ಮುಂಬೈ: ದೀಪಾವಳಿ ಹಬ್ಬಕ್ಕೆ ಮೊದಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರುವುದಾಗಿ ಕೇಂದ್ರ ಸರ್ಕಾರ ಹೇಳಿರುವ ಕಾರಣದಿಂದಾಗಿ ದೇಶದ ಷೇರುಪೇಟೆಯಲ್ಲಿ ಬುಧವಾರವೂ ತೇಜಿ ವಹಿವಾಟು ನಡೆಯಿತು.

ಪ್ರಸ್ತಾವಿತ ಜಿಎಸ್ಟಿ ಸುಧಾರಣೆಯ ಪರಿಣಾಮವಾಗಿ ಐಟಿ ಕಂಪನಿಗಳ ಷೇರು ಖರೀದಿ ಜೋರಾಗಿತ್ತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 213 ಅಂಶ ಏರಿಕೆಯಾಗಿ, 81,857ಕ್ಕೆ ತಲುಪಿದೆ. ವಹಿವಾಟಿನ ನಡುವೆ ಸೂಚ್ಯಂಕವು 341 ಅಂಶದವರೆಗೆ ಜಿಗಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 69 ಅಂಶ ಹೆಚ್ಚಳವಾಗಿ 25,050ಕ್ಕೆ ಕೊನೆಗೊಂಡಿದೆ.

ಇನ್ಫೊಸಿಸ್ ಷೇರುಗಳು ಶೇ 3.88ರಷ್ಟು ಏರಿಕೆ ಕಂಡರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇ 2.69ರಷ್ಟು ಏರಿಕೆ ಕಂಡಿದೆ. ಹಿಂದೂಸ್ತಾನ್ ಯೂನಿಲಿವರ್, ಎನ್ಟಿಪಿಸಿ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಎಟರ್ನಲ್ ಮತ್ತು ಎಚ್ಸಿಎಲ್ ಟೆಕ್ ಸಹ ಲಾಭ ಗಳಿಸಿವೆ. ಆದಾಗ್ಯೂ, ಭಾರತ್ ಎಲೆಕ್ಟ್ರಾನಿಕ್ಸ್, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್ ಮತ್ತು ಟ್ರೆಂಟ್ ನಷ್ಟ ಅನುಭವಿಸಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ ಮತ್ತು ಜಪಾನ್ನ ನಿಕ್ಕಿ 225 ಸೂಚ್ಯಂಕಗಳು ಕುಸಿತ ಕಂಡರೆ, ಶಾಂಘೈನ ಎಸ್ಎಸ್ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಏರಿಕೆ ಕಂಡಿವೆ.

ಯುರೋಪ್ ಮಾರುಕಟ್ಟೆಗಳು ಮಿಶ್ರ ವಹಿವಾಟು ನಡೆಸಿದರೆ, ಅಮೆರಿಕದ ಮಾರುಕಟ್ಟೆಗಳು ಕುಸಿತದೊಂದಿಗೆ ಕೊನೆಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.