ನವದೆಹಲಿ:ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳು ಕೋವಿಡ್ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವಂತಹ ಪ್ರತ್ಯೇಕ ವಿಮೆ ಪಾಲಿಸಿಗಳನ್ನು ಕಡ್ಡಾಯವಾಗಿ ರೂಪಿಸಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸೂಚಿಸಿತ್ತು. ಅದರಂತೆ ‘ಕೊರೊನಾ ಕವಚ್’ ಮತ್ತು ‘ಕೊರೊನಾ ರಕ್ಷಕ್’ ವಿಮಾ ಸೌಲಭ್ಯಗಳುಇಂದಿನಿಂದ ಲಭ್ಯವಿರಲಿವೆ.

ದೇಶದಲ್ಲಿ ಕೋವಿಡ್–19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದರಿಂಧ ವಿಶೇಷ ವಿಮಾ ಸೌಲಭ್ಯ ಆರಂಭಿಸುವಂತೆ ಸೂಚನೆ ನೀಡಿದ್ದ ಐಆರ್‌ಡಿಎಐ, ಜುಲೈ 10 ಒಳಗಾಗಿ ಜಾರಿಗೆ ಬರುವಂತೆ ನೋಡಿಕೊಳ್ಳುವಂತೆಯೂ ತಿಳಿಸಿತ್ತು. ಜೊತೆಗೆ,ಈ ಪಾಲಿಸಿಗಳನ್ನು ಕೋವಿಡ್–19 ಸೋಂಕಿತರಿಗಾಗಿ ರೂಪಿಸಲಾಗುತ್ತಿದೆಯಾದರೂ, ನಿರ್ದಿಷ್ಟಚಿಕಿತ್ಸೆ ಜತೆಗೆ ವ್ಯಕ್ತಿಯಲ್ಲಿ ಈ ಮೊದಲೇ ಇರಬಹುದಾದ ಕಾಯಿಲೆಯ ಚಿಕಿತ್ಸೆಗೂ ಅನ್ವಯವಾಗಬೇಕು ಎಂದೂ ತಿಳಿಸಿತ್ತು.

ಇದನ್ನೂ ಓದಿ:ಕರ್ಣಾಟಕ ಬ್ಯಾಂಕ್ನಿಂದ ಕೊರೊನಾ ವಿಮೆ

ಇವುಗಳ ಅವಧಿಯು ಮೂರುವರೆ, ಆರೂವರೆ ಹಾಗೂ ಒಂಬತ್ತೂವರೆತಿಂಗಳ ಅವಧಿಯ ಪಾಲಿಸಿಗಳಾಗಿವೆ. ಇವುಗಳ ಅಡಿಯಲ್ಲಿ ವಿಮಾದಾರನ ಆಸ್ಪತ್ರೆಯ ವೆಚ್ಚವನ್ನು ಆತನ ಪಾಲಿಸಿ ಮೊತ್ತಕ್ಕೆ ಅನುಗುಣವಾಗಿ ವಿಮಾ ಕಂಪೆನಿಯುಭರಿಸಲಿದೆ.

ಈ ಯೋಜನೆಗಳು ಪ್ಯಾನ್–ಇಂಡಿಯಾಅಡಿಯಲ್ಲಿ (ದೇಶವ್ಯಾಪಿ) ಬರುತ್ತವೆ. ಯಾವುದೇ ಭೌಗೋಳಿಕ ಪ್ರದೇಶ ಅಥವಾ ವಲಯ ಆಧಾರಿತವಾಗಿ ಸೌಲಭ್ಯಗಳು ಸೀಮಿತಗೊಳ್ಳುವುದಿಲ್ಲ ಎಂದುಐಆರ್‌ಡಿಬಿಐ ತಿಳಿಸಿದೆ.

ಐಆರ್‌ಡಿಎಐ ಮಾರ್ಗಸೂಚಿ ಪ್ರಕಾರ ಕೊರೊನಾ ಕವಚ್ ವಿಮೆ ಪರಿಹಾರ ಮೊತ್ತವು ಕನಿಷ್ಠ ₹ 50 ಸಾವಿರದಿಂದ ಗರಿಷ್ಠ ₹ 5 ಲಕ್ಷದವರೆಗೆ ಇರಬೇಕು. ಇದರಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಇದರಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗಿದೆ.

ಅದೇ ರೀತಿ ಕೊರೊನಾ ರಕ್ಷಕ್‌ಪಾಲಿಸಿ ಪರಿಹಾರ ಮೊತ್ತವು,ಕನಿಷ್ಠ ₹ 50 ಸಾವಿರದಿಂದ ಗರಿಷ್ಠ ₹ 2.5 ಲಕ್ಷದವರೆಗೆ ಇರಬೇಕು.ಕೊರೊನಾ ಕವಾಚ್ ಪಾಲಿಸಿಯು ನಷ್ಟ ಪರಿಹಾರ ಆಧಾರಿತ ನೀತಿಯಾಗಿದೆಯಾದರೂ, ಅಗತ್ಯಾನುಸಾರ ಪರಿಹಾರ ಲಭ್ಯವಾಗಲಿದೆ. ಆಯುಷ್ ಚಿಕಿತ್ಸೆಯನ್ನೂ ಒಳಗೊಂಡಂತೆ ಪಿಪಿಇ ಕಿಟ್‌ಗಳು, ಕೈಗವಸು, ಮುಖಗವಸು, ಇತರ ವೆಚ್ಚ ಹಾಗೂ ಪ್ರಯಾಣದ ವೆಚ್ಚಗಳನ್ನೂ ಭರಿಸಲಿದೆ.

ಕೊರೊನಾ ಕವಚ್ ಪಾಲಿಸಿ14 ದಿನಗಳ ಕ್ವಾರಂಟೈನ್ ಅವಧಿಯ ವೆಚ್ಚವನ್ನೂ ತುಂಬಲಿದೆ.ವಿಮಾದಾರನಿಗೆ ಕೋವಿಡ್–19 ದೃಢವಾಗಿ ಆತ ಕನಿಷ್ಠ 72 ಗಂಟೆ ಸಮಯ ಆಸ್ಪತ್ರೆಯಲ್ಲಿದ್ದರೂ,ಕೊರೊನಾ ರಕ್ಷಕ್ ವಿಮೆಯ ಪೂರ್ಣ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.

ಈ ಪಾಲಿಸಿಗಳ ಪ್ರೀಮಿಯಂ ಅನ್ನು ಕಂತುಗಳಲ್ಲಿ ಪಾಲಿಸಲು ಅವಕಾಶವಿಲ್ಲ. ಎರಡೂ ಪಾಲಿಸಿಗಳು15 ದಿನಗಳ ಕಾಯುವ ಅವಧಿಯನ್ನು (ವೇಯ್ಟಿಂಗ್ ಟೈಮ್)ಹೊಂದಿವೆ.

ಇವನ್ನೂ ಓದಿ
*ಹರಡುತ್ತಿದೆ ಕೊರೊನಾ: ದುರಿತ ಕಾಲಕ್ಕೆ ಬೇಕು ಆರೋಗ್ಯ ವಿಮೆಯ ಆಸರೆ
*ಕೊರೊನಾ ಕವಚ ಪಾಲಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.