ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀತಾ ಅಂಬಾನಿ ಹೆಸರಲ್ಲಿ ನಕಲಿ ಟ್ವೀಟ್: ಟ್ವಿಟರ್ ಖಾತೆ ಅಮಾನತು

ಫಾಲೋ ಮಾಡಿ
Comments

ಮುಂಬಯಿ: ಫೇಕ್ ಖಾತೆಗಳ ಹಾವಳಿ ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಗೂ ತಟ್ಟಿದೆ. ನೀತಾ ಅಂಬಾನಿ ಹೆಸರಲ್ಲಿ ರಚನೆಯಾದ ನಕಲಿ ಟ್ವಿಟರ್ ಖಾತೆಗಳ ಮೂಲಕ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಲಾಗಿದ್ದು, ಇದನ್ನು ರಿಲಾಯನ್ಸ್ ಜಿಯೋ ಇನ್ಫೋಕಾಂ ತೀಕ್ಷ್ಣವಾಗಿ ಖಂಡಿಸಿದೆ.

ಈ ಕುರಿತು ರಿಲಾಯನ್ಸ್ ಜಿಯೋ ಇನ್ಫೋಕಾಂ ವಕ್ತಾರರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ. "ನೀತಾ ಅಂಬಾನಿ ಹೆಸರಿನಲ್ಲಿ ತೆರೆದ ಕೆಲವು ನಕಲಿ ಟ್ವಿಟರ್ ಖಾತೆಗಳಿಂದಸಾಕಷ್ಟು ಟ್ವೀಟ್‌ಗಳು ಬಂದಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನೀತಾ ಅಂಬಾನಿ ಅವರಿಗೆ ಯಾವುದೇ ಅಧಿಕೃತ ಟ್ವಿಟರ್ ಖಾತೆಯಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಅವರ ಹೆಸರು ಮತ್ತು ಭಾವಚಿತ್ರ ಇರುವ ಟ್ವಿಟರ್ ಖಾತೆಗಳು ನಕಲಿಯಾಗಿವೆ" ಎಂದು ವಕ್ತಾರರು ತಿಳಿಸಿದ್ದಾರೆ.

ಯಾವುದೇ ನಕಲಿ ಟ್ವಿಟರ್ ಖಾತೆಯಿಂದ ದುರುದ್ದೇಶಪೂರ್ವಕವಾಗಿ ಮಾಡಿರುವ ಟ್ವೀಟ್‌ಗಳನ್ನು ನಿರ್ಲಕ್ಷಿಸುವಂತೆ ಈ ಮೂಲಕ ವಿನಂತಿಸುತ್ತಿದ್ದೇವೆ. ಪ್ರಸ್ತುತ ಈ ಟ್ವಿಟರ್ ಹ್ಯಾಂಡಲ್‌ಗಳ ಬಗ್ಗೆ ಟ್ವಿಟರ್ ಕಂಪನಿಯ ಗಮನಕ್ಕೆ ತರಲಾಗಿದೆ ಮತ್ತು NitaMAmbani, NitaAmbaani ಮುಂತಾದ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳನ್ನು ಸೃಷ್ಟಿಸಲಾಗಿದ್ದು, ಅದರಲ್ಲಿ ವಿವಾದಾತ್ಮಕ ಪೋಸ್ಟ್‌ಗಳನ್ನು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT