ಗುರುವಾರ , ಜುಲೈ 29, 2021
23 °C

ಪ್ರಶ್ನೋತ್ತರ: ಉಳಿತಾಯಕ್ಕೆ ಪಿಪಿಎಫ್‌ ಹಾಗೂ ಎನ್‌ಎಸ್‌ಸಿನಲ್ಲಿ ಆಯ್ಕೆ ಯಾವುದು

ಪುರಾಣಿಕ್ Updated:

ಅಕ್ಷರ ಗಾತ್ರ : | |

prajavani

- ಎಚ್‌.ಕೆ. ಮಂಜುನಾಥ

ನಾನು ಕರ್ನಾಟಕ ಸರ್ಕಾರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಒಟ್ಟು ವೇತನ ₹34 ಸಾವಿರ. ಉಳಿತಾಯ ಮಾಡಲು ಪಿಪಿಎಫ್‌ ಹಾಗೂ ಎನ್‌ಎಸ್‌ಸಿ‌ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಇವುಗಳಲ್ಲಿ ಉತ್ತಮ ಯೋಜನೆ ಇದ್ದರೆ ತಿಳಿಸಿ. ನನಗೆ ಪಿಪಿಎಫ್‌ ಯೋಜನೆ ಮೇಲೆ ಒಲವು ಇದೆ. ಇದಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಇದೆಯೇ? ಸರ್ಕಾರಿ ನೌಕರನಾದ ನಾನು ಇದನ್ನು ಮಾಡಬಹುದೇ?


ಯು.ಪಿ.ಪುರಾಣಿಕ್‌

ಉತ್ತರ: ನೀವು ಬಯಸುವ ಎರಡೂ ಉಳಿತಾಯ ಯೋಜನೆಗಳು ತುಂಬಾ ಸುರಕ್ಷಿತ. ಜತೆಗೆ ತೆರಿಗೆ ವಿನಾಯಿತಿ ಕೂಡಾ ಪಡೆಯಬಹುದು. ಪಿಪಿಎಫ್‌ 15 ವರ್ಷಗಳ ಯೋಜನೆ. ಅಂಚೆ ಕಚೇರಿ ಹಾಗೂ ಆಯ್ದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬಹುದು. ಇಲ್ಲಿ ಕನಿಷ್ಠ ₹ 500 ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ತುಂಬಬಹುದು. ಎನ್‌ಎಸ್‌ಸಿ ಹಾಗೂ ಪಿಪಿಎಫ್‌ ಸೆಕ್ಷನ್‌ 80ಸಿ ಆಧಾರದ ಮೇಲೆ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದು. ಇದೇ ವೇಳೆ ಪಿಪಿಎಫ್‌ ಮೇಲೆ ಬರುವ ಬಡ್ಡಿ ಸೆಕ್ಷನ್‌ 10(II) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಪಡೆಯಬಹುದು. ಸದ್ಯಕ್ಕೆ ನೀವು ತಿಂಗಳಿಗೆ ₹ 5 ಸಾವಿರ ಪಿಪಿಎಫ್‌ಗೆ ತುಂಬಿ.  ಒಂದು ವರ್ಷದ ₹ 5 ಸಾವಿರದ ಆರ್‌.ಡಿ ಮಾಡಿ. ವರ್ಷಾಂತ್ಯಕ್ಕೆ ಎನ್‌ಎಸ್‌ಸಿ ಕೊಳ್ಳಿರಿ. ಸರ್ಕಾರಿ ನೌಕರರಾಗಲಿ ಇನ್ನಿತರರಾಗಲಿ, ಪಿಪಿಎಫ್‌ ಮಾಡಲು ಯಾವ ಅಭ್ಯಂತರವೂ ಇಲ್ಲ.

***

- ಎನ್‌.ಎಂ. ಚನ್ನಬಸಯ್ಯ, ಕೆಂಗೇರಿ ಉಪನಗರ, ಬೆಂಗಳೂರು

ನನ್ನ ಪಿಂಚಣಿ ₹ 17 ಸಾವಿರ, ಅಂಚೆ ಕಚೇರಿ ಠೇವಣಿಯಿಂದ ₹ 10 ಸಾವಿರ ಬರುತ್ತದೆ. ಇದುವರೆಗೆ ಆದಾಯ ತೆರಿಗೆ ವಿವರ ಸಲ್ಲಿಸಿಲ್ಲ. ನನಗೆ ಸೂಕ್ತ ಸಲಹೆ ನೀಡಿ.

ಉತ್ತರ: 1–4–2019ರಿಂದ ಎಲ್ಲಾ ವರ್ಗದ ಜನರಿಗೆ ₹ 5 ಲಕ್ಷಗಳ ಆದಾಯದ ತನಕ ತೆರಿಗೆ ವಿನಾಯಿತಿ ಇದೆ. ನಿಮಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೆಕ್ಷನ್‌ 16ರ ಪ್ರಕಾರ ₹ 50 ಸಾವಿರ ಹಾಗೂ ಅಂಚೆ ಕಚೇರಿ ಠೇವಣಿಯಲ್ಲಿ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ₹ 50 ಸಾವಿರ ವಿನಾಯಿತಿ ಇದೆ. ನೀವು ರಿಟರ್ನ್ಸ್‌ ತುಂಬುವ ಅಥವಾ ಆದಾಯ ತೆರಿಗೆ ಕೊಡುವ ಅಗತ್ಯವಿಲ್ಲ. ತೆರಿಗೆ ಭಯದಿಂದ ಹೊರಬಂದು ನೆಮ್ಮದಿಯಿಂದ ಇರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು