ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಹಲವು ವಿಧಗಳು ಇವೆ. ಚಿನ್ನವನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯುವುದು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿ ಇರುವ ಮಾರ್ಗಗಳಲ್ಲಿ ಒಂದು.

ಆದರೆ ಮ್ಯೂಚುವಲ್ ಫಂಡ್ ಹೂಡಿಕೆಗಳು ಹೆಚ್ಚೆಚ್ಚು ಜನಪ್ರಿಯವಾದಂತೆಲ್ಲ, ಮ್ಯೂಚುವಲ್ ಫಂಡ್ ಯೂನಿಟ್ಗಳನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯುವ ವಿಧಾನ ಕೂಡ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಬಹಳಷ್ಟು ಹಣಕಾಸು ಕಂಪನಿಗಳು ಈ ಬಗೆಯಲ್ಲಿ ಸಾಲವನ್ನು ವಿತರಿಸುತ್ತಿವೆ.

‘ಸಾಲ ಪಡೆಯುವ ಪ್ರಮೇಯ ಬೇಡ, ಇರುವ ಹೂಡಿಕೆಯನ್ನು ನಗದೀಕರಿಸಿಕೊಂಡು ಹಣಕಾಸಿನ ಅಗತ್ಯವನ್ನು ನಿಭಾಯಿಸೋಣ’ ಎನ್ನುವವರು ಕೂಡ ಈ ಸಾಲದತ್ತ ಮುಖ ಮಾಡಿರುವ ನಿದರ್ಶನಗಳು ಇವೆ. ಏಕೆಂದರೆ ಇಲ್ಲೊಂದು ಅನುಕೂಲ ಇದೆ. ಹೂಡಿಕೆಯನ್ನು ಹಿಂಪಡೆಯದೆ, ಅದರ ಆಧಾರದಲ್ಲಿ ಸಾಲ ಪಡೆದು, ನಂತರ ಇಎಂಐ ಮೂಲಕ ಸಾಲವನ್ನು ತೀರಿಸಬಹುದು. ಮುಂದೆ ದೀರ್ಘಾವಧಿಯಲ್ಲಿ ಹೂಡಿಕೆಯ ಮೌಲ್ಯವೃದ್ಧಿಯ ಪ್ರಯೋಜನವನ್ನು ಹೂಡಿಕೆದಾರ ಕಳೆದುಕೊಳ್ಳುವುದಿಲ್ಲ. ಆದರೆ ಆತ ಒಂದು ವೇಳೆ, ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಹಿಂಪಡೆದು ತನ್ನ ಹಣಕಾಸಿನ ಅಗತ್ಯವನ್ನು ನಿಭಾಯಿಸಿದಲ್ಲಿ, ಮುಂದೆ ಆ ಫಂಡ್ನ ಯೂನಿಟ್ಗಳು ಮೌಲ್ಯವರ್ಧನೆ ಕಂಡಲ್ಲಿ ಅದರ ಪ್ರಯೋಜನ ಆತನಿಗೆ ಇಲ್ಲವಾಗುತ್ತದೆ.

ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಅಡಮಾನವಾಗಿ ಇರಿಸಿ ಪಡೆದ ಸಾಲದಲ್ಲಿ ಇನ್ನೂ ಒಂದು ಅನುಕೂಲ ಇದೆ. ಸಾಲ ಮಂಜೂರು ಮಾಡಿದ ನಂತರ ಕೆಲವು ಹಣಕಾಸು ಸಂಸ್ಥೆಗಳು ಇಡೀ ಮೊತ್ತಕ್ಕೆ ಬಡ್ಡಿ ವಿಧಿಸುವುದಿಲ್ಲ. ಅದರ ಬದಲಿಗೆ ಅವು, ವ್ಯಕ್ತಿಯು ಮಂಜೂರಾದ ಮೊತ್ತದಲ್ಲಿ ಎಷ್ಟನ್ನು ಪಡೆದುಕೊಂಡಿದ್ದಾನೆಯೋ ಆ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸುತ್ತವೆ. ಇದು ಬಡ್ಡಿಯ ಹೊರೆಯನ್ನು ಒಂದಿಷ್ಟು ಕಡಿಮೆ ಮಾಡಿಕೊಡುತ್ತದೆ.

ಈಗಿನ ಕಾಲದ ಹಲವು ಹಣಕಾಸು ಸಂಸ್ಥೆಗಳಿಂದ ಮ್ಯೂಚುವಲ್ ಫಂಡ್ ಆಧಾರಿತ ಸಾಲವನ್ನು ಪಡೆಯಲು ಗ್ರಾಹಕರು ಶಾಖೆಗಳಿಗೆ ಭೇಟಿ ನೀಡುವ ಅಗತ್ಯ ಕೂಡ ಇಲ್ಲ. ಹಣಕಾಸು ಕಂಪನಿಗಳು ನೀಡುವ ವಿವರದ ಪ್ರಕಾರ, ಎಲ್ಲ ಪ್ರಕ್ರಿಯೆಗಳೂ ಆನ್ಲೈನ್ ಮೂಲಕವೇ ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.