ಮಂಗಳವಾರ, ಮೇ 26, 2020
27 °C

ಕೊರೊನಾ ವೈರಸ್‌ ಪರಿಣಾಮ: 1,375 ಅಂಶ ಪತನ ಕಂಡ ಸಂವೇದಿ ಸೂಚ್ಯಂಕ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 1,375 ಅಂಶಗಳ ಪತನಗೊಂಡಿತು.

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ದೇಶಿ ಷೇರುಪೇಟೆಗಳಲ್ಲಿನ ಆತಂಕಕಾರಿ ಮನಸ್ಥಿತಿಯು  ಮುಂದುವರೆದಿದೆ. ಬ್ಯಾಂಕ್‌, ಹಣಕಾಸು ಮತ್ತು ವಾಹನ ತಯಾರಿಕಾ ಕಂಪನಿಗಳ ಷೇರುಗಳಲ್ಲಿ ಮಾರಾಟ ಒತ್ತಡ ಕಂಡುಬಂದಿತು.

ಹಲವಾರು ರೇಟಿಂಗ್‌ ಸಂಸ್ಥೆಗಳು ದೇಶದ ಆರ್ಥಿಕ ವೃದ್ಧಿ ದರದ ಮುನ್ನೋಟವನ್ನು ತಗ್ಗಿಸಿರುವುದರಿಂದ ಹೂಡಿಕೆದಾರರು ಮಾರಾಟಕ್ಕೆ ಮುಗಿಬಿದ್ದರು. ಹೀಗಾಗಿ ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕವು 1,500 ಅಂಶಗಳವರೆಗೆ ಕುಸಿತ ಕಂಡಿತ್ತು. ದಿನದಂತ್ಯಕ್ಕೆ 1,375 ಅಂಶ ಕಳೆದುಕೊಂಡು (ಶೇ 4.61) 28,440 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 379 ಅಂಶಗಳಿಗೆ ಎರವಾಗಿ (ಶೇ 4.38) 8,281 ಅಂಶಗಳಲ್ಲಿ ಅಂತ್ಯಗೊಂಡಿತು.

ಜಾಗತಿಕ ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ವಹಿವಾಟು ಕುಸಿತದ ಆತಂಕವನ್ನು ಕೊರೊನಾ ವೈರಸ್‌ ತೀವ್ರಗೊಳಿಸಿದೆ.

ರೂಪಾಯಿ 70 ಪೈಸೆ ಕುಸಿತ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು 70 ಪೈಸೆ ಇಳಿಕೆಯಾಗಿ ₹ 75.59ಕ್ಕೆ ಕುಸಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು