ಖಾಸಗಿ ಕಂಪನಿ ನಿವ್ವಳ ಲಾಭ ಹೆಚ್ಚಳ

ಸೋಮವಾರ, ಮಾರ್ಚ್ 18, 2019
31 °C
3ನೇ ತ್ರೈಮಾಸಿಕ; ಭಾರತೀಯ ರಿಸರ್ವ್‌ ಬ್ಯಾಂಕ್ ವಿಶ್ಲೇಷಣೆ

ಖಾಸಗಿ ಕಂಪನಿ ನಿವ್ವಳ ಲಾಭ ಹೆಚ್ಚಳ

Published:
Updated:
Prajavani

ಮುಂಬೈ: ತಯಾರಿಕೆ ವಲಯದಲ್ಲಿನ ಖಾಸಗಿ ಕಂಪನಿಗಳ ನಿವ್ವಳ ಲಾಭವು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 24.9ರಷ್ಟು ಏರಿಕೆಯಾಗಿದೆ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಸರ್ಕಾರಯೇತರ ಹಣಕಾಸುಯೇತರ (ಎನ್‌ಜಿಎನ್‌ಎಫ್‌) 2,703 ಸಂಸ್ಥೆಗಳ ಹಣಕಾಸು ವರದಿ ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ನಿವ್ವಳ ಲಾಭ ಹೆಚ್ಚಳಕ್ಕೆ ತೆರಿಗೆಯಲ್ಲಿನ ರಿಯಾಯ್ತಿಗಳು ಕಾರಣ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

ನಿವ್ವಳ ಲಾಭದ ವಿಷಯದಲ್ಲಿ ತಯಾರಿಕಾ ವಲಯವು ಗಮನಾರ್ಹ ಪ್ರಗತಿ ದಾಖಲಿಸುತ್ತಿದೆ. ಈ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹ 71,900 ಕೋಟಿಗಳಷ್ಟಿತ್ತು. ತೃತೀಯ ತ್ರೈಮಾಸಿಕದಲ್ಲಿ ಇದು ₹ 77,500 ಕೋಟಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ, ಖಾಸಗಿ ಕಾರ್ಪೊರೇಟ್‌ ಸಂಸ್ಥೆಗಳ ವಹಿವಾಟು ಸಾಧನೆ ಕುರಿತ ವರದಿಯಲ್ಲಿ ತಿಳಿಸಿದೆ.

ಮಾರಾಟಕ್ಕೆ ಸಂಬಂಧಿಸಿದಂತೆ ಜವಳಿ, ಕಬ್ಬಿಣ ಮತ್ತು ಉಕ್ಕು, ವಾಹನ ಮತ್ತು ಸಾರಿಗೆ ಬಿಡಿಭಾಗ ಕೈಗಾರಿಕೆಗಳಲ್ಲಿ ಬೇಡಿಕೆಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ದೂರಸಂಪರ್ಕ ವಲಯದಲ್ಲಿಯೂ ಮಾರಾಟ ಕುಸಿತ ಕಂಡಿದೆ. ಆದರೆ, ಆಹಾರ ಉತ್ಪನ್ನ, ಪಾನೀಯ ಮತ್ತು ಔಷಧಿ ವಲಯದಲ್ಲಿ ಬೇಡಿಕೆ ಹೆಚ್ಚಳಗೊಳ್ಳುತ್ತಿದೆ ಎಂದು ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ.

ಐ.ಟಿ ವಲಯದಲ್ಲಿನ ಮಾರಾಟ ಬೆಳವಣಿಗೆಯು ಹಿಂದಿನ ತ್ರೈಮಾಸಿಕಕ್ಕಿಂತ ಹೆಚ್ಚಿನ ಬದಲಾವಣೆ ಕಂಡಿಲ್ಲ. ಐ.ಟಿ ವಲಯ ಹೊರತುಪಡಿಸಿದ ಸೇವಾ ವಲಯದಲ್ಲಿ ಮಾರಾಟ ಹೆಚ್ಚಳ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !