ಮಂಗಳವಾರ, ಸೆಪ್ಟೆಂಬರ್ 21, 2021
26 °C

'ಊಬರ್‌ ಈಟ್ಸ್‌' ಸ್ವಾಧೀನ ಪಡಿಸಿಕೊಂಡ 'ಜೊಮ್ಯಾಟೊ'; ₹ 2,500 ಕೋಟಿ ವ್ಯವಹಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದ್ದಲ್ಲಿಗೆ ಬಯಸಿದ ತಿಂಡಿ–ತಿನಿಸು ತಂದು ಕೊಡುವ ಸೇವೆ ಒದಗಿಸುತ್ತಿರುವ 'ಜೊಮ್ಯಾಟೊ' ಕಂಪನಿಯು ಪ್ರತಿಸ್ಪರ್ಧಿ 'ಊಬರ್‌ ಈಟ್ಸ್‌' ವ್ಯವಹಾರವನ್ನು ಸ್ವಾಧೀನ ಪಡಿಸಿಕೊಂಡಿದೆ. 

ಭಾರತದಲ್ಲಿ ಊಬರ್‌ ಈಟ್ಸ್‌ನ ಪೂರ್ಣ ವ್ಯವಹಾರವನ್ನು ಗುರುಗ್ರಾಮ ಮೂಲದ ಜೊಮ್ಯಾಟೊ ಸ್ವಾಧೀನ ಪಡಿಸಿಕೊಂಡಿದೆ. 350 ಮಿಲಿಯನ್‌ ಡಾಲರ್‌ಗಳಿಗೆ (₹ 2,500 ಕೋಟಿ) ಸ್ವಾಧೀನ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದ ಪ್ರಕಾರ, ಊಬರ್‌ ಶೇ 10ರಷ್ಟು ಪಾಲುದಾರಿಕೆ (ಷೇರು) ಹೊಂದಿರಲಿದೆ. 

ಫುಡ್‌ ಡೆಲಿವರಿ ಆ್ಯಪ್‌ ಊಬರ್‌ ಈಟ್ಸ್‌ ಇನ್ನು ಮುಂದೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ಊಬರ್‌ ಈಟ್ಸ್‌ ಬಳಸುತ್ತಿರುವ ಗ್ರಾಹಕರಿಗೆ ಜೊಮ್ಯಾಟೊ ಅಪ್ಲಿಕೇಷನ್‌ಗೆ ನಿರ್ದೇಶಿಸಲ್ಪಡುತ್ತದೆ. 

ಪ್ರಸ್ತುತ ಊಬರ್‌ ಈಟ್ಸ್‌ಗಾಗಿ ಕಾರ್ಯನಿರ್ವಹಿಸುತ್ತಿರುವ ಎಕ್ಸಿಕ್ಯುಟಿವ್‌ಗಳನ್ನು ಮುಂದುವರಿಸುವ ಒಪ್ಪಂದ ಜೊಮ್ಯಾಟೊ ಮಾಡಿಕೊಂಡಿಲ್ಲ. ಸುಮಾರು 100 ಮಂದಿ ಎಕ್ಸಿಕ್ಯುಟಿವ್‌ಗಳನ್ನು ಊಬರ್‌ ಈಟ್ಸ್‌ ಕೆಲಸದಿಂದ ತೆಗೆದು ಹಾಕಬಹುದು ಅಥವಾ ಊಬರ್‌ನ ಇತರೆ ವ್ಯವಹಾರ ಕ್ಷೇತ್ರಗಳಲ್ಲಿ ಮುಂದುವರಿಸಬಹುದಾಗಿದೆ. 

'ಭಾರತದ 500ಕ್ಕೂ ಹೆಚ್ಚು ನಗರಗಳಲ್ಲಿ ಫುಡ್‌ ಡೆಲಿವರಿ ವ್ಯವಹಾರವನ್ನು ವಿಸ್ತರಿಸಿರುವ ಜೊಮ್ಯಾಟೊ, ಊಬರ್‌ ಈಟ್ಸ್‌ ಸ್ವಾಧೀನ ಪಡಿಸಿಕೊಳ್ಳುವ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಪಡಿಸಿಕೊಂಡಿದೆ' ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್‌ ಹೇಳಿದ್ದಾರೆ. 

ಕ್ಯಾಬ್‌, ಟ್ಯಾಕ್ಸಿ ಸೇವೆಯಲ್ಲಿ ಓಲಾಗೆ ಪ್ರತಿಸ್ಪರ್ಧಿಯಾಗಿರುವ ಊಬರ್‌ ಭಾರತದಲ್ಲಿ ಮೊಬೈಲ್‌ ಆ್ಯಪ್‌ ಆಧಾರಿತ ಸೇವೆ ಮುಂದುವರಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು