ನವದೆಹಲಿ: ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವ (ಐಪಿಒ) ಪ್ರಕ್ರಿಯೆ ಶುರುವಾಗಿದ್ದು, ಕೇಂದ್ರ ಸರ್ಕಾರವು ಮರ್ಚೆಂಟ್ ಬ್ಯಾಂಕರ್ ಹಾಗೂ ಕಾನೂನು ಸಲಹೆ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
ಎಲ್‌ಐಸಿ ಐಪಿಒ ಗಾತ್ರವು ಭಾರತದ ಬಂಡವಾಳ ಮಾರುಕಟ್ಟೆಗಳಲ್ಲಿ ಇದುವರೆಗೆ ನಡೆದಿರುವ ಎಲ್ಲ ಐಪಿಒಗಳಿಗಿಂತ ಬಹಳ ದೊಡ್ಡದಾಗಿರುವ ನಿರೀಕ್ಷೆ ಇದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ಹೇಳಿದೆ.
ಷೇರುಗಳ ಮಾರಾಟಕ್ಕೆ ಸಂಬಂಧಿಸಿದಂತೆ ತನಗೆ ನೆರವಾಗಲು ಇಲಾಖೆಯು ಗರಿಷ್ಠ 10 ಮರ್ಚೆಂಟ್ ಬ್ಯಾಂಕರ್‌ಗಳನ್ನು ಹಾಗೂ ಒಂದು ಕಾನೂನು ಸಲಹಾ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳಲಿದೆ.
ಮರ್ಚೆಂಟ್ ಬ್ಯಾಂಕರ್‌ಗಳು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಬೇಕಿರುವ ದಾಖಲೆಗಳನ್ನು ಸಿದ್ಧಪಡಿಸುವ, ಹೂಡಿಕೆದಾರರನ್ನು ಸೆಳೆಯಲು ರೋಡ್‌ಷೋ ನಡೆಸುವ, ಐಪಿಒ ಯಾವಾಗ ನಡೆದರೆ ಸೂಕ್ತ ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡುವ ಕೆಲಸಗಳನ್ನು ನಿಭಾಯಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.