ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 200 ನಗರಗಳಲ್ಲಿ ಜಿಯೊ ಏರ್‌ಫೈಬರ್‌ ಸೇವೆ ಲಭ್ಯ

Published 23 ಫೆಬ್ರುವರಿ 2024, 12:31 IST
Last Updated 23 ಫೆಬ್ರುವರಿ 2024, 12:31 IST
ಅಕ್ಷರ ಗಾತ್ರ

ಬೆಂಗಳೂರು: ಜಿಯೊ ಏರ್‌ಫೈಬರ್ ಈಗ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ದೊರೆಯಲಿದೆ ಎಂದು ರಿಲಯನ್ಸ್‌ ಜಿಯೊ ಇನ್ಫೋಕಾಮ್ ಲಿಮಿಟೆಡ್‌ ತಿಳಿಸಿದೆ. 

ಈ ನಗರಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳಲ್ಲೂ ಜಿಯೊ ಏರ್‌ಫೈಬರ್ ಸೌಲಭ್ಯ ದೊರೆಯಲಿದೆ. ಜಿಯೊದ ಆಪ್ಟಿಕಲ್ ಫೈಬರ್ ಮೂಲ ಸೌಕರ್ಯವು ದೇಶದಾದ್ಯಂತ ಹದಿನೈದು ಲಕ್ಷ ಕಿಲೊಮೀಟರ್‌ನಷ್ಟು ವ್ಯಾಪಿಸಿದೆ ಎಂದು ತಿಳಿಸಿದೆ.

ಜಿಯೊ ಏರ್ ಫೈಬರ್ ಅತ್ಯುತ್ತಮ ದರ್ಜೆಯ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ. ಇದರೊಟ್ಟಿಗೆ ಡಿಜಿಟಲ್‌ ಮನರಂಜನಾ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಗ್ರಾಹಕರು ಪ್ಲಾನ್‌ಗಳ ಚಂದಾದಾರಿಕೆ ಪಡೆದರೆ ಒಟಿಟಿ ಅಪ್ಲಿಕೇಷನ್‌ಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶವಿದೆ. ಟಿ.ವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಸಾಧನಗಳಲ್ಲೂ ಅಪ್ಲಿಕೇಷನ್‌ಗಳನ್ನು ಬಳಸಬಹುದು ಎಂದು ವಿವರಿಸಿದೆ.

ಜಿಯೊ ಏರ್‌ಫೈಬರ್ ಸಂಪರ್ಕದ ಹೆಚ್ಚಳದಿಂದ ಭಾರತೀಯರ ಮನರಂಜನಾ ಹವ್ಯಾಸದಲ್ಲಿ ಭಾರೀ ಬದಲಾವಣೆಯಾಗಲಿದೆ. ಒಟಿಟಿ ಅಪ್ಲಿಕೇಷನ್‌ಗಳು, ಜಿಯೊ ಸಿನಿಮಾ ಮತ್ತು ಜಿಯೊ ಟಿ.ವಿಯಂತಹ ಪ್ಲಾಟ್‌ಫಾರ್ಮ್‌ಗಳು ಇದಕ್ಕೆ ವೇದಿಕೆಯಾಗಲಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT