ಮುಂಬೈ: ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್–19 (ಕೊರೊನಾ ವೈರಸ್) ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಕುಸಿದಿದೆ. ಇದರ ಪರಿಣಾಮ ಸೋಮವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 2,326.36ಅಂಶಗಳು ಇಳಿಕೆಯಾಗಿದೆ.

ಸೌದಿ ಅರೇಬಿಯಾ, ರಷ್ಯಾಗೆ ಪೈಪೋಟಿ ನೀಡಲು ದರ ಸಮರ ನಡೆಸಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 30ರಷ್ಟು ಇಳಿಕೆಯಾಗಿ ಬ್ಯಾರೆಲ್ಗೆ 32.11 ಡಾಲರ್ (ಅಂದಾಜು ₹2,374) ಆಗಿದೆ. ಷೇರುಪೇಟೆ ವಹಿವಾಟು ಆರಂಭದಿಂದ ಇಳಿಕೆಯಾದ ಸೆನ್ಸೆಕ್ಸ್ಶೇ 6ರಷ್ಟು (2,326.36ಅಂಶ) ಕುಸಿದು35,250.26ಅಂಶಗಳಿಗೆ ಧುಮುಕಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 5.78ರಷ್ಟು (629.70ಅಂಶ) ಕಡಿಮೆಯಾಗಿ 15 ತಿಂಗಳ ಕನಿಷ್ಠ, 10,359.75ಅಂಶಗಳಿಗೆ ತಲುಪಿದೆ.

ಕಳೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 893.99 ಅಂಶ ಕಡಿಮೆಯಾಗಿ 37,576.62 ಅಂಶಕ್ಕೆ ಕುಸಿದಿತ್ತು. ನಿಫ್ಟಿ 279.55 ಅಂಶ ಇಳಿಕೆಯಾಗಿ 10,989.45 ಅಂಶ ಮುಟ್ಟಿತ್ತು.

ಶುಕ್ರವಾರದ ಮಾಹಿತಿ ಪ್ರಕಾರ, ವಿದೇಶ ಸಾಂಸ್ಥಿಕ ಹೂಡಿಕೆದಾರರ ₹3,594.84 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ₹2,543.78 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಇದನ್ನೂ ಓದಿ:ಸೌದಿ ದರ ಸಮರ, ಕಚ್ಚಾ ತೈಲ ಬೆಲೆ ಶೇ 30 ಇಳಿಕೆ: 29 ವರ್ಷಗಳಲ್ಲೇ ಅತಿ ದೊಡ್ಡ ಕುಸಿತ

ಇಂದು ಒಎನ್ಜಿಸಿ ಷೇರು ಶೇ 12ರಷ್ಟು ಕುಸಿಯುವ ಮೂಲಕ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದೆ. ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪವರ್ಗ್ರಿಡ್, ಟಾಟಾ ಸ್ಟೀಲ್, ಎಲ್ಆ್ಯಂಡ್ಟಿ, ಎಸ್ಬಿಐ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಶೇ 4-13ರಷ್ಟು ಇಳಿಕೆಯಾಗಿವೆ. ಅಲ್ಪ ಏರಿಕೆ ಕಂಡಿದ್ದ ಸನ್ ಫರ್ಮಾ ಸಹ ಶೇ 2ರಷ್ಟು ಕುಸಿದಿದೆ. ಕಚ್ಚಾತೈಲ ದರ ಇಳಿಕೆಯಾಗಿರುವುದರಿಂದ, ಹೂಡಿಕೆದಾರರು ರಿಲಯನ್ಸ್ ಷೇರುಗಳಮಾರಾಟಕ್ಕೆ ಮುಂದಾಗಿದ್ದಾರೆ.

ವಿದೇಶಿ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿರುವುದು, ಕೋವಿಡ್–19 ಭೀತಿ ಹೆಚ್ಚುತ್ತಿರುವುದು ಹಾಗೂ ಕಚ್ಚಾ ತೈಲ ದರ ಇಳಿಕೆಯಾಗಿರುವುದು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟ ಒತ್ತಡದಿಂದ ತಲ್ಲಣ ಸೃಷ್ಟಿಯಾಗಿದೆ. ಯೆಸ್ ಬ್ಯಾಂಕ್ ಸಂಬಂಧಿಸಿದ ಬಿಕ್ಕಟ್ಟು ಸಹ ದೇಶ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಉಳಿಸಿದೆ.

ಚೀನಾದ ಶಾಂಘೈ ಷೇರುಪೇಟೆ ಶೇ 2.41 ಇಳಿಕೆಯಾಗಿದೆ. ಹಾಂಕಾಂಗ್ ಷೇರುಪೇಟೆಯಲ್ಲಿ ಶೇ 3.53, ಸೋಲ್ ಷೇರುಪೇಟೆ ಶೇ 3.89 ಹಾಗೂ ಟೋಕಿಯೊ ಷೇರುಪೇಟೆ ಶೇ 5.65ರಷ್ಟು ಕುಸಿದಿದ್ದು, ಇಡೀ ಏಷ್ಯಾ ಷೇರುಪೇಟೆ ಇಳಿಮುಖವಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ₹74.09ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.