ನವದೆಹಲಿ: ಬೆಳ್ಳಿಯ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಕೆ.ಜಿ.ಗೆ ₹7,000 ಏರಿಕೆ ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1.50 ಲಕ್ಷಕ್ಕೆ ತಲುಪಿದೆ.

ಇದೇ ವೇಳೆಗೆ ಚಿನ್ನದ ಬೆಲೆ ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 10 ಗ್ರಾಂಗಳಿಗೆ ₹1,19,500ಕ್ಕೆ ತಲುಪಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ ಸೋಮವಾರ ಚಿನ್ನದ ಬೆಲೆಯು (ಶೇ 99.9ರಷ್ಟು ಪರಿಶುದ್ಧ) 10 ಗ್ರಾಂಗೆ ₹1,500ರಷ್ಟು ಹೆಚ್ಚಳವಾಗಿದೆ.

ಶೇ 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಕೂಡ 10 ಗ್ರಾಂಗೆ ₹1,500ರಷ್ಟು ಹೆಚ್ಚಳ ಕಂಡಿದ್ದು, ₹1,18,900ಕ್ಕೆ ತಲುಪಿದೆ.

ಈ ವರ್ಷದಲ್ಲಿ 10 ಗ್ರಾಂ ಚಿನ್ನದ ಬೆಲೆಯು ₹40,550ರಷ್ಟು (ಶೇ 51.36) ಹೆಚ್ಚಳ ಆಗಿದೆ. 2024ರ ಡಿಸೆಂಬರ್ 31ರಂದು 10 ಗ್ರಾಂ ಚಿನ್ನದ ಬೆಲೆಯು ₹78,950 ಆಗಿತ್ತು.

ಕೆ.ಜಿ. ಬೆಳ್ಳಿಯ ಬೆಲೆಯು ಈ ವರ್ಷದಲ್ಲಿ ₹60,300ರಷ್ಟು (ಶೇ 67.22ರಷ್ಟು) ಹೆಚ್ಚಳ ಕಂಡಿದೆ. ಬೆಳ್ಳಿಯ ಬೆಲೆಯು 2024ರ ಡಿಸೆಂಬರ್ 31ರಂದು ₹89,700 ಆಗಿತ್ತು.

ವಿದೇಶಿ ಮಾರುಕಟ್ಟೆಗಳಲ್ಲಿಯೂ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ‘ಚಿನ್ನದ ಬೆಲೆಯು ಸತತ ಆರು ವಾರಗಳಿಂದ ಹೆಚ್ಚಳ ಕಾಣುತ್ತಿದೆ. ಈಗ ಅದು ಮತ್ತೊಂದು ಗರಿಷ್ಠ ಮಟ್ಟವನ್ನು ತಲುಪಿದೆ. ವ್ಯಾಪಾರ ಸಮರದ ಸುತ್ತಲಿನ ಕಳವಳಗಳು, ಇಟಿಎಫ್ಗಳ ಕಡೆ ಹೂಡಿಕೆ ಹಣ ಹೆಚ್ಚು ಹರಿದುಬರುತ್ತಿರುವುದು ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆಯು ಇದಕ್ಕೆ ಕಾರಣ’ ಎಂದು ಮಿರಾಯ್ ಅಸೆಟ್ ಶೇರ್ಖಾನ್ನ ಸರಕು ಮತ್ತು ಕರೆನ್ಸಿ ವಿಭಾಗದ ಮುಖ್ಯಸ್ಥ ಪ್ರವೀಣ್ ಸಿಂಗ್ ಹೇಳಿದ್ದಾರೆ.

‘ಚಿನ್ನ ಮತ್ತು ಬೆಳ್ಳಿಯ ಬೆಲೆಯು ನಾಗಾಲೋಟದಲ್ಲಿ ಏರಿಕೆ ಆಗುತ್ತಿವೆ. ಚಿನ್ನದ ದರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ಗೆ 3,800 ಅಮೆರಿಕನ್ ಡಾಲರ್ಗಿಂತ ಹೆಚ್ಚಾಗಿದೆ. ಇದು ಬಹಳ ಬೇಗ ಔನ್ಸ್ಗೆ 4,000 ಡಾಲರ್ ಗಡಿ ದಾಟಬಹುದು’ ಎಂದು ಟ್ರೇಡ್ಜೀನಿ ಬ್ರೋಕರೇಜ್ ಸಂಸ್ಥೆಯ ಸಿಒಒ ತ್ರಿವೇಶ್ ಡಿ. ಹೇಳಿದ್ದಾರೆ.

ಬೆಳ್ಳಿಯ ಬೆಲೆಯು ಈ ವರ್ಷದಲ್ಲಿ ಶೇ 55ರಷ್ಟು ಏರಿಕೆ ಕಂಡಿದೆ. ಕೈಗಾರಿಕಾ ವಲಯದಿಂದ ಬೇಡಿಕೆ ಹೆಚ್ಚಾಗಿರುವುದು, ಅದರಲ್ಲೂ ಮುಖ್ಯವಾಗಿ ಸೌರಫಲಕಗಳು ಮತ್ತು ತಂತ್ರಜ್ಞಾನ ವಲಯದಿಂದ ಬೇಡಿಕೆ ಹೆಚ್ಚಾಗಿರುವುದು ಈ ಏರಿಕೆಗೆ ಕಾರಣ ಎಂದು ತ್ರಿವೇಶ್ ಹೇಳಿದ್ದಾರೆ.

ಅನಿಶ್ಚಿತತೆಯು ಹೆಚ್ಚಾಗಿರುವ ಸಂದರ್ಭದಲ್ಲಿ ಅಮೂಲ್ಯ ಲೋಹಗಳ ಬೆಲೆಯು ಹೆಚ್ಚಾಗುವುದಕ್ಕೆ ಬಹಳ ಸೂಕ್ತವಾದ ನಿದರ್ಶನ ಇದು ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.