ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಂಗ್‌, ವಾಹನ ಮತ್ತು ಲೋಹ ವಲಯದ ಷೇರುಗಳಿಗೆ ಮಾರಾಟದ ಒತ್ತಡ: ಸೂಚ್ಯಂಕ ಇಳಿಕೆ

Last Updated 10 ಅಕ್ಟೋಬರ್ 2019, 11:55 IST
ಅಕ್ಷರ ಗಾತ್ರ

ಮುಂಬೈ:ದೇಶದ ಷೇರುಪೇಟೆಗಳಲ್ಲಿ ಬ್ಯಾಂಕಿಂಗ್‌, ವಾಹನ ಮತ್ತು ಲೋಹ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ಗುರುವಾರ ನಕಾರಾತ್ಮಕ ವಹಿವಾಟು ನಡೆಯುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಒಂದು ಹಂತದಲ್ಲಿ 375 ಅಂಶಗಳವರೆಗೂ ಇಳಿಕೆಯಾಗಿತ್ತು. ನಂತರ ವಹಿವಾಟು ತುಸು ಚೇತರಿಕೆ ಕಂಡಿದ್ದರಿಂದ297 ಅಂಶಗಳ ಇಳಿಕೆಯೊಂದಿಗೆ 37,880 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 79 ಅಂಶ ಇಳಿಕೆಯಾಗಿ 11,234 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ನಷ್ಟ: ಇಂಡಸ್‌ಇಂಡ್‌ ಬ್ಯಾಂಕ್‌, ಯೆಸ್‌ ಬ್ಯಾಂಕಮ್‌, ಟಾಟಾ ಮೋಟರ್ಸ್‌, ವೇದಾಂತ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಟಾಟಾ ಮೋಟರ್ಸ್‌ ಷೇರುಗಳು ಶೇ 6.15ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಭಾರ್ತಿ ಏರ್‌ಟೆಲ್‌, ರಿಲಯನ್ಸ್‌, ಎಚ್‌ಯುಎಲ್‌, ಎಚ್‌ಸಿಎಲ್‌ ಟೆಕ್‌, ಪವರ್‌ ಗ್ರಿಡ್‌, ಸನ್‌ ಫಾರ್ಮಾ, ಏಷ್ಯನ್‌ ಪೇಂಟ್ಸ್‌ ಮತ್ತು ಬಜಾಜ್‌ ಆಟೊ ಕಂಪನಿ ಷೇರುಗಳು ಶೇ 5.05ರವರೆಗೂ ಏರಿಕೆ ಕಂಡಿವೆ.

ಇಳಿಕೆಗೆ ಕಾರಣ: ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಕಂಪನಿಗಳ ಆರ್ಥಿಕ ಸಾಧನೆಯ ಪ್ರಕಟಣೆ ಆರಂಭವಾಗಿದೆ.

ಇಂಡಸ್‌ಇಂಡ್‌ಬ್ಯಾಂಕ್‌ ಬ್ಯಾಂಕ್‌ ನಿವ್ವಳ ಲಾಭ ಶೇ 52.2ರಷ್ಟು ಏರಿಕೆಯಾಗಿದೆ. ಆದರೆ ವಸೂಲಾಗದ ಸಾಲ ಶೇ 1.09 ರಿಂದ ಶೇ 2.19ಕ್ಕೆ ಏರಿಕೆಯಾಗಿದೆ. ಇದುಕಂಪನಿಗಳ ಗಳಿಕೆಯ ಮುನ್ನೋಟ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎನ್ನುವುದಕ್ಕೆ ಸೂಚನೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ. ಹೀಗಾಗಿಮಾರಾಟದ ಒತ್ತಡ ಕಂಡುಬಂದಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ ಕಂಪನಿಗಳ ಗಳಿಕೆ ಪ್ರಮಾಣ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ಹಣಕಾಸು ಸೇವಾ ಸಂಸ್ಥೆ ಮೋತಿಲಾಲ್‌ ಓಸ್ವಾಲ್‌ ವರದಿ ನೀಡಿದೆ. ಇದೂ ಸಹ ಸೂಚ್ಯಂಕವನ್ನು ಇಳಿಕೆ ಕಾಣುವಂತೆ ಮಾಡಿತು.

ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವೀಸಸ್‌ ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಮುನ್ನೋಟವನ್ನು ಈ ಹಿಂದಿನ ಶೇ 6.2 ರಿಂದ ಶೇ 5.8ಕ್ಕೆ ತಗ್ಗಿಸಿದೆ. ಇದು ಸಹ ನಕಾರಾತ್ಮಕ ಪರಿಣಾಮ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT