ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಷೇರು ಖರೀದಿ; ಸಾರ್ವಜನಿಕರಿಗೆ ಮುಕ್ತವಾಗಿಸುವ ಪ್ರಕ್ರಿಯೆ ಮಾ. 11ರಿಂದ?

Last Updated 18 ಫೆಬ್ರುವರಿ 2022, 11:36 IST
ಅಕ್ಷರ ಗಾತ್ರ

ಸಿಡ್ನಿ/ನವದೆಹಲಿ: ಕೇಂದ್ರ ಸರ್ಕಾರದ ಮಾಲೀಕತ್ವದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಪ್ರಕ್ರಿಯೆಯು ಮಾರ್ಚ್ 11ರಿಂದ ಶುರುವಾಗುವ ಸಾಧ್ಯತೆ ಇದೆ. ಮಾ. 11ರಿಂದ ಆರಂಭಿಕ ಹೂಡಿಕೆದಾರರಿಗೆ ಅವಕಾಶ ಮುಕ್ತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಐಪಿಒ ಮೂಲಕ ₹ 60 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇತರ ಹೂಡಿಕೆದಾರರಿಗೆ ಎರಡು ದಿನಗಳ ನಂತರ ಅವಕಾಶ ಮುಕ್ತವಾಗಬಹುದು ಎಂದು ಗೊತ್ತಾಗಿದೆ. ಈ ಐಪಿಒಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅನುಮತಿಯು ಮಾರ್ಚ್‌ ಮೊದಲ ವಾರದಲ್ಲಿ ದೊರೆಯುವ ನಿರೀಕ್ಷೆ ಇದೆ. ಇದಾದ ನಂತರದಲ್ಲಿ, ಷೇರುಗಳ ಬೆಲೆ ಎಷ್ಟು ಎಂಬುದನ್ನು ತಿಳಿಸಲಾಗುತ್ತದೆ.

ಈ ಕುರಿತು ಅಧಿಕೃತ ಹೇಳಿಕೆ ನೀಡಲು ಎಲ್‌ಐಸಿ ನಿರಾಕರಿಸಿದೆ. ಮಾರ್ಚ್‌ 11ರ ವೇಳೆಗೆ ಐಪಿಒ ಶುರುವಾಗಬೇಕು ಎಂಬ ಗುರಿಯೊಂದಿಗೆ ನಿಗಮ ಕೆಲಸ ಮಾಡುತ್ತಿದೆ. ಕೊನೆಯಲ್ಲಿ, ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳುವ ಮೊದಲೇ ಐಪಿಒ ಪೂರ್ಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT