ಮಂಗಳವಾರ, ಜೂನ್ 28, 2022
21 °C

ಯುಎಸ್‌ಎಲ್‌ನ 32 ಬ್ರ್ಯಾಂಡ್‌ಗಳು ಇನ್‌ಬ್ರೀವ್‌ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಡಿಯಾಜಿಯೊ ಒಡೆತನದ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (ಯುಎಸ್‌ಎಲ್‌) ತನ್ನ 32 ಜನಪ್ರಿಯ ಬ್ರ್ಯಾಂಡ್‌ಗಳನ್ನು ಸಿಂಗಪುರದ ಇನ್‌ಬ್ರೀವ್‌ ಬೆವರೇಜಸ್‌ಗೆ ₹ 820 ಕೋಟಿಗೆ ಮಾರಾಟ ಮಾಡುವುದಾಗಿ ಭಾನುವಾರ ಹೇಳಿದೆ.

ಈ ಕುರಿತು ಎರಡೂ ಕಂಪನಿಗಳು ಜಂಟಿ ಹೇಳಿಕೆ ನೀಡಿವೆ. ಹೇವಾರ್ಡ್ಸ್‌, ಓಲ್ಡ್‌ ಟ್ಯಾವರ್ನ್‌, ವೈಟ್‌–ಮಿಸ್ಚಿಫ್‌, ಹನಿಬೀ, ಗ್ರೀನ್‌ ಲೇಬಲ್‌ ಮತ್ತು ರೊಮನೋವ್‌ ಸೇರಿದಂತೆ ಒಟ್ಟಾರೆ 32 ಬ್ರ್ಯಾಂಡ್‌ಗಳನ್ನು ಯುಎಸ್‌ಎಲ್‌ ಮಾರಾಟ ಮಾಡಲಿದೆ. ಮೆಕ್‌ಡೊನಾಲ್ಡ್ಸ್‌ ಅಥವಾ ಡೈರೆಕ್ಟರ್ಸ್‌ ಸ್ಪೆಷಲ್‌ ಬ್ರ್ಯಾಂಡ್‌ಗಳಲ್ಲಿ ಒಂದನ್ನು ಯುಎಸ್‌ಎಲ್‌ ತನ್ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ, ಬ್ಯಾಗ್‌ಪೈಪರ್‌ ಒಳಗೊಂಡು 11 ಬ್ರ್ಯಾಂಡ್‌ಗಳ ಬಗ್ಗೆ ಯುಎಸ್‌ಎಲ್‌ ಮತ್ತು ಇನ್‌ಬ್ರೀವ್‌ 5 ವರ್ಷಗಳ ಫ್ರಾಂಚೈಸಿ ಒಪ್ಪಂದವನ್ನೂ ಮಾಡಿಕೊಂಡಿವೆ.

ಸೆಪ್ಟೆಂಬರ್‌ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದ ಅಂತ್ಯದ ವೇಳೆಗೆ ಮಾರಾಟದ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು