ಮುಂಬೈ: ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತವನ್ನು ಕಂಡಿವೆ.

ಜವಳಿ, ಸಾಗರ ಮತ್ತು ಚರ್ಮದಂತಹ ರಫ್ತು ಕ್ಷೇತ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 335.71 ಅಂಶ ಕುಸಿತ ಕಂಡು 80,208.28 ಅಂಶಕ್ಕೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಎನ್ಎಸ್ಇ 114.15 ಅಂಶ ಇಳಿಕೆ ಕಂಡು 24,460.05 ಅಂಶಕ್ಕೆ ತಲುಪಿದೆ.

ಅದಾನಿ ಪೋರ್ಟ್ಸ್, ಟಾಟಾ ಮೋಟಾರ್ಸ್, ಕೋಟಕ್ ಮಹೀಂದ್ರ ಬ್ಯಾಂಕ್, ಎಟರ್ನಲ್, ಟಾಟಾ ಸ್ಟೀಲ್ ಮತ್ತು ಎನ್ಟಿಪಿಸಿ ಕುಸಿತ ಕಂಡಿವೆ.

ಹಾಗಿದ್ದರೂ ಟ್ರೆಂಟ್, ಟೈಟನ್, ಸನ್ ಫಾರ್ಮಾ ಮತ್ತು ಐಟಿಸಿ ಏರಿಕೆ ಕಂಡಿವೆ.

ಏಷ್ಯಾದ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಏರಿಕೆ ಕಂಡಿವೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಅಮೆರಿಕ ಷೇರುಪೇಟೆ ಸಹ ಏರಿಕೆ ಕಂಡಿತ್ತು.

ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಏರಿಸಿರುವುದು 'ಅನ್ಯಾಯ, ಅಸಮರ್ಥನೀಯ ಮತ್ತು ಅತಾರ್ಕಿಕ' ಎಂದು ಭಾರತ ಪ್ರತಿಕ್ರಿಯೆ ನೀಡಿತ್ತು.
.Tariff War | ಚೀನಾದ ಮೇಲೂ ಹೆಚ್ಚುವರಿ ಸುಂಕ: ಡೊನಾಲ್ಡ್ ಟ್ರಂಪ್ ಸೂಚನೆ.ಸೇನಾ ಆಸ್ಪತ್ರೆ ಮೇಲೆ ಇರಾನ್ ದಾಳಿ: ಭಾರಿ ಬೆಲೆ ತೆರಬೇಕಾಗುತ್ತದೆ ಎಂದ ನೆತನ್ಯಾಹು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.