ನವದೆಹಲಿ: ದೇಶದಾದ್ಯಂತ ಲಾಕ್ಡೌನ್ನಿಂದಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ, ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು ಭಾರತದಲ್ಲಿ ಏಪ್ರಿಲ್ನಲ್ಲಿ ತೈಲ ಬಳಕೆ ಪ್ರಮಾಣ ಶೇ 66ರಷ್ಟು ಕುಸಿತದಿದೆ.

ಏಪ್ರಿಲ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಶೇ 66ರಷ್ಟು ಇಳಿಕೆಯಾಗಿದ್ದು, ವಿಮಾನಗಳಿಗೆ ಬಳಕೆಯಾಗುವ ಏವಿಯೇಷನ್ ಟರ್ಬೈನ್ ಪ್ಯೂಯೆಲ್ (ಎಟಿಎಫ್) ಬೇಡಿಕೆ ಶೇ 90ರಷ್ಟು ಕಡಿತಗೊಂಡಿದೆ. ಪ್ರಯಾಣಿಕರ ವಿಮಾನ ಹಾಗೂ ಖಾಸಗಿ ವಾಣಿಜ್ಯ ಬಳಕೆ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ತೈಲ ಬಳಕೆ ಕುಸಿದಿರುವುದಾಗಿ ವಿಮಾನಯಾನ ವಲಯದ ಅಧಿಕಾರಿಗಳು ಹೇಳಿದ್ದಾರೆ.

ಜಗತ್ತಿನಲ್ಲಿಯೇ ಅತಿ ಹೆಚ್ಚು ತೈಲ ಬಳಕೆ ಮಾಡುವಮೂರನೇ ರಾಷ್ಟ್ರ ಭಾರತದಲ್ಲಿ ಕಳೆದ ತಿಂಗಳು ಹತ್ತು ವರ್ಷಗಳಲ್ಲೇ ಅತಿ ಕಡಿಮೆ ತೈಲ ಮಾರಾಟ ದಾಖಲಾಗಿದೆ. ಮಾರ್ಚ್ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಶೇ 17.79ರಷ್ಟು ಇಳಿಕೆಯಾಗಿ 16.08 ಮಿಲಿಯನ್ ಟನ್ಗಳಿಗೆ ಇಳಿಕೆಯಾಗಿದೆ.

2019ರ ಏಪ್ರಿಲ್ನಲ್ಲಿ ಭಾರತ 2.4 ಮಿಲಿಯನ್ ಟನ್ ಪೆಟ್ರೋಲ್, 7.3 ಮಿಲಿಯನ್ ಟನ್ ಡೀಸೆಲ್ ಹಾಗೂ 6.45 ಲಕ್ಷ ಟನ್ ಎಟಿಎಫ್ ಬಳಕೆಯಾಗಿತ್ತು.

ದೇಶದಲ್ಲಿ ಡೀಸೆಲ್ ಬಳಕೆ ಅತಿ ಹೆಚ್ಚು. ಆದರೆ, ಲಾಕ್ಡೌನ್ನಿಂದ ಬಹುತೇಕ ಟ್ರಕ್ಗಳು ಹಾಗೂ ರೈಲುಗಳ ಸಂಚಾರ ಸಹ ಸ್ಥಗಿತಗೊಂಡಿರುವುದರಿಂದ ಬೇಡಿಕೆಯಲ್ಲಿ ಶೇ 24.23 ಕಡಿತಗೊಂಡು 5.65 ಮಿಲಿಯನ್ ಟನ್ಗೆ ಇಳಿದಿದೆ. ಇನ್ನೂ ಬಹುತೇಕ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಇಲ್ಲದಿರುವುದರಿಂದ ಪೆಟ್ರೋಲ್ ಮಾರಾಟ ಶೇ 16.37ರಷ್ಟು ಇಳಿಕೆಯಾಗಿ 2.15 ಮಿಲಿಯನ್ ಟನ್ಗಳಿಗೆ ಕುಸಿದಿದೆ.

ಮಾರ್ಚ್ ಮಧ್ಯದಿಂದ ವಿಮಾನಗಳು ಹಾರಾಟ ನಿಲ್ಲಿಸಿರುವುದರಿಂದ ಎಟಿಎಫ್ ಬಳಕೆ ಶೇ 32.4ರಷ್ಟು ಇಳಿಕೆಯಾಗಿ 4,84,000 ಟನ್ಗಳಿಗೆ ಇಳಿದಿದೆ.

ಲಾಕ್ಡೌನ್ನಿಂದ 21 ದಿನಗಳು ಎಲ್ಲರೂ ಮನೆಯಲ್ಲಿಯೇ ಇರಬೇಕಾದ ಕಾರಣ, ಅಡುಗೆ ಹಾಗೂ ಇತರೆ ಬಳಕೆಗಳಿಗೆ ಎಲ್ಪಿಜಿ ಅನಿಲ ಸಿಲಿಂಡರ್ಗಳಿಗೆ ಬೇಡಿಕೆ ಉಂಟಾಗಿದೆ. ಮಾರ್ಚ್ನಲ್ಲಿ ಎಲ್ಪಿಜಿ ಮಾರಾಟ ಶೇ 1.9ರಷ್ಟು ಏರಿಕೆಯಾಗಿ ಬಳಕೆ 2.3 ಮಿಲಿಯನ್ ಟನ್ಗಳಿಗೆ ತಲುಪಿದೆ. ಏಪ್ರಿಲ್ನಲ್ಲಿ ಎಲ್ಪಿಜಿ ಮಾರಾಟ ಶೇ 30ರಷ್ಟು ಹೆಚ್ಚಳವಾಗಿದೆ.

ಮಾರ್ಚ್ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪೆಟ್ರೋಲ್ ಮಾರಾಟದಲ್ಲಿ ಶೇ 17 ಇಳಿಕೆ, ಡೀಸೆಲ್ ಮಾರಾಟದಲ್ಲಿ ಶೇ 26ರಷ್ಟು ಕುಸಿದಿರುವುದು ವರದಿಯಾಗಿತ್ತು.

ಸರ್ಕಾರದ ಈವರೆಗಿನ ಆದೇಶದ ಪ್ರಕಾರ, ಏಪ್ರಿಲ್ 14ರ ವರೆಗೂ ಲಾಕ್ಡೌನ್ ಮುಂದುವರಿಯಲಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ಲಾಕ್ಡೌನ್ ಅವಧಿ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.