ಕೋವಿಡ್–19 ಸಾಂಕ್ರಾಮಿಕದ ನಡುವೆಯೂ ಈ ವರ್ಷ ಬಹಳಷ್ಟು ಐಪಿಒಗಳು (ಆರಂಭಿಕ ಸಾರ್ವಜನಿಕ ಹೂಡಿಕೆ) ಆಗಿವೆ. ತುಸು ರಿಸ್ಕ್ ಇದ್ದರೂ, ದುಡ್ಡಿನಿಂದ ಇನ್ನಷ್ಟು ದುಡ್ಡು ಬೆಳೆಸಬೇಕು ಎನ್ನುವ ಮನಸ್ಸು ಇರುವವರಿಗೆ ‘ಐಪಿಒ’ ಒಳ್ಳೆಯ ಸಾಧನ.

ಐಪಿಒ ಎಂದರೇನು?

‘ಇನಿಷಿಯಲ್ ಪಬ್ಲಿಕ್ ಆಫರಿಂಗ್’ ಎಂಬುದು ‘ಐಪಿಒ’ದ ವಿಸ್ತೃತ ರೂಪ. ಕನ್ನಡದಲ್ಲಿ ಇದನ್ನು ಆರಂಭಿಕ ಸಾರ್ವಜನಿಕ ಹೂಡಿಕೆ ಎಂದು ಕರೆಯಬಹುದು. ಕಂಪನಿಯೊಂದು ಮೊದಲ ಬಾರಿಗೆ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ನೀಡಿ, ಬಂಡವಾಳ ಸಂಗ್ರಹ ಮಾಡುವ ಪ್ರಕ್ರಿಯೆಯೇ ‘ಐಪಿಒ’.

ಸರಳವಾಗಿ ಹೇಳುವುದಾದರೆ ಕಂಪನಿಯೊಂದು ತನ್ನ ಮಾಲಿಕತ್ವದ ಒಂದಷ್ಟು ಪಾಲನ್ನು ನಮ್ಮನಿಮ್ಮಂತಹ ಸಾಮಾನ್ಯ ಹೂಡಿಕೆದಾರರಿಗೆ ನೀಡುವ ಪ್ರಕ್ರಿಯೆಯೇ ಆರಂಭಿಕ ಸಾರ್ವಜನಿಕ ಕೊಡುಗೆ. ‘ಐಪಿಒ’ ಪ್ರಕ್ರಿಯೆ ಬಳಿಕ ಆ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಸ್ಥಾನ (ಲಿಸ್ಟಿಂಗ್) ಪಡೆದುಕೊಳ್ಳುತ್ತದೆ.

ನಮಗೇನು ಲಾಭ?

ಕಂಪನಿಯ ಪ್ರವರ್ತಕರು ಹೆಚ್ಚು ಬಂಡವಾಳ ಸಂಗ್ರಹಿಸಲು, ಉದ್ಯಮ ವಿಸ್ತರಿಸಲು, ದೈನಂದಿನ ನಿರ್ವಹಣಾ ವೆಚ್ಚ ನಿಭಾಯಿಸಲು, ಸಾಲ ಮರುಪಾವತಿಯ ಉದ್ದೇಶಕ್ಕಾಗಿ ಸೇರಿದಂತೆ ಕೆಲವು ಪ್ರಮುಖ ಕಾರಣಗಳಿಗೆ ಐಪಿಒಗೆ ಮುಂದಾಗುತ್ತಾರೆ. ಸಾರ್ವಜನಿಕರಿಂದ, ಬ್ಯಾಂಕ್‌ಗಳಿಂದ ಹಣ ಸಂಗ್ರಹಿಸುತ್ತಾರೆ. ನೀವು ನಿಮ್ಮ ಹಣ ತೊಡಗಿಸಿ ‘ಐಪಿಒ’ ಪಡೆದುಕೊಳ್ಳುವ ಕಂಪನಿಯು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದರೆ ಆ ಕಂಪನಿಯ ಏಳ್ಗೆಗೆ ಅನುಗುಣವಾಗಿ ಹೆಚ್ಚೆಚ್ಚು ಹಣ ಗಳಿಸುತ್ತೀರಿ. ಕಂಪನಿ ನಷ್ಟ ಅನುಭವಿಸಿದರೆ ಅದರ ಹೊರೆಯೂ ನಿಮ್ಮ ಮೇಲಿರುತ್ತದೆ.

ಪ್ರಮುಖ ಹಂತಗಳು

1. ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ: ಯಾವುದೇ ‘ಐಪಿಒ’ ಮಾಡುವಾಗ ಅದರ ಬಗ್ಗೆ ಜನರಿಗೆ ತಿಳಿಸುವುದು ಬಹಳಮುಖ್ಯವಾಗುತ್ತದೆ. ಸುದ್ದಿ ವಾಹಿನಿ, ದಿನಪತ್ರಿಕೆಗಳು, ಜಾಹಿರಾತು, ಡಿಜಿಟಲ್ ಮಾರ್ಕೆಟಿಂಗ್ಸೇರಿ ಹಲವು ಬಗೆಯ ಮಾಧ್ಯಮಗಳನ್ನು ಬಳಸಿಕೊಂಡು ಕಂಪನಿಗಳು ‘ಐಪಿಒ’ ಪ್ರಕ್ರಿಯೆಗೆ ಮುಂದಾಗುತ್ತವೆ. ಇದರಿಂದ ನಿರೀಕ್ಷಿತ ಬಂಡವಾಳ ಸಂಗ್ರಹ ಸಾಧ್ಯವಾಗುತ್ತದೆ.

2. ಷೇರಿಗೆ ಬೆಲೆ ನಿಗದಿ: ಕಂಪನಿಯು ಷೇರಿನ ಬೆಲೆ ನಿಗದಿ ಮಾಡುತ್ತದೆ. ಉದಾಹರಣೆಗೆ ₹ 100ರಿಂದ ₹ 120ರ ಬೆಲೆಯಲ್ಲಿ ಷೇರುಗಳ ಖರೀದಿಗೆ ಕಂಪನಿ ಅವಕಾಶ ಕಲ್ಪಿಸುತ್ತದೆ ಎಂದಿಟ್ಟುಕೊಳ್ಳಿ. ನೀವು ಆ ಕಂಪನಿಯ ಷೇರಿಗೆ ಎಷ್ಟು ಬೆಲೆನಿಗದಿಪಡಿಸಬಹುದು ಎನ್ನುವುದನ್ನು ತೀರ್ಮಾನಿಸಿ ಬಿಡ್ಡಿಂಗ್ ಮಾಡಬಹುದು. ಎಸ್‌ಬಿಐ ಕಾರ್ಡ್ಸ್ ಐಪಿಒ ದರವನ್ನು ₹ 750ರಿಂದ ₹ 755ಕ್ಕೆ ನಿಗದಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಿಮಗೆ
₹ 750ರಿಂದ ₹ 755ರ ನಡುವೆ ಬಿಡ್ ಮಾಡಲು ಅವಕಾಶವಿತ್ತು.

3. ಬುಕ್ ಬಿಲ್ಡಿಂಗ್: ‘ಐಪಿಒ’ದಲ್ಲಿ ಬುಕ್ ಬಿಲ್ಡಿಂಗ್ ಪ್ರಕ್ರಿಯೆ ಪ್ರಮುಖ ಹಂತ. ಈ ಅವಧಿಯಲ್ಲಿ ಕಂಪನಿಯ ಷೇರುಗಳಿಗಾಗಿ ಹೂಡಿಕೆದಾರರು ಬಿಡ್ ಮಾಡಬಹುದು. ಸಾಮಾನ್ಯವಾಗಿ ಬುಕ್ ಬಿಲ್ಡಿಂಗ್ ಹಂತದಲ್ಲಿ ಬಿಡ್ಡಿಂಗ್ ಮಾಡಲು ಮೂರು ದಿನಗಳ ಕಾಲಾವಕಾಶವಿರುತ್ತದೆ. ಉದಾಹರಣೆಗೆ ಎಸ್‌ಬಿಐ ಕಾರ್ಡ್ಸ್ ಐಪಿಒಗೆ ಬಿಡ್ ಮಾಡಲು ಈ ವರ್ಷದ ಮಾರ್ಚ್ 2ರಿಂದ 5ರ ವರೆಗೆ ಅವಕಾಶ ನೀಡಲಾಗಿತ್ತು.

