ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಸೆಲ್ಪ್ ಕೇರ್ ಬ್ರ್ಯಾಂಡ್ ‘82°ಇ’, ರಿಲಯನ್ಸ್ ರಿಟೇಲ್ನ ಸೌಂದರ್ಯವರ್ಧಕ ಉತ್ಪನ್ನಗಳ ವೇದಿಕೆ ಆಗಿರುವ ‘ಟಿರಾ’ ಜೊತೆಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಪಾಲಯದಾರಿಕೆಯಿಂದಾಗಿ ‘82°ಇ’ ಬ್ರ್ಯಾಂಡ್ನ ಉತ್ಪನ್ನಗಳು ‘ಟಿರಾ’ದ ಆನ್ಲೈನ್ ಮತ್ತು ಆಫ್ಲೈನ್ ವೇದಿಕೆಗಳಲ್ಲಿ ದೊರೆಯಲಿವೆ.

‘82°ಇ’ ಬ್ರ್ಯಾಂಡ್ ಚರ್ಮ ಮತ್ತು ದೇಹದ ಆರೈಕೆ ಉತ್ಪನ್ನಗಳೊಂದಿಗೆ ಪುರುಷರಿಗೆ ವಿಶೇಷ ಶ್ರೇಣಿಗಳನ್ನು ಹೊರತಂದಿದೆ. ಅಶ್ವಗಂಧ ಬೌನ್ಸ್, ಲೋಟಸ್ ಸ್ಪ್ಲಾಶ್ ಮತ್ತು ಅರಿಸಿನ ಶೀಲ್ಡ್ನಂತಹ ಹೆಚ್ಚು ಮಾರಾಟವಾಗುವ ಉತ್ಪನ್ನಗಳು ‘ಟಿರಾ’ದಲ್ಲಿ ಸಿಗುತ್ತವೆ.

‘82°ಇ’ನ ಉತ್ಪನ್ನಗಳು ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಪುಣೆಯ ‘ಟಿರಾದ ಆಫ್ಲೈನ್ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ನಂತರದ ದಿನಗಳಲ್ಲಿ ಇತರೆ ನಗರಗಳಲ್ಲಿಯೂ ದೊರೆಯಲಿವೆ.

‘ಸ್ವ–ಆರೈಕೆಯ ಪ್ರಸಿದ್ಧ ಬ್ರ್ಯಾಂಡ್ ‘82°ಇ’ ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ. ಈ ಸಹಭಾಗಿತ್ವವು ಟಿರಾದ ವಹಿವಾಟನ್ನು ಹೆಚ್ಚಿಸುತ್ತದೆ. ನಮ್ಮ ಗ್ರಾಹಕರಿಗೆ ಚರ್ಮದ ಆರೈಕೆಯ ಪ್ರೀಮಿಯಂ ಉತ್ಪನ್ನಗಳನ್ನು ತಲುಪಿಸಲು ಸಹಕಾರಿಯಾಗಲಿದೆ’ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ನ ಕಾರ್ಯ ನಿರ್ವಾಹಕ ನಿರ್ದೇಶಕಿ ಇಶಾ ಎಂ. ಅಂಬಾನಿ ತಿಳಿಸಿದ್ದಾರೆ.

‘82°ಇ’ ಉತ್ಪನ್ನಗಳು ಈಗ ಆನ್ಲೈನ್ ಮತ್ತು ಟೀರಾ ಮಳಿಗೆಗಳಲ್ಲಿ ಲಭ್ಯವಿವೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ಚರ್ಮದ ಆರೈಕೆಯನ್ನು ಸರಳೀಕರಿಸುವುದು ಮತ್ತು ಸ್ವ-ಆರೈಕೆಯನ್ನು ದೈನಂದಿನ ಜೀವನದ ಒಂದು ಭಾಗವಾಗಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ನಟಿ ದೀಪಿಕಾ ಪಡುಕೋಣೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.