ನವದೆಹಲಿ: ಅಮೆರಿಕದ ಸುಂಕ ಹೇರಿಕೆಯಿಂದ ತೊಂದರೆಗೆ ಒಳಗಾದ ದೇಶದ ರಫ್ತುದಾರರಿಗೆ ಪರಿಹಾರದ ಪ್ಯಾಕೇಜ್ ನೀಡಲು ಯೋಜಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಂಕದಿಂದ ತೊಂದರೆಗೆ ಗುರಿಯಾದವರಿಗೆ ನೆರವು ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಭಾರತವು ಜಗತ್ತಿನ ಮೂರನೇ ಅತಿದೊಡ್ಡ ತೈಲ ಆಮದುಗಾರ ಮತ್ತು ಗ್ರಾಹಕ ರಾಷ್ಟ್ರವಾಗಿದೆ. ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಅಮೆರಿಕ, ಭಾರತದಿಂದ ರಫ್ತಾಗುವ ಸರಕುಗಳಿಗೆ ಶೇ 50ರಷ್ಟು ಸುಂಕ ವಿಧಿಸಿತ್ತು. ಇದರಿಂದ ದೇಶದ ಜವಳಿ, ಆಭರಣ ಮತ್ತು ಸಾಗರೋತ್ಪನ್ನ, ವಿಶೇಷವಾಗಿ ಸಿಗಡಿ ವಲಯಕ್ಕೆ ತೊಂದರೆ ಆಗಿತ್ತು. ತಮಿಳುನಾಡು ಮತ್ತು ಗುಜರಾತ್ನಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಿತ್ತು.

ಸಣ್ಣ ವ್ಯವಹಾರಗಳು ಮತ್ತು ರಫ್ತುದಾರರಿಗೆ 90 ದಿನಗಳವರೆಗೆ ಬಾಕಿ ಇರುವ ಸಾಲಗಳ ಮೇಲೆ ಕ್ರೆಡಿಟ್ ಗ್ಯಾರಂಟಿ ನೀಡಲು ಸರ್ಕಾರ ಯೋಜಿಸಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು.

ಸಾಗಣೆ ಇಳಿಕೆ ಆಗಿಲ್ಲ: ಅಮೆರಿಕದ ಸುಂಕ ಹೇರಿಕೆಯಿಂದ ದೇಶದಿಂದ ಒಟ್ಟಾರೆ ಸರಕು ಸಾಗಣೆಯಲ್ಲಿ ಯಾವುದೇ ಇಳಿಕೆ ಆಗಿಲ್ಲ ಎಂದು ಕೇಂದ್ರ ಬಂದರು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೊನೊವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.