ್ರಗಳಿಂದ ಸೇವೆ ಪಡೆದುಕೊಳ್ಳುವುದಕ್ಕೆ ಇಲ್ಲಿವರೆಗೆ ಶೇ 18 ರಷ್ಟು ತೆರಿಗೆ ತೆರಬೇಕಿತ್ತು. ಆದರೆ ಜಿಎಸ್ಟಿ ಮಂಡಳಿ ನಿರ್ಧಾರದಿಂದ ಈ ಸೇವೆಗಳು ಇನ್ನುಂದೆ ಶೇ 5ರ ತೆರಿಗೆ ವ್ಯಾಪ್ತಿಯಲ್ಲಿ ದೊರಕಲಿವೆ.

ಇದರಿಂದ ಈ ಸೇವೆಗಳನ್ನು ಪಡೆದುಕೊಳ್ಳುವರ ಜೇಬಿಗೆ ಬಾರ ಬೀಳುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಷ್ಟು ದಿನ ಶೇ 18ರ ತೆರಿಗೆ ಹೊರೆಯಿಂದ ಇವು ದುಬಾರಿ ಸೇವೆಗಳಾಗಿ ಪರಿಣಮಿಸಿದ್ದವು. ಇನ್ಮುಂದೆ ಸಲೂನ್, ಜಿಮ್, ಫಿಟ್ನೆಸ್, ಯೋಗ ಕೇಂದ್ರಗಳಿಗೆ ತೆರಳುವವರಿಗೆ ಸ್ವಲ್ಪಮಟ್ಟಿನ ಹಣ ಉಳಿಯುತ್ತದೆ ಎನ್ನಲಾಗಿದೆ.

ಅಲ್ಲದೇ ಜಿಎಸ್ಟಿ ಬಾರವನ್ನು ಇಳಿಸಿರುವುದರಿಂದ ಈ ಸೇವೆಗಳನ್ನು ಪಡೆದುಕೊಳ್ಳುವವರ ಸಂಖ್ಯೆಯೂ ಭಾಗಶಃ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೊಸ ವ್ಯವಸ್ಥೆಯು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.

ಹಾಗೆಯೇ ಇದೇ ವ್ಯಾಪ್ತಿಯಲ್ಲಿ ಬರುವ ಶಾಂಪೂ, ಟಾಲ್ಕಮ್ ಪೌಡರ್, ಟೂತ್ಪೇಸ್ಟ್, ಟೂತ್ಬ್ರಶ್, ಫೇಸ್ ಪೌಡರ್, ಸೋಪು, ಹೇರ್ ಆಯಿಲ್ ಮೇಲೆ ಶೇ 18ರ ಬದಲು ಶೇ 5ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ.
.GST Reform: ಪೆನ್ಸಿಲ್, ಶಾರ್ಪ್ನರ್ ಸೇರಿ ಸ್ಟೇಷನರಿ ವಸ್ತುಗಳಿಗಿಲ್ಲ ಜಿಎಸ್ಟಿ.ಇದು 'ಜಿಎಸ್ಟಿ 1.5';'ಜಿಎಸ್ಟಿ 2.0'ಗಾಗಿ ಕಾಯುವಿಕೆ ಮುಂದುವರಿದಿದೆ: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.