4. ಕ್ಲೋಶರ್ (ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಳಿಸುವ ಪ್ರಕ್ರಿಯೆ): ‘ಐಪಿಒ’ ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಯಾವ ಬೆಲೆಗೆ ಗರಿಷ್ಠ ಬಿಡ್ಡಿಂಗ್ ಆಗಿದೆ ಎನ್ನುವುದನ್ನು ಆಧರಿಸಿ ಷೇರಿನ ಬೆಲೆ ನಿಗದಿ ಮಾಡಲಾಗುತ್ತದೆ. ನಂತರದಲ್ಲಿ ಐಪಿಒಗೆ ಬಿಡ್ಡಿಂಗ್ ಮಾಡಿದ್ದವರಿಗೆ ಷೇರುಗಳ ಹಂಚಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಕ್ಲೋಶರ್ ಎನ್ನುತ್ತಾರೆ.

5. ಷೇರು ಮಾರುಕಟ್ಟೆಗೆ ಸೇರ್ಪಡೆ (ಲಿಸ್ಟಿಂಗ್ ಡೇ): ‘ಐಪಿಒ’ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿರ್ದಿಷ್ಟ ಕಂಪನಿ ಷೇರು ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತದೆ. ಈ ಸೇರ್ಪಡೆ ಪ್ರಕ್ರಿಯೆಯ ನಂತರದಲ್ಲಿ ನಿರ್ದಿಷ್ಟ ಷೇರು ವಹಿವಾಟಿಗೆ ಮುಕ್ತವಾಗಲಿದೆ.

ಕೆಲವು ಸಲಹೆಗಳು

* ಐಪಿಒ ಬಿಡ್ಡಿಂಗ್‌ನಲ್ಲಿ ನಿಮಗೆ ಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗಬೇಕಾದರೆ ಮೊದಲನೇ ದಿನವೇ ಬಿಡ್ಡಿಂಗ್ ಮಾಡಿ.

* ಡಿ-ಮ್ಯಾಟ್ ಖಾತೆ ಆರಂಭಿಸಲು 2-3 ದಿನಗಳು ಬೇಕಾಗುತ್ತವೆ. ಹಾಗಾಗಿ ಕೂಡಲೇ ಡಿ-ಮ್ಯಾಟ್ ಖಾತೆ ತೆರೆಯಿರಿ. ಇನ್ನೊಂದು ಐಪಿಒ ಬರುವವರೆಗೂ ಕಾಯಬೇಡಿ.

* ಬಿಡ್ಡಿಂಗ್ ಮಾಡುವಾಗ ಎರಡೆರಡು ಕಡೆ ಬಿಡ್ಡಿಂಗ್ ಮಾಡಿ, ಒಂದು ಕಡೆ ಹೂಡಿಕೆದಾರ ಅಂತ ನಮೂದಿಸಿ ಮತ್ತೊಂದು ಕಡೆ ಷೇರುದಾರ ಎಂದು ನಮೂದಿಸಿದರೆ ನಿಮ್ಮ ಕೋರಿಕೆ ರದ್ದಾಗುವ ಸಾಧ್ಯತೆ ಇರುತ್ತದೆ.

* ಪತ್ನಿ, ತಂದೆ, ಸೋದರರ ಖಾತೆಯಿಂದ ಬಿಡ್ ಮಾಡಿ. ಪ್ಯಾನ್ ಆಧಾರದಲ್ಲಿ ಐಪಿಒ ಹಂಚಿಕೆಯಾಗುವುದರಿಂದ ಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.

ಹೂಡಿಕೆ ಮಾಡುವ ಮುನ್ನ ಗಮನಿಸಿ:

* ಹೂಡಿಕೆ ಮಾಡಲು ಬಯಸಿರುವ ಕಂಪನಿ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ.

* ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ? ಅವರ ಪೂರ್ವಾಪರಗಳೇನು ಗಮನಿಸಿಕೊಳ್ಳಿ.

* ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಕಲೆಹಾಕಿ.

* ಕಂಪನಿಯ ಮೌಲ್ಯವನ್ನು ಸರಿಯಾಗಿ ಅಂದಾಜು ಮಾಡಿ. ಕಂಪನಿಯು ಗಳಿಕೆಗೆ ಮಾಡುತ್ತಿರುವ ವೆಚ್ಚದ ಅನುಪಾತ (PE ratio) ಅರಿತುಕೊಳ್ಳಿ.

* ಐಪಿಒಗೆ ಹೋಗುವ ಕಂಪನಿಯು ತನ್ನ ಉದ್ಯಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕವಾಗಿ ಮುಕ್ತವಾಗಿಟ್ಟಿರುತ್ತದೆ. ಆ ದಾಖಲೆಯಲ್ಲಿ ಕಂಪನಿಯ ಹಣಕಾಸಿನ ಸ್ಥಿತಿಗತಿ ಸೇರಿ ಎಲ್ಲ ಮಾಹಿತಿ ಇರುತ್ತವೆ. ಇದನ್ನು ಸರಿಯಾಗಿ ಓದಿದಾಗ ನಿರ್ದಿಷ್ಟ ಐಪಿಒ ಹೂಡಿಕೆಗೆ ನೀವು ಮುಂದಾಗಬೇಕೇ ಬೇಡವೇ ಎನ್ನುವುದು ತಿಳಿಯುತ್ತದೆ.

* ಯಾರದ್ದೋ ಮಾತು ಕೇಳಿ ಐಪಿಒ ಹೂಡಿಕೆ ಮಾಡಬೇಡಿ.

ಹೂಡಿಕೆ ಹೇಗೆ?

1. ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ತೀರ್ಮಾನಿಸಿ: ಯಾವ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡಬೇಕು ಎಂದು ಮೊದಲು ತೀರ್ಮಾನಿಸಿ. ಕಂಪನಿಯ ಹಿನ್ನೆಲೆ, ಯಾವ ಉದ್ದೇಶಕ್ಕೆ ಐಪಿಒ ನಡೆಯುತ್ತಿದೆ, ಭವಿಷ್ಯದಲ್ಲಿ ಕಂಪನಿ ಹೇಗೆ ಬೆಳವಣಿಗೆ ಸಾಧಿಸಬಹುದು, ಕಂಪನಿಯ ಮುಂದಿನ ಯೋಜನೆಗಳೇನು ಎನ್ನುವುದನ್ನು ಅರಿತು ತೀರ್ಮಾನ ಕೈಗೊಳ್ಳಿ.

2. ಐಪಿಒ ಹೂಡಿಕೆಗೆ ಹಣ ಹೊಂದಿಸುವುದು: ಯಾವ ಐಪಿಒದಲ್ಲಿ ಹೂಡಿಕೆ ಮಾಡಬೇಕು ಎಂದು ತೀರ್ಮಾನಿಸಿದ ಬಳಿಕ ಎಷ್ಟು ಹಣ ಬೇಕಾಗುತ್ತದೆ ಎನ್ನುವುದನ್ನು ಅಂದಾಜು ಮಾಡಿಕೊಳ್ಳಿ. ನಿಮ್ಮ ಉಳಿತಾಯದ ಹಣವನ್ನು ಬಳಸಿ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡುವುದು ಸೂಕ್ತ.

3. ಡಿ-ಮ್ಯಾಟ್, ಟ್ರೇಡಿಂಗ್ ಖಾತೆ ಆರಂಭಿಸಿ: ಡಿ-ಮ್ಯಾಟ್ ಖಾತೆ ಇಲ್ಲದೆ ಐಪಿಒ ಹೂಡಿಕೆ ಸಾಧ್ಯವಿಲ್ಲ. ಬ್ಯಾಂಕ್‌ಗಳು ಅಥವಾ ವಿಶ್ವಾಸಾರ್ಹ ಆನ್‌ಲೈನ್ ಆ್ಯಪ್‌ಗಳ ಮೂಲಕ ಡಿ-ಮ್ಯಾಟ್ ಖಾತೆ ಆರಂಭಿಸಬಹುದು. ಇದಕ್ಕೆ ಪ್ಯಾನ್, ಆಧಾರ್ ಸೇರಿ ಕೆಲವು ದಾಖಲೆಗಳು ಬೇಕಾಗುತ್ತವೆ.

4. ಅರ್ಜಿಯ ಪ್ರಕ್ರಿಯೆ: ಹೂಡಿಕೆದಾರ ಬ್ಯಾಂಕ್ ಖಾತೆ ಅಥವಾ ಟ್ರೇಡಿಂಗ್ ಖಾತೆ ಮೂಲಕ ಐಪಿಒಗೆ ಅರ್ಜಿ ಸಲ್ಲಿಸಬಹುದು. ಕೆಲವು ವಿಶ್ವಾಸಾರ್ಹ ಆ್ಯಪ್‌ಗಳ ಮೂಲಕವೂ ಐಪಿಒಗೆ ಬಿಡ್ಡಿಂಗ್ ಮಾಡಬಹುದು. ಐಪಿಒ ಹೂಡಿಕೆಗೆ ಮತ್ತೊಂದು ಅಗತ್ಯ ASBA ವ್ಯವಸ್ಥೆ. ASBA ಅಂದ್ರೆ ಅಪ್ಲಿಕೇಷನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಮೌಂಟ್ ಅಂತ ಅರ್ಥ. ಈ ವ್ಯವಸ್ಥೆ ಇದ್ದಾಗ ಐಪಿಒಗೆ ಬಿಡ್ ಮಾಡಿರುವ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಾಯ್ದಿರಿಸಲು ಸಾಧ್ಯವಾಗುತ್ತದೆ.

5. ಬಿಡ್ಡಿಂಗ್: ಹೂಡಿಕೆದಾರ ಈ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡ ನಂತರ ಬಿಡ್ಡಿಂಗ್‌ಗೆ ಸಜ್ಜಾಗಬೇಕಾಗುತ್ತದೆ. ನಿಗದಿತ ಲಾಟ್ ಸೈಜ್‌ಗೆ (ಹೂಡಿಕೆದಾರ ಖರೀದಿಸಬೇಕಿರುವ ಕನಿಷ್ಠ ಸಂಖ್ಯೆಯ ಷೇರುಗಳು) ಅನುಗುಣವಾಗಿ ನೀವು ಬಿಡ್ಡಿಂಗ್ ಮಾಡಬೇಕಾಗುತ್ತದೆ. ನಿಗದಿತ ದರಕ್ಕೆ ತಕ್ಕಂತೆ ಹೂಡಿಕೆದಾರ ಬಿಡ್ ಮಾಡಬೇಕಾಗುತ್ತದೆ. ಅಂದಾಜು ಮಾಡಿದ್ದಕ್ಕಿಂದ ಹೆಚ್ಚು ಮಂದಿ ಐಪಿಒದಲ್ಲಿ ಹೂಡಿಕೆ ಮಾಡಿದಾಗ ಕೆಲ ಸಂದರ್ಭದಲ್ಲಿ ಷೇರುಗಳು ಸಿಗುವುದಿಲ್ಲ. ಈ ವೇಳೆ ASBA ವ್ಯವಸ್ಥೆ ಅಡಿ ಐಪಿಒ ಖರೀದಿಗಾಗಿ ಕಾಯ್ದಿರಿಸಿದ್ದ ಹಣವನ್ನು ಬ್ಯಾಂಕ್ ಗ್ರಾಹಕನಿಗೆ ಹಿಂದಿರುಗಿಸುತ್ತದೆ. ಐಪಿಒ ಅಡಿ ನಿಮಗೆ ಷೇರುಗಳು ಸಿಕ್ಕಿವೆ ಎಂದಾದರೆ ಐಪಿಒ ಪ್ರಕ್ರಿಯೆ ಆದ ಆರು ದಿನಗಳಲ್ಲಿ ಐಪಿಒ ಹಂಚಿಕೆ ದೃಢೀಕರಣ ಪತ್ರ CAN (Confirmatory Allotment Note) ಲಭ್ಯವಾಗುತ್ತದೆ. ನಂತರದಲ್ಲಿ ಷೇರುಗಳು ಹಂಚಿಕೆಯಾಗಿ ಡಿ-ಮ್ಯಾಟ್ ಖಾತೆಗೆ ದಾಖಲೆಗಳು ವರ್ಗಾವಣೆಯಾಗುತ್ತವೆ.

(ಲೇಖಕ: ‘ಇಂಡಿಯನ್ ಮನಿ ಡಾಟ್ ಕಾಂ’ನ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.