ಮುಂಬೈ: ಭಾರತದ 284 ಶತಕೋಟ್ಯಧಿಪತಿಗಳ ಸಂಪತ್ತು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೂರನೇ ಒಂದು ಭಾಗದಷ್ಟಿದೆ ಎಂದು ಜಾಗತಿಕ ಸಿರಿವಂತರ ಪಟ್ಟಿ ಕುರಿತು ಹುರುನ್ ಗ್ಲೋಬಲ್ ಸಂಸ್ಥೆಯ ಗುರುವಾರ ಪ್ರಕಟಿಸಿರುವ ವರದಿ ತಿಳಿಸಿದೆ.

ಕಳೆದ ಬಾರಿ ಶತಕೋಟ್ಯಧಿಪತಿಗಳ ರಾಜಧಾನಿ ಪಟ್ಟ ಪಡೆದಿದ್ದ ಮುಂಬೈ ಈ ಬಾರಿ ತನ್ನ ಸ್ಥಾನ ಕಳೆದುಕೊಂಡಿದ್ದು, ಶಾಂಘೈ ಅಗ್ರಸ್ಥಾನಕ್ಕೇರಿದೆ.

ಶತಕೋಟ್ಯಧಿಪತಿಗಳ ಸಂಪತ್ತಿನ ಮೌಲ್ಯದಲ್ಲಿ ಶೇ 10ರಷ್ಟು ಏರಿಕೆಯಾಗಿದೆ. ಒಟ್ಟು ₹98 ಲಕ್ಷ ಕೋಟಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ₹1 ಲಕ್ಷ ಕೋಟಿ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸಂಪತ್ತು ಗಳಿಸಿದ ವ್ಯಕ್ತಿಯಾಗಿದ್ದಾರೆ. ಅವರ ಆಸ್ತಿಯ ಮೌಲ್ಯ ₹8.4 ಲಕ್ಷ ಕೋಟಿ ಆಗಿದೆ. ಕಳೆದ ವರ್ಷ ಅವರ ನಿವ್ವಳ ಸಂಪತ್ತಿನಲ್ಲಿ ಶೇ 13ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಆಸ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಇಳಿಕೆಯಾಗಿದ್ದು, ಸಂಪತ್ತಿನ ಮೌಲ್ಯ ₹8.6 ಲಕ್ಷ ಕೋಟಿ ಆಗಿದೆ.

ಎಚ್ಸಿಎಲ್ ಕಂಪನಿಯ ಸಂಸ್ಥಾಪಕ ಶಿವ ನಾಡಾರ್ ಅವರು, ಶೇ 47ರಷ್ಟು ಷೇರುಗಳನ್ನು ಪುತ್ರಿ ರೋಶನಿ ನಾಡಾರ್ ಅವರಿಗೆ ಇತ್ತೀಚೆಗೆ ಉಡುಗೊರೆಯಾಗಿ ನೀಡಿದ್ದರು. ಇದರಿಂದ ರೋಶನಿ ಅವರ ನಿವ್ವಳ ಸಂಪತ್ತಿನ ಮೌಲ್ಯ ₹3.5 ಲಕ್ಷ ಕೋಟಿ ಆಗಿದೆ. ಅವರು ಭಾರತದ ಅತಿ ಶ್ರೀಮಂತ ಮಹಿಳೆಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ 5ನೇ ಸಿರಿವಂತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.