ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇ ಸಲಹೆ

Last Updated 23 ಜೂನ್ 2020, 19:30 IST
ಅಕ್ಷರ ಗಾತ್ರ

- ಮೋಹನಾ, ಬೆಂಗಳೂರು

ಪ್ರಶ್ನೆ: ನಾನು ಮೊದಲನೇ ತಲೆಮಾರಿಗೆ ಸೇರಿದ ಮಹಿಳಾ ಉದ್ಯಮಿ. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪೇಪರ್ ಬೋರ್ಡಿನ ಬಾಕ್ಸ್ ಗಳನ್ನು ತಯಾರಿಸುವ ಉದ್ದಿಮೆ ನಡೆಸುತ್ತಿದ್ದೇನೆ. ನಾನು ಕೆಲವು ದೊಡ್ಡ ಪ್ರಮಾಣದ ಗ್ರಾಹಕರನ್ನು ಹೊಂದಿದ್ದೇನೆ. ನಾನು ಗ್ರಾಹಕರಿಂದ ಹಣ ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದೇನೆ. ಗ್ರಾಹಕರು ನನಗೆ ಹಣ ಸಂದಾಯ ಮಾಡಲು 120 ರಿಂದ 150 ದಿನಗಳ ಅವಧಿಯ ಸಮಯ ಕೇಳುತ್ತಾರೆ. ಆರ್ಡರ್‌ಗಳನ್ನು ಪಡೆಯುವ ಉದ್ದೇಶದಿಂದ ನಾನೂ ಸಹ ಹಣ ಪಾವತಿಗಾಗಿ ದೀರ್ಘ ಸಮಯದ ಕಾಲಾವಕಾಶ ನೀಡುತ್ತೇನೆ. ಸದ್ಯಕ್ಕೆ ನಾನು ಹಣದ ಕೊರತೆಯ ಸಮಸ್ಯೆ ಎದುರಿಸುತ್ತಿದ್ದೇನೆ. ಗ್ರಾಹಕರಿಂದ ನನಗೆ ಬರಬೇಕಾದ ಹಣವನ್ನು ಕ್ಲುಪ್ತ ಸಮಯದಲ್ಲಿ ಪಡೆದು ನನ್ನ ಬಳಿ ಹಣದ ಲಭ್ಯತೆಯನ್ನು ಹೇಗೆ ನಿಭಾಯಿಸಬಹುದು?

– ಎಂಎಸ್ಎಂಡಿ ಕಾಯ್ದೆಯ ಪ್ರಕಾರ, ಲಿಖಿತ ರೂಪದಲ್ಲಿ ಸಮ್ಮತಿಸಿರಲಿ ಅಥವಾ ಇಲ್ಲದಿರಲಿ, ಸರಕಿನ ಪರಿಮಾಣ / ಗುಣಮಟ್ಟದ ಕುರಿತು ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದಲ್ಲಿ, ಗ್ರಾಹಕರು ಮಾಲನ್ನು ಸ್ವೀಕರಿಸಿದ 45 ದಿನಗಳೊಳಗೆ ಮಾಲಿನ ಬಾಬ್ತು ಹಣ ಪಾವತಿ ಮಾಡತಕ್ಕದ್ದು. ತಡವಾಗಿ ಹಣ ಪಾವತಿ ಮಾಡಿದಲ್ಲಿ, ಹಾಗೆ ವಿಳಂಬವಾದ ಅವಧಿಗೆ ದಂಡದ ರೂಪದಲ್ಲಿ ಬಡ್ಡಿ ತೆರಲು ಕಾನೂನಿನಲ್ಲಿ ಅವಕಾಶವಿದೆ. ಕೇಂದ್ರ ಸರ್ಕಾರವು https://samadhaan.msme.gov.in ವಿಶೇಷ ಜಾಲತಾಣ ಪ್ರಾರಂಭಿಸಿದೆ. ಇದರ ಮೂಲಕ ಯಾವುದೇ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಪ್ರಮಾಣದ ಉದ್ದಿಮೆಗಳು ತಮ್ಮ ದೂರನ್ನು ಸಲ್ಲಿಸಬಹುದಾಗಿದೆ. ಆದರೂ ಸಹ ನಾವು ವಾಸ್ತವ ಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕಾಗಿದೆ. ಹಲವಾರು ಮಧ್ಯಮ, ಸಣ್ಣ ಮತ್ತು ಕಿರು ಉದ್ದಿಮೆಗಳು ತಮ್ಮ ಸರಕಿಗೆ ಮುಂದಿನ ಬೇಡಿಕೆ ಪಡೆಯಲು, ಹಣ ಪಾವತಿ ಮಾಡಲು ದೀರ್ಘ ಕಾಲಾವಕಾಶ ನೀಡುತ್ತವೆ. ಅವರು ಆಕ್ಷೇಪಣೆ ಮಾಡಿದಲ್ಲಿ ಅವರಿಗೆ ಆರ್ಡರ್ ಸಿಗದಿರುವ ಸಾಧ್ಯತೆ ಇರುತ್ತದೆ. ಬ್ಯಾಂಕುಗಳು ಈ ನಿಟ್ಟಿನಲ್ಲಿ ಹಣಕಾಸು ನೆರವನ್ನು ನೀಡುತ್ತವೆ. ಆದರೆ, ಅಂತಹ ಸೌಲಭ್ಯ ಕೇವಲ 90 ದಿನಗಳ ಅವಧಿಯವರೆಗೆ ಮಾತ್ರ ಲಭ್ಯ. ನಿಮ್ಮ ಬಳಿ ದೊಡ್ಡ ಪ್ರಮಾಣದ ಗ್ರಾಹಕರು ಇರುವುದರಿಂದ ಟಿಆರ್‌ಡಿಎಸ್ ಪ್ಲಾಟ್ ಫಾರಂಗಳಾದ – ಸಿಡ್ಬಿ ಮತ್ತು ಎನ್ ಎಸ್. ಇ ಒಡೆತನದ ಆರ್ ಎಕ್ಸ್ಐಎಲ್, ಮೈಂಡ್ ಸೊಲ್ಯೂಷನ್ ಒಡೆತನದ ಎಂ1 ಎಕ್ಸ್‌ಚೇಂಜ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಒಡೆತನದ ಇನ್‌ವಾಯ್ಸ್‌ ಮಾರ್ಟ್‌ನಲ್ಲಿ ಬಿಲ್ ಡಿಸ್ಕೌಂಟ್ ಮಾಡುವ ಸೌಲಭ್ಯ ಪಡೆಯಬಹುದಾಗಿದೆ.

***

- ವೈಭವ್, ಹುಬ್ಬಳ್ಳಿ

ಪ್ರಶ್ನೆ: ನಾನು ಪುಸ್ತಕದ ಅಂಗಡಿ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಕೆಫೆ ಹೊಂದಿದ್ದೇನೆ. ಮಕ್ಕಳು ಆಟವಾಡಲು ಸಹ ಇಲ್ಲಿ ಕೊಂಚ ಜಾಗ ಲಭ್ಯವಿದೆ. ಲಾಕ್‌ಡೌನ್ ಮೊದಲು, ಪೋಷಕರು ಮಕ್ಕಳೊಂದಿಗೆ ಬಂದು ಈ ಸ್ಥಳದಲ್ಲಿ ಸಮಯ ಕಳೆಯುತ್ತಿದ್ದರು. ಈಗ ಇದು ಸಂಪೂರ್ಣವಾಗಿ ನಿಂತುಹೋಗಿದೆ. ಬದಲಾಗಿ ನಾನು ಪೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಂಡು ಪುಸ್ತಕಗಳು ಮತ್ತು ಸ್ನ್ಯಾಕ್‌ಗಳನ್ನು ಮನೆಗಳಿಗೇ ತಲುಪಿಸುತ್ತಿದ್ದೇನೆ. ಹೀಗಾಗಿ ನನ್ನ ಅಂಗಡಿಯಲ್ಲಿ ಬಹುಭಾಗ ಸ್ಥಳ ಉಪಯೋಗವಾಗುತ್ತಿಲ್ಲ. ನಾನು ಬಾಡಿಗೆಗಾಗಿ ಖರ್ಚು ಮಾಡುತ್ತಿರುವ ಹಣವನ್ನು ಉಳಿಸಲು ಯಾವುದಾದರೂ ಮಾರ್ಗೋಪಾಯ ತಿಳಿಸಿರಿ.

– ನೀವು ಉಪಯೋಗಿಸದಿರುವ ಸ್ಥಳದಲ್ಲಿ ಪ್ರಾರಂಭ ಮಾಡಬಹುದಾದ ವ್ಯಾಪಾರ ನಿಮ್ಮ ಅಂಗಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಅವಕಾಶಗಳ ಮೇಲೆ ಅವಲಂಬಿತವಾಗಿದೆ. ನಿಮ್ಮ ಬಳಿ ಹೆಚ್ಚುವರಿ ಜಾಗವನ್ನು ಈ ಕೆಳಕಂಡ ಉದ್ದೇಶಗಳಿಗೆ ಬಳಸುಬಹುದಾಗಿದೆ. 1. ಆಕರ್ಷಕ ಹೂವುಗಳನ್ನು ಮಾರಾಟ ಮಾಡಲು 2. ಐಸ್ ಕ್ರೀಂ ಕೌಂಟರ್ 3. ಡಿಸೈನರ್ ಟೀ ಷರ್ಟ್ ಮಾರಾಟ ಮಾಡಲು ಮತ್ತು 4. ಕರಕುಶಲ ವಸ್ತುಗಳ ಮಾರಾಟ. ಅಥವಾ, ನೀವು ಅಂಗಡಿಯ ಸ್ಥಳವನ್ನು (ಭೌತಿಕವಾಗಿ, ಸಾಧ್ಯವಿದ್ದಲ್ಲಿ) ಕಡಿಮೆ ಮಾಡಿಕೊಂಡು, ಬಾಡಿಗೆಯನ್ನು ಪುನಃ ನಿಷ್ಕರ್ಷೆ ಮಾಡಬಹುದಾಗಿದೆ. ಹಲವಾರು ರಿಟೇಲರ್‌ಗಳು, ವಿಶೇಷವಾಗಿ ಮಾಲ್‌ಗಳಲ್ಲಿ ವ್ಯಾಪಾರ ಮಾಡುವವರು ಈ ವ್ಯವಸ್ಥೆ ಮಾಡಿಕೊಂಡಿದ್ದಾರೆ.

***

- ಧ್ಯಾನೇಶ್, ಯಾದಗೀರ

ಪ್ರಶ್ನೆ: ನಾನು 20 ಕೆಲಸಗಾರರೊಂದಿಗೆ ಕೈಯಿಂದ ಅಗರಬತ್ತಿ ಮಾಡುವ ಉದ್ಯಮವನ್ನು ಪ್ರಾರಂಭಿಸಿದೆ. ಕಳೆದ ವರ್ಷ ನಾನು ಈ ಉದ್ದೇಶಕ್ಕಾಗಿ ಯಂತ್ರವನ್ನು ಖರೀದಿಸಿದ್ದು, ಈಗ ನನ್ನ ಮನೆಯಿಂದಲೇ ಕೇವಲ ಒಬ್ಬ ಕೆಲಸಗಾರನೊಂದಿಗೆ ತಯಾರಿಕೆ ಮುಂದುವರಿಸಿದ್ದೇನೆ. ಉತ್ಪಾದನೆ ಹೆಚ್ಚಳ ಮಾಡಲು ನಾನು ಮತ್ತೊಂದು ಯಂತ್ರವನ್ನು ಖರೀದಿಸುವ ಉದ್ದೇಶ ಹೊಂದಿದ್ದೇನೆ. ಈ ನನ್ನ ತೀರ್ಮಾನ ಸರಿಯೇ. ತಿಳಿಸಿ.

ಅಗರಬತ್ತಿಗಳನ್ನು ಆಮದು ಮಾಡಿಕೊಳ್ಳುವುದನ್ನು ಕೇಂದ್ರ ಸರ್ಕಾರವು ಕಳೆದ ವರ್ಷ ನಿಷೇಧಿಸಿದೆ. ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳಿಂದ ಅಗರಬತ್ತಿ ಮತ್ತು ಅದೇ ತರಹದ ಇನ್ನಿತರ ಸಾಮಗ್ರಿಗಳ ಆಮದು ಹೆಚ್ಚಾಗುತ್ತಿರುವುದನ್ನು ಗಮನಿಸಿದ ನಂತರ ಕೇಂದ್ರ ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸ್ಥಳೀಯ ಉತ್ಪಾದಕರು ಉತ್ತಮ ಅವಕಾಶಗಳನ್ನು ಹೊಂದಿರುವ ಸಾಧ್ಯತೆ ಇದೆ. ಮೇಲಾಗಿ, ನಿಮ್ಮ ಉದ್ಯಮವನ್ನು ವಿಸ್ತರಿಸುವ ಮುನ್ನ ಸ್ಥಳೀಯ ಮಾರುಕಟ್ಟೆ ಮತ್ತು ಸ್ಪರ್ಧಾತ್ಮಕತೆ ಕುರಿತು ಒಂದು ಚುರುಕಾದ ಮಾರುಕಟ್ಟೆ ಸಮೀಕ್ಷೆ ಮಾಡಿರಿ. ರಿಸ್ಕ್ ಕಡಿಮೆ ಮಾಡುವ ಉದ್ದೇಶಕ್ಕಾಗಿ, ನಿಮ್ಮ ಉತ್ಪನ್ನಗಳ ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸೂಕ್ತ.

‘ಕೋವಿಡ್-19’ ಪಿಡುಗಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳು ‌ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ. ಗ್ಲೋಬಲ್‌ ಅಲಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರಿನ್ಯೂಅರ್‌ಶಿಪ್‌ (ಜಿಎಎಂಇ) ಸಹ ಸ್ಥಾಪಕ ಮದನ್‌ ಪದಕಿ ಅವರು ಉದ್ಯಮಿಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ ಇಲ್ಲಿ ಪರಿಹಾರ ಸೂಚಿಸುತ್ತಾರೆ. ಪ್ರಶ್ನೆ, ಸಲಹೆಗಳಿಗೆ ಸಹಾಯವಾಣಿ (73977 79520) ಮತ್ತು ಇ–ಮೇಲ್‌ gamesupportnetwork@massentrepreneurship.org ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT