ನವದೆಹಲಿ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿನ ಖಾಸಗಿ ಈಕ್ವಿಟಿ ಹೂಡಿಕೆ ಪ್ರಮಾಣ ಶೇ 32ರಷ್ಟು ಇಳಿಕೆಯಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ₹19,500 ಕೋಟಿಯಷ್ಟು ಹೂಡಿಕೆಯಾಗಿತ್ತು. ಅದು ಈ ಬಾರಿ ₹13,300 ಕೋಟಿಗೆ ಇಳಿದಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸ್ಯಾವಿಲ್ಸ್ ಇಂಡಿಯಾ ತಿಳಿಸಿದೆ.

ಜನವರಿಯಿಂದ ಸೆಪ್ಟೆಂಬರ್ವರೆಗೆ ₹34,500 ಕೋಟಿಯಷ್ಟು ಹೂಡಿಕೆಯಾಗಿದೆ. 2024ರ ಕ್ಯಾಲೆಂಡರ್ ವರ್ಷದಲ್ಲಿ ₹38 ಸಾವಿರ ಕೋಟಿ, 2023ರಲ್ಲಿ ₹34,541 ಕೋಟಿ, 2022 ಮತ್ತು 2021ರಲ್ಲಿ ತಲಾ ₹30,100 ಕೋಟಿಯಾಗಿತ್ತು. 2020ರಲ್ಲಿ ₹58,450 ಕೋಟಿಯಾಗಿತ್ತು.

2020ರಲ್ಲಿ ಸಾಂಸ್ಥಿಕ ಹೂಡಿಕೆಯು ಗರಿಷ್ಠ ಮಟ್ಟದಲ್ಲಿತ್ತು. ಬಳಿಕ ಮಂದಗೊಂಡಿತು. 2025ರಲ್ಲಿ ಹೂಡಿಕೆಯು ಸ್ಥಿರವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.