ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ ವೇಳೆಗೆ ರೆಪೊ ದರ ಶೇ 0.75ರಷ್ಟು ಏರಿಕೆ: ಎಸ್‌ಬಿಐ ಅಂದಾಜು

Last Updated 16 ಮೇ 2022, 20:18 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಹಣದುಬ್ಬರ ಪ್ರಮಾಣದಲ್ಲಿನ ಏರಿಕೆಗೆ ರಷ್ಯಾ–ಉಕ್ರೇನ್ ಯುದ್ಧ ದೊಡ್ಡ ಪಾತ್ರ ವಹಿಸಿದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಅಲ್ಲದೆ, ಹಣದುಬ್ಬರವು ಜಾಸ್ತಿ ಆಗಿರುವ ಕಾರಣದಿಂದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಜೂನ್ ಮತ್ತು ಆಗಸ್ಟ್‌ನಲ್ಲಿ ರೆಪೊ ದರವನ್ನು ಒಟ್ಟು ಶೇಕಡ 0.75ರಷ್ಟು ಜಾಸ್ತಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಅಂದಾಜಿಸಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧದಿಂದಾಗಿ ಹಣದುಬ್ಬರದ ಮೇಲೆ ಆಗಿರುವ ಪರಿಣಾಮ ಏನು ಎಂಬುದನ್ನು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಪರಿಶೀಲಿಸಿದ್ದಾರೆ. ಆಹಾರ, ಪಾನೀಯ, ಇಂಧನ, ಸಾರಿಗೆ ವಲಯಗಳಲ್ಲಿನ ಬೆಲೆ ಹೆಚ್ಚಳಕ್ಕೆ ಯುದ್ಧವು ಶೇ 52ರಷ್ಟು ಕೊಡುಗೆ ನೀಡಿದೆ ಎಂದಿದ್ದಾರೆ.

ಹಣದುಬ್ಬರ ಪ್ರಮಾಣವು ಸದ್ಯಕ್ಕೆ ಕಡಿಮೆ ಆಗುವ ಸಾಧ್ಯತೆ ಇಲ್ಲ. ಬೆಲೆ ಹೆಚ್ಚಳದ ವಿಚಾರದಲ್ಲಿ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳ ನಡುವೆ ವತ್ಯಾಸ ಕಂಡುಬಂದಿದೆ. ಆಹಾರ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ದುಷ್ಪರಿಣಾಮ ಕಂಡುಬಂದಿದೆ. ಇಂಧನ ಬೆಲೆ ಹೆಚ್ಚಳದ ದುಷ್ಪರಿಣಾಮವು ನಗರ ಪ್ರದೇಶಗಳಲ್ಲಿ ಜಾಸ್ತಿ ಇದೆ ಎಂದು ಅವರು ಹೇಳಿದ್ದಾರೆ.

ಬಡ್ಡಿ ದರ ಹೆಚ್ಚಳ

ನವದೆಹಲಿ: ಎಸ್‌ಬಿಐ ತನ್ನ ಎಂಸಿಎಲ್‌ಆರ್ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.1ರಷ್ಟು ಜಾಸ್ತಿ ಮಾಡಿದೆ. ಇದು ಮೇ 15ರಿಂದ ಜಾರಿಗೆ ಬಂದಿದೆ. ಇದರ ಪರಿಣಾಮವಾಗಿ ಎಂಸಿಎಲ್‌ಆರ್‌ ಆಧಾರದಲ್ಲಿ ಸಾಲಗಳ ಮರುಪಾವತಿ ಕಂತಿನಲ್ಲಿ ತುಸು ಏರಿಕೆ ಆಗಲಿದೆ.

ಎಸ್‌ಬಿಐ ಸಾಲದ ಬಡ್ಡಿ ದರವನ್ನು ಹೆಚ್ಚಿಸುತ್ತಿರುವುದು ಒಂದು ತಿಂಗಳಲ್ಲಿ ಇದು ಎರಡನೆಯ ಬಾರಿ. ಎಸ್‌ಬಿಐ ಕ್ರಮವನ್ನು ಇತರ ಕೆಲವು ಬ್ಯಾಂಕ್‌ಗಳೂ ಮುಂದಿನ ದಿನಗಳಲ್ಲಿ ಅನುಸರಿಸುವ ಸಾಧ್ಯತೆ ಇದೆ.

ಈಗಿನ ಪರಿಷ್ಕರಣೆಯ ನಂತರದ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ದರ ಶೇ 7.20 ಆಗಿದೆ. ಹೆಚ್ಚಿನ ಸಾಲಗಳು ಒಂದು ವರ್ಷದ ಎಂಸಿಎಲ್‌ಆರ್ ಆಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT