ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ಬೆಲೆ ತಗ್ಗಿಸಲಿರುವ ಪತಂಜಲಿ

Last Updated 19 ಜುಲೈ 2022, 15:41 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಫುಡ್ಸ್‌ ಲಿಮಿಟೆಡ್ ಕಂಪನಿಯು ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ತಾಳೆ ಎಣ್ಣೆ ಬೆಲೆಯನ್ನು ಲೀಟರಿಗೆ ₹ 10ರಿಂದ ₹ 15ರವರೆಗೆ ಒಂದೆರಡು ದಿನಗಳಲ್ಲಿ ಕಡಿತ ಮಾಡಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಇಳಿಕೆ ಆಗಿರುವುದರ ಪ್ರಯೋಜನವನ್ನು ಕಂಪನಿಯು ಈ ಮೂಲಕ ಗ್ರಾಹಕರಿಗೆ ವರ್ಗಾಯಿಸಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಆಹಾರ ಸಚಿವಾಲಯವು ಕಂಪನಿಗಳಿಗೆ ಈಚೆಗೆ ಸೂಚಿಸಿತ್ತು.

ಇದಾದ ನಂತರದಲ್ಲಿ ಮದರ್ ಡೈರಿ ಕಂಪನಿ, ಅದಾನಿ ವಿಲ್ಮರ್ ಕಂಪನಿ ಅಡುಗೆ ಎಣ್ಣೆಗಳ ಬೆಲೆಯನ್ನು ಕಡಿಮೆ ಮಾಡಿವೆ. ‘ನಾವು ಅಡುಗೆ ಎಣ್ಣೆಗಳ ಬೆಲೆಯನ್ನು ಒಂದೆರಡು ದಿನಗಳಲ್ಲಿ ಕಡಿಮೆ ಮಾಡಲಿದ್ದೇವೆ. ಕಳೆದ ಒಂದೂವರೆ ತಿಂಗಳ ಅವಧಿಯನ್ನು ಪರಿಗಣಿಸಿದರೆ ಒಟ್ಟು ಕಡಿತವು ಗರಿಷ್ಠ ₹ 35ರವರೆಗೆ ಆಗಲಿದೆ’ ಎಂದು ಕಂಪನಿಯ ಸಿಇಒ ಸಂಜೀವ್ ಅಸ್ಥಾನಾ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯು ಶೇ 15ರಿಂದ ಶೇ 20ರವರೆಗೆ ಇಳಿಕೆಯಾಗಿದೆ. ಆದರೆ, ಬೆಲೆ ತೀರಾ ಅಸ್ಥಿರವಾಗಿದೆ ಎಂದು ಅಸ್ಥಾನಾ ಹೇಳಿದ್ದಾರೆ. ಪತಂಜಲಿ ಫುಡ್ಸ್ ಕಂಪನಿಯು ರುಚಿ ಗೋಲ್ಡ್, ಮಹಾಕೋಶ್, ಸನ್‌ರಿಚ್‌, ನ್ಯೂಟ್ರೆಲಾ, ರುಚಿ ಸ್ಟಾರ್ ಮತ್ತು ರುಚಿ ಸನ್‌ಲೈಟ್‌ ಬ್ರ್ಯಾಂಡ್ ಅಡಿಯಲ್ಲಿ ಆಹಾರ ವಸ್ತುಗಳನ್ನು ಮಾರಾಟ ಮಾಡುತ್ತದೆ.

ಅಡುಗೆ ಎಣ್ಣೆಗಳ ಬೆಲೆ ತಗ್ಗಿಸಿರುವುದಾಗಿ ಮಾರಿಕೊ ಲಿಮಿಟೆಡ್ ಹೇಳಿದೆ. ಆದರೆ, ಹೆಚ್ಚಿನ ವಿವರ ನೀಡಿಲ್ಲ. ಈ ಕಂಪನಿಯು ಸಫೋಲಾ ಬ್ರ್ಯಾಂಡ್‌ ಅಡಿಯಲ್ಲಿ ಅಡುಗೆ ಎಣ್ಣೆಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT