ಬೆಂಗಳೂರು: ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಂಡಿಸಿರುವ ಹೊಸ ಆದಾಯ ತೆರಿಗೆ ಮಸೂದೆಯು ತೆರಿಗೆಗೆ ಸಂಬಂಧಿಸಿದಂತೆ ತೆರಿಗೆದಾರರಲ್ಲಿ ಇದ್ದ ಹಲವು ಗೊಂದಲಗಳಿಗೆ ಪರಿಹಾರೋಪಾಯ ನೀಡಿದೆ.

ಮಸೂದೆಯಲ್ಲಿ ‘ತೆರಿಗೆ ವರ್ಷ’ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ಆಯಾ ಆರ್ಥಿಕ ವರ್ಷದ ಏಪ್ರಿಲ್ನಿಂದ ಆರಂಭವಾಗುವ 12 ತಿಂಗಳ ಅವಧಿ ಇದಾಗಿದೆ.

1961ರ ಆದಾಯ ತೆರಿಗೆ ಕಾಯ್ದೆ ಅಡಿ ಬಳಸಿರುವ ‘ಹಿಂದಿನ ವರ್ಷ’ ಎಂಬುದನ್ನು ಬದಲಾಯಿಸಲಾಗಿದೆ. ‘ಮೌಲ್ಯಮಾಪನ ವರ್ಷ’ದ ಪರಿಕಲ್ಪನೆಯನ್ನೂ ಕೈಬಿಡಲಾಗಿದೆ.

ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ತೆರಿಗೆಯು, ಅದು ಆರಂಭಗೊಂಡ ದಿನಾಂಕದಿಂದ ಪ್ರಾರಂಭವಾಗಿ ಆಯಾ ಆರ್ಥಿಕ ವರ್ಷದ ಅಂತ್ಯಕ್ಕೆ ಅನ್ವಯಿಸಲಿದೆ. (ತೆರಿಗೆ ವರ್ಷ). ಈ ಅವಧಿಯೊಳಗಿನ ಆರ್ಥಿಕ ಚಟುವಟಿಕೆಗಳು ಮತ್ತು ಗಳಿಕೆಯ ಆಧಾರದ ಮೇಲೆ ತೆರಿಗೆದಾರರು ಆದಾಯ ತೆರಿಗೆಯನ್ನು ಪಾವತಿಸಬೇಕಿದೆ.

ಪ್ರಸ್ತುತ ಐಟಿಆರ್ ಸಲ್ಲಿಕೆಗೆ ‘ಮೌಲ್ಯಮಾಪನ ವರ್ಷ’ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಇದರಡಿ ಹಿಂದಿನ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯದ ಮೇಲೆ ತೆರಿಗೆಯನ್ನು ನಿರ್ಣಯಿಸಲಾಗುತ್ತದೆ.

ಉದಾಹರಣೆಗೆ 2024-25ನೇ ಆರ್ಥಿಕ ವರ್ಷದಲ್ಲಿ (2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರ ವರೆಗೆ) ಗಳಿಸಿದ ಆದಾಯವನ್ನು 2025-26ನೇ ಮೌಲ್ಯಮಾಪನ ವರ್ಷದಲ್ಲಿ (2025ರ ಏಪ್ರಿಲ್ 1ರಿಂದ ಪ್ರಾರಂಭ) ನಿರ್ಣಯಿಸಲಾಗುತ್ತದೆ. ಇದರಿಂದ ತೆರಿಗೆದಾರರಲ್ಲಿ ನಾವು ಯಾವ ವರ್ಷದ ತೆರಿಗೆ ಪಾವತಿಸುತ್ತಿದ್ದೇವೆ ಎಂಬ ಗೊಂದಲ ಮೂಡುತ್ತಿತ್ತು. ಮಸೂದೆಯಲ್ಲಿ ‘ತೆರಿಗೆ ವರ್ಷ’ ಕುರಿತಂತೆ ಮರು ವ್ಯಾಖ್ಯಾನ ನೀಡಿರುವುದರಿಂದ ಈ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ತೆರಿಗೆ ತಜ್ಞರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅನುಸರಿಸುತ್ತಿರುವ ‘ತೆರಿಗೆ ವರ್ಷ’ದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತೆರಿಗೆ ಚೌಕಟ್ಟಿನ ಸುಧಾರಣೆಗೆ ಒತ್ತು ನೀಡಲಾಗಿದೆ. ಮಸೂದೆ ಮಂಡನೆಯು ತೆರಿಗೆ ಬಗ್ಗೆ ಹೆಚ್ಚು ಸ್ಪಷ್ಟತೆ ಮತ್ತು ದಕ್ಷತೆ ತರುವ ಮಹತ್ವದ ಹೆಜ್ಜೆಯಾಗಿದೆ. ಇದು ಸಂಸತ್ನಲ್ಲಿ ಅಂಗೀಕಾರವಾದರೆ 2026ರ ಏಪ್ರಿಲ್ನಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಹಳೆ, ಹೊಸ ತೆರಿಗೆ ಪದ್ಧತಿ ಯಥಾಸ್ಥಿತಿ

ಮಸೂದೆಯಲ್ಲಿ ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಈಗಾಗಲೇ, ಹಲವು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಸೂದೆಯು ಕಾಯ್ದೆಯಾಗಿ ಅನುಷ್ಠಾನಗೊಂಡಾಗ ಮತ್ತೆ ಅವರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಹಾಲಿ ಇರುವ ಕಾಯ್ದೆಯಡಿ ತೆರಿಗೆದಾರರಿಗೆ ಕಲ್ಪಿಸಿರುವ ಹಕ್ಕು ಹಾಗೂ ಕರ್ತವ್ಯಗಳು ಮುಂದುವರಿಯಲಿವೆ.

2025–26ನೇ ಸಾಲಿನ ಬಜೆಟ್ನಲ್ಲಿ ಹೊಸ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ತೆರಿಗೆ ಸ್ಲ್ಯಾಬ್ಗಳನ್ನು ಪರಿಷ್ಕರಿಸಲಾಗಿದೆ. ವೇತನದಾರ ವರ್ಗಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯವಿದೆ.

ಅಲ್ಲದೆ, ಹಳೆಯ ತೆರಿಗೆ ಪದ್ಧತಿಯಡಿ ವೈಯಕ್ತಿಕ ತೆರಿಗೆದಾರರಿಗೆ ಹಲವು ತೆರಿಗೆ ವಿನಾಯಿತಿ ದೊರೆಯುತ್ತಿದೆ. ಹೊಸ ಮಸೂದೆಯಲ್ಲಿಯೂ ಇದರಲ್ಲಿ ಬದಲಾವಣೆ ಮಾಡಿಲ್ಲ.

ಮುಂಗಡ ತೆರಿಗೆ ಪರಿಷ್ಕರಿಸಿಲ್ಲ

ಸಂಬಳ ಹೊರತುಪಡಿಸಿ ಇತರೆ ಆದಾಯದ ಮೂಲ ಹೊಂದಿರುವ ವ್ಯಕ್ತಿಗಳು ಪಾವತಿಸಬೇಕಾದ ತೆರಿಗೆಗೆ ‘ಮುಂಗಡ ತೆರಿಗೆ’ ಎಂದು ಕರೆಯಲಾಗುತ್ತದೆ. ಬಾಡಿಗೆ, ಷೇರುಗಳಿಂದ ಬರುವ ಲಾಭ, ಸ್ಥಿರ ಠೇವಣಿ ಇತ್ಯಾದಿಗಳಿಗೆ ಇದು ಅನ್ವಯಿಸುತ್ತದೆ. ಆರ್ಥಿಕ ವರ್ಷದಲ್ಲಿ ತೆರಿಗೆ ಹೊಣೆಗಾರಿಕೆಯು ₹10 ಸಾವಿರ ಮೀರಿದರೆ ಈ ತೆರಿಗೆ ಅನ್ವಯವಾಗಲಿದೆ.

ಯಾವ ಆರ್ಥಿಕ ವರ್ಷದಲ್ಲಿ ಆದಾಯ ಬಂದಿದೆಯೋ ಅದೇ ವರ್ಷದಲ್ಲಿ ತೆರಿಗೆ ಪಾವತಿಸಬೇಕಿದೆ. ಮಸೂದೆಯಲ್ಲಿ ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಪರಿಷ್ಕರಿಸಿಲ್ಲ. ಆದರೆ, ಗೊಂದಲವಿದ್ದ ನಿಬಂಧನೆಗಳನ್ನು ಕೈಬಿಡಲಾಗಿದೆ.

80ಸಿ ಪುನರ್ರಚನೆ

ಸೆಕ್ಷನ್ 80ಸಿ ಅಡಿ ವೈಯಕ್ತಿಕ ತೆರಿಗೆದಾರರಿಗೆ ಪಿಪಿಎಫ್, ಜೀವ ವಿಮೆ, ಟ್ಯೂಷನ್ ಶುಲ್ಕ, ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಐದು ವರ್ಷದ ಅವಧಿಯ ಠೇವಣಿ ಒಳಗೊಂಡು, ಒಂದು ವರ್ಷದಲ್ಲಿ ₹1.5 ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗಲಿದೆ.

ಈ ವಿನಾಯಿತಿ ಕುರಿತು ಇದ್ದ ಸುದೀರ್ಘ ವಿವರಣೆಯನ್ನು ಮಸೂದೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಡಿಡಕ್ಷನ್ ಮಿತಿ ಬಗ್ಗೆ ಸ್ಪಷ್ಟಪಡಿಸಲಾಗಿದೆ. ತೆರಿಗೆದಾರರಿಗೆ ಲಭ್ಯವಿರುವ ಡಿಡಕ್ಷನ್ಗಳ ಬಗ್ಗೆ ಸರಳವಾಗಿ ವಿವರಿಸಲಾಗಿದೆ. ಇದು ತೆರಿಗೆದಾರರಿಗೆ ಸುಲಭವಾಗಿ ಅರ್ಥವಾಗಲಿದೆ.

80ಜಿ ಸುಧಾರಣೆ

ಆದಾಯ ತೆರಿಗೆ ಇಲಾಖೆಯಡಿ ನೋಂದಣಿಯಾದ ದತ್ತಿ ಸಂಸ್ಥೆಗಳಿಗೆ ನೀಡಿದ ದೇಣಿಗೆಯಿಂದ ತೆರಿಗೆದಾರರು ತೆರಿಗೆ ವಿನಾಯಿತಿ ಪಡೆಯಲು ಸೆಕ್ಷನ್ 80ಜಿ ಅಡಿ ಅವಕಾಶವಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ದೇಣಿಗೆ ಮೊತ್ತವನ್ನು ಪರಿಷ್ಕರಿಸಲಾಗಿದೆ. ಶೇ 100ರಷ್ಟು ಮತ್ತು ಶೇ 50ರಷ್ಟು ಎಂದು ವರ್ಗೀಕರಿಸಲಾಗಿದ್ದು, ಎಷ್ಟು ಮೊತ್ತದ ದೇಣಿಗೆಗೆ ಎಷ್ಟು ರಿಯಾಯಿತಿ ದೊರೆಯಲಿದೆ ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

80ಟಿಟಿಎ–80ಟಿಟಿಬಿ ವಿಲೀನ

ಸೆಕ್ಷನ್ 80ಟಿಟಿಎ ಅಡಿ ವ್ಯಕ್ತಿಯೊಬ್ಬರು ಗಳಿಸುವ ₹10 ಸಾವಿರದ ವರೆಗಿನ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿಯಿದೆ. ಅಂಚೆ ಕಚೇರಿ ಹಾಗೂ ಉಳಿತಾಯ ಖಾತೆ ಹೂಡಿಕೆಗಳ ಮೇಲೆ ಬರುವ ಬಡ್ಡಿಗೆ ಇದು ಅನ್ವಯವಾಗಲಿದೆ. ಸೆಕ್ಷನ್ 80ಟಿಟಿಬಿ ಅಡಿ ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಮತ್ತು ಅವಧಿ ಠೇವಣಿ ಮೇಲೆ ಸಿಗುವ ಬಡ್ಡಿಗೆ ₹50 ಸಾವಿರದ ತನಕ ವಿನಾಯಿತಿ ದೊರೆಯಲಿದೆ.

ಮಸೂದೆಯಲ್ಲಿ ಈ ಸೆಕ್ಷನ್ಗಳನ್ನು ವಿಲೀನಗೊಳಿಸಿ ಒಂದೇ ಸೆಕ್ಷನ್ ರೂಪಿಸಲಾಗಿದೆ. ಸಬ್ ಸೆಕ್ಷನ್ಗಳ ಅಡಿ ವಿನಾಯಿತಿ ಬಗ್ಗೆ ವಿವರಣೆ ನೀಡಲಾಗಿದೆ. ವಿವಿಧ ವರ್ಗದ ತೆರಿಗೆದಾರರಿಗೆ ವಿನಾಯಿತಿಯ ಅರ್ಹತೆ, ಡಿಡಕ್ಷನ್ ಮಿತಿ ಬಗ್ಗೆ ವಿವರಿಸಲಾಗಿದೆ. ಇದರಿಂದ ಹಿರಿಯ ನಾಗರಿಕರು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾಗಲಿದೆ.

80ಆರ್ಆರ್ಬಿ ಸರಳೀಕರಣ

ಪೇಟೆಂಟ್ನಿಂದ ರಾಯಧನದ ರೂಪದಲ್ಲಿ ಪಡೆಯುವ ತೆರಿಗೆ ಆದಾಯಕ್ಕೆ ಸೆಕ್ಷನ್ 80ಆರ್ಆರ್ಬಿ ಅಡಿ ತೆರಿಗೆದಾರರಿಗೆ ಡಿಡಕ್ಷನ್ ಸೌಲಭ್ಯವಿದೆ. ಈ ಪ್ರಯೋಜನ ಪಡೆಯಲು ಯಾವ ತೆರಿಗೆದಾರರು ಅರ್ಹ ಎಂಬ ಬಗ್ಗೆ ಸ್ಪಷ್ಟಪಡಿಸಲಾಗಿದೆ. ಡಿಡಕ್ಷನ್ ಮೊತ್ತದ ಬಗ್ಗೆ ಇದ್ದ ಅರ್ಥ ವಿವರಣೆಯನ್ನು ಸರಳೀಕರಣಗೊಳಿಸಲಾಗಿದೆ.

ಹೂಡಿಕೆ ವಿನಾಯಿತಿ ಮುಂದುವರಿಕೆ

ಕಾಯ್ದೆಯಡಿ ವೈಯಕ್ತಿಕ ತೆರಿಗೆದಾರರಿಗೆ ಹೂಡಿಕೆಗೆ ಅನುಗುಣವಾಗಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. 80ಸಿ, 80ಸಿಸಿಡಿ, 80ಡಿ, 80ಡಿಡಿ, 80ಡಿಡಿಬಿ, 80ಇಇಎ, 80ಇಇಬಿ ಮತ್ತು 80ಯು ಅಡಿ ವಿನಾಯಿತಿ ಸಿಗಲಿದೆ. ಹೊಸ ಮಸೂದೆಯಲ್ಲೂ ಈ ಸೌಲಭ್ಯವನ್ನು ಮುಂದುವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.