ಮುಂಬೈ: ಸಾಲದ ಸುಳಿಯಲ್ಲಿ ಸಿಲುಕಿರುವ ಫ್ಯೂಚರ್ ರಿಟೇಲ್ ಲಿಮಿಟೆಡ್ ಕಂಪನಿಯ ಸ್ವಾಧೀನಕ್ಕೆ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಹಾಗೂ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಸಕ್ತಿ ತೋರಿಸಿವೆ.

ರಿಲಯನ್ಸ್ ರಿಟೇಲ್ ವೆಂಚರ್ಸ್ ಹಾಗೂ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಮತ್ತು ಫ್ಲೆಮಿಂಗೊ ಸಮೂಹದ ಜಂಟಿ ಸಹಭಾಗಿತ್ವದ ಏಪ್ರಿಲ್ ಮೂನ್ ರಿಟೇಲ್ ಪ್ರೈ.ಲಿ., ಫ್ಯೂಚರ್ ರಿಟೇಲ್ ಕಂಪನಿಯ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿರುವ ಕಂಪನಿಗಳು. ಇವೆರಡು ಅಲ್ಲದೆ 13 ಇತರ ಕಂಪನಿಗಳೂ ಈ ಖರೀದಿಗೆ ಆಸಕ್ತಿ ತೋರಿಸಿವೆ.

ಈ ಕುರಿತು ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಸಮೂಹ ಹಾಗೂ ಫ್ಯೂಚರ್ ರಿಟೇಲ್ ಕಂಪನಿಯ ಸಾಲದ ಸಮಸ್ಯೆಯ ಪರಿಹಾರಕ್ಕೆ ನ್ಯಾಯಾಲಯ ನೇಮಕ ಮಾಡಿರುವ ವೃತ್ತಿಪರರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ಫ್ಯೂಚರ್ ರಿಟೇಲ್ ಕಂಪನಿಯ ಖರೀದಿಗೆ ಆಸಕ್ತಿ ತೋರಿ ಅರ್ಜಿ ಸಲ್ಲಿಸಲು ಗಡುವು ಈ ತಿಂಗಳ ಆರಂಭಕ್ಕೆ ಕೊನೆಗೊಂಡಿದೆ. ಫ್ಯೂಚರ್ ರಿಟೇಲ್ ಕಂಪನಿಯು ಒಂದು ಸಂದರ್ಭದಲ್ಲಿ ದೇಶದ ಎರಡನೆಯ ಅತಿದೊಡ್ಡ ರಿಟೇಲ್ ಕಂಪನಿಯಾಗಿತ್ತು.

ಇದು ಸಾಲದ ಕಂತು ಪಾವತಿಸಲು ವಿಫಲವಾದ ನಂತರದಲ್ಲಿ ಬ್ಯಾಂಕ್ಗಳು ನ್ಯಾಯಾಲಯದ ಮೊರೆ ಹೋದವು.

ಶಾಲಿಮಾರ್ ಕಾರ್ಪೊರೇಷನ್ ಲಿಮಿಟೆಡ್, ನಾಲ್ವಾ ಸ್ಟೀಲ್ ಆ್ಯಂಡ್ ಪವರ್, ಯುನೈಟೆಡ್ ಬಯೋಟೆಕ್, ಡಬ್ಲ್ಯುಎಚ್ ಸ್ಮಿತ್ ಟ್ರಾವೆಲ್, ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಕಂಪನಿಗಳು ಕೂಡ ಖರೀದಿಗೆ ಆಸಕ್ತಿ ತೋರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